
ಸಿಡ್ನಿ: ಆಸ್ಟ್ರೇಲಿಯಾ ವಿರುದ್ಧದ ಪಿಂಕ್ ಬಾಲ್ ಟೆಸ್ಟ್ ಅಭ್ಯಾಸ ಪಂದ್ಯದಲ್ಲಿ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಆಡುತ್ತಿಲ್ಲ. ಸಿಡ್ನಿ ಕ್ರಿಕೆಟ್ ಗ್ರೌಂಡ್‌ನಲ್ಲಿ ಡಿಸೆಂಬರ್ 11ರಿಂದ 13ರ ವರೆಗೆ ನಡೆಯುತ್ತಿರುವ ವಾರ್ಮ್‌ಅಪ್ ಪಂದ್ಯದಲ್ಲಿ ಕೊಹ್ಲಿ ಆಡುವ ತಂಡದಲ್ಲಿ ಕಾಣಿಸಿಕೊಂಡಿಲ್ಲ. ಟಾಸ್ ಗೆದ್ದಿರುವ ಭಾರತ ಬ್ಯಾಟಿಂಗ್ ಆಯ್ದುಕೊಂಡಿತ್ತು.
ನಾಲ್ಕು ಪಂದ್ಯಗಳ ಟೆಸ್ಟ್ ಸರಣಿ ಡಿಸೆಂಬರ್ 17ರಿಂದ ಆರಂಭಗೊಳ್ಳಲಿದೆ. ಆರಂಭಿಕ ಪಂದ್ಯವೇ ಪಿಂಕ್‌ಬಾಲ್ ಟೆಸ್ಟ್ ಆಗಿರಲಿದೆ. ಈ ಪಂದ್ಯದಲ್ಲಿ ಪಾಲ್ಗೊಂಡ ಬಳಿಕ ವಿರಾಟ್ ಕೊಹ್ಲಿ ಪಿತೃತ್ವ ರಜೆ ಪಡೆದುಕೊಳ್ಳಲಿದ್ದಾರೆ. 24ನೇ ಓವರ್ ಮುಕ್ತಾಯಕ್ಕೆ ಭಾರತ 5 ವಿಕೆಟ್ ಕಳೆದು 106 ರನ್ ಗಳಿಸಿತ್ತು. ವೃದ್ಧಿಮಾನ್ ಸಹಾ, ರಿಷಭ್ ಪಂತ್ ಆಡುತ್ತಿದ್ದರು. ಪೃಥ್ವಿ ಶಾ (40 ರನ್), ಮಯಾಂಕ್ ಅಗರ್ವಾಲ್ (2), ಶುಬ್ಮನ್ ಗಿಲ್ (43), ಹನುಮ ವಿಹಾರಿ (15), ಅಜಿಂಕ್ಯ ರಹಾನೆ (4) ಔಟ್ಆ ಗಿದ್ದರು.
ಭಾರತ ತಂಡ: ಪೃಥ್ವಿ ಶಾ, ಮಾಯಾಂಕ್ ಅಗರ್ವಾಲ್, ಶುಬ್ಮನ್ ಗಿಲ್, ಅಜಿಂಕ್ಯ ರಹಾನೆ (ಸಿ), ಹನುಮಾ ವಿಹಾರಿ, ರಿಷಭ್ ಪಂತ್ (ವಿಕೆ), ವೃದ್ಧಿಮಾನ್ ಸಹಾ, ನವದೀಪ್ ಸೈನಿ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಜಸ್ಪ್ರೀತ್ ಬೂಮ್ರಾ.
ಆಸ್ಟ್ರೇಲಿಯಾ ತಂಡ: ಜೋ ಬರ್ನ್ಸ್, ಮಾರ್ಕಸ್ ಹ್ಯಾರಿಸ್, ನಿಕ್ ಮ್ಯಾಡಿನ್ಸನ್, ಬೆನ್ ಮೆಕ್‌ಡರ್ಮೊಟ್, ಕ್ಯಾಮೆರಾನ್ ಗ್ರೀನ್, ಜ್ಯಾಕ್ ವೈಲ್ಡ್‌ಮತ್, ಅಲೆಕ್ಸ್ ಕ್ಯಾರಿ (ಸಿ & ವಿಕೆ), ಸೀನ್ ಅಬಾಟ್, ವಿಲ್ ಸದರ್ಲ್ಯಾಂಡ್, ಮಿಚೆಲ್ ಸ್ವೆಪ್ಸನ್, ಹ್ಯಾರಿ ಕಾನ್ವೇ.