Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಟೆಸ್ಟ್‌ ಕ್ರಿಕೆಟ್‌ನಲ್ಲಿ 500 ವಿಕೆಟ್ ಗಡಿ ದಾಟುವಾಸೆ: ನೇಥನ್ ಲಿಯಾನ್

India vs Australia: Want to go beyond 500 Test wickets, says Nathan Lyon

ಸಿಡ್ನಿ: ಆಸ್ಟ್ರೇಲಿಯಾದ ಪ್ರಮುಖ ಸ್ಪಿನ್ನರ್ ನೇಥನ್ ಲಿಯಾನ್ ಕೊರೊನಾವೈರಸ್ ಕಾರಣ ಟೆಸ್ಟ್ ಕ್ರಿಕೆಟ್‌ ಅನ್ನು ಮಿಸ್ ಮಾಡಿಕೊಂಡಿದ್ದರು. ಮತ್ತೀಗ ಭಾರತ-ಆಸ್ಟ್ರೇಲಿಯಾ ಸರಣಿಯ ಮೂಲಕ ನೇಥನ್ ಕ್ರಿಕೆಟ್ ಅಂಗಳಕ್ಕೆ ಇಳಿಯುವವರಿದ್ದಾರೆ. ಭಾರತದ ವಿರುದ್ಧದ ಸರಣಿಗೂ ಮುನ್ನ ತನಗೆ ಟೆಸ್ಟ್ ಕ್ರಿಕೆಟ್‌ನಲ್ಲಿ 500 ವಿಕೆಟ್‌ ಗಡಿ ದಾಟುವ ಬಯಕೆ ಹೆಚ್ಚಾಗುತ್ತಿದೆ ಎಂದು ಲಿಯಾನ್ ಹೇಳಿದ್ದಾರೆ.

96 ಟೆಸ್ಟ್ ಪಂದ್ಯಗಳನ್ನಾಡಿರುವ ನೇಥನ್ ಲಿಯಾನ್, 390 ವಿಕೆಟ್‌ಗಳನ್ನು ಪಡೆದಿದ್ದಾರೆ. 29 ಏಕದಿನ ಪಂದ್ಯಗಳಲ್ಲಿ 29 ವಿಕೆಟ್, 2 ಟಿ20ಐ ಪಂದ್ಯಗಳಲ್ಲಿ 1 ವಿಕೆಟ್ ಪಡೆದಿದ್ದಾರೆ. ಈ ಬೌಲಿಂಗ್ ಸಾಧನೆ ಆಸ್ಟ್ರೇಲಿಯಾ ಸ್ಪಿನ್ನರ್‌ಗಳಲ್ಲಿ ಉತ್ತಮ ಸಾಧನೆಯಾಗಿ ಕಾಣಿಸಿದೆ.

'ನಾನು ಇನ್ನಷ್ಟು ಉತ್ತಮಗೊಳ್ಳುತ್ತಿದ್ದೇನೆ. ಆಸ್ಟ್ರೇಲಿಯಾಕ್ಕೆ ಇನ್ನೂ ಹೆಚ್ಚಿನ ವಿಕೆಟ್‌ ಪಡೆಯಲಿದ್ದೇನೆ ಎಂದು ನನಗನ್ನಿಸುತ್ತಿದೆ. ಖಂಡಿತವಾಗಿಯೂ 500ಕ್ಕೂ ಹೆಚ್ಚು ವಿಕೆಟ್ ಪಡೆಯೋ ಗುರಿ ನನ್ನದು,' ಎಂದು ಫಾಕ್ಸ್‌ಸ್ಪೋರ್ಟ್ಸ್ ಜೊತೆ ಮಾತನಾಡಿದ ಲಿಯಾನ್ ಹೇಳಿದ್ದಾರೆ.

33ರ ಹರೆಯದ ಲಿಯಾನ್ ಇನ್ನು 4 ಟೆಸ್ಟ್ ಪಂದ್ಯಗಳನ್ನಾಡಿದರೆ 100 ಪಂದ್ಯಗಳ ದಾಖಲೆ ಪೂರ್ಣಗೊಳ್ಳಲಿದೆ. ಭಾರತ-ಆಸ್ಟ್ರೇಲಿಯಾ ಟೆಸ್ಟ್ ಸರಣಿ ನಾಲ್ಕು ಪಂದ್ಯಗಳದ್ದಾದ್ದರಿಂದ ಲಿಯಾನ್ ದಾಖಲೆಯ ಬರೆಯುವ ನಿರೀಕ್ಷೆಯಿದೆ. ಲಿಯಾನ್ 4 ಪಂದ್ಯಗಳನ್ನು ಆಡಿದರೆ ಆಸ್ಟ್ರೇಲಿಯಾ ಪರ 100 ಟೆಸ್ಟ್ ಪಂದ್ಯಗಳನ್ನಾಡಿದ 10ನೇ ಆಟಗಾರರಾಗಿ ಗುರುತಿಸಿಕೊಳ್ಳಲಿದ್ದಾರೆ.

Story first published: Friday, November 20, 2020, 13:10 [IST]
Other articles published on Nov 20, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+