Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಭಾರತ vs ಆಸೀಸ್: 'ಬೀಬಿ ಕೇರ್ ಶಾಪ್‌'ಗೆ ಭೇಟಿ ನೀಡಿದ ವಿರಾಟ್ ಕೊಹ್ಲಿ

India vs Australia: Virat Kohli Visited babys care shop in Sydney

ಸಿಡ್ನಿ: ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತಮ್ಮ ಕುಟುಂಬಕ್ಕೆ ಹೊಸ ಸದಸ್ಯನನ್ನು ಬರ ಮಾಡಿಕೊಳ್ಳಲು ತಯಾರಿ ನಡೆಸುತ್ತಿದ್ದಾರೆ. ಅಪ್ಪನಾಗಲಿರುವ ಕೊಹ್ಲಿ ಸಿಡ್ನಿಯಲ್ಲಿರುವ ಬೇಬಿ ಕೇರ್ ಶಾಪ್‌ ಒಂದಕ್ಕೆ ಸೋಮವಾರ (ಡಿಸೆಂಬರ್ 7) ಭೇಟಿ ನೀಡಿದ್ದಾರೆ.

ಪ್ರವಾಸ ಸರಣಿಯ ನಿಮಿತ್ತ ಸದ್ಯ ಭಾರತ ಕ್ರಿಕೆಟ್ ತಂಡ ಆಸ್ಟ್ರೇಲಿಯಾದಲ್ಲಿದೆ. ಮೂರು ಪಂದ್ಯಗಳ ಏಕದಿನ ಸರಣಿಯನ್ನು 2-1ರಿಂದ ಕಳೆದುಕೊಂಡಿರುವ ಭಾರತ, ಮೂರು ಪಂದ್ಯಗಳ ಟಿ20ಐ ಸರಣಿಯನ್ನು 2-0ಯಿಂದ ಗೆದ್ದುಕೊಂಡಿದೆ. ಕಡೇಯ ಟಿ20ಐ ಪಂದ್ಯ ಡಿಸೆಂಬರ್ 8ರ ಮಂಗಳವಾರ ನಡೆಯಲಿದೆ.

ವಿರಾಟ್ ಕೊಹ್ಲಿ ಪತ್ನಿ, ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಅವರು ಗರ್ಭಿಣಿಯಾಗಿದ್ದು, ಜನವರಿಯಲ್ಲಿ ಮಗುವಿಗೆ ಜನ್ಮ ನೀಡುವ ನಿರೀಕ್ಷೆಯಿದೆ. ಹೀಗಾಗಿ ಆಸ್ಟ್ರೇಲಿಯಾ ಪ್ರವಾಸ ಸರಣಿಯ ಮಧ್ಯೆ ಪಿತೃತ್ವ ರಜೆ ಮಂಜೂರು ಮಾಡಿಸಿಕೊಂಡಿರುವ ಕೊಹ್ಲಿ, ನಿಯಮಿತ ಓವರ್‌ಗಳ ಕ್ರಿಕೆಟ್ ಸರಣಿ ಮುಕ್ತಾಯದ ಬಳಿಕ ಆರಂಭಿಕ ಟೆಸ್ಟ್‌ನಲ್ಲಿ ಆಡಿ ಬಳಿಕ ರಜೆ ಪಡೆಯಲಿದ್ದಾರೆ.

ಕಿಂಗ್ ಕೊಹ್ಲಿ ಸಿಡ್ನಿಯಲ್ಲಿರುವ ಬೇಬಿ ಕೇರ್ ಶಾಪ್‌ಗೆ ಭೇಟಿ ನೀಡಿರುವ ಚಿತ್ರ ಟ್ವಿಟರ್‌ನಲ್ಲಿದೆ. ಕೊಹ್ಲಿ ಜೊತೆಗೆ ಭಾರತದ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಕೂಡ ಇದ್ದಾರೆ. ವಿರಾಟ್-ಅನುಷ್ಕಾ ಜೋಡಿ 2017ರ ಡಿಸೆಂಬರ್ 11ರಂದು ದಾಂಪತ್ಯ ಬದುಕಿಗೆ ಕಾಲಿರಿಸಿತ್ತು.

Story first published: Tuesday, December 8, 2020, 13:08 [IST]
Other articles published on Dec 8, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+