ICC Women's World Cup Semi Final: ಫೈನಲ್‌ಗಾಗಿ ಭಾರತ, ಆಸ್ಟ್ರೇಲಿಯಾ ಹೋರಾಟ
ಮಹಿಳಾ ಏಕದಿನ ಕ್ರಿಕೆಟ್ ಕೊನೆಯ ಘಟ್ಟಕ್ಕೆ ಬಂದು ನಿಂತಿದೆ. ಈಗ ಸೆಮಿಫೈನಲ್ ಪಂದ್ಯಗಳು ನಡೆಯುತ್ತಿವೆ. ನವಿ ಮುಂಬೈನಲ್ಲಿ ನಡೆಯಲಿರುವ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಕಾದಟ ನಡೆಸಲಿವೆ. ಈ ಪಂದ್ಯದಲ್ಲಿ ಜಯ ಸಾಧಿಸಿದ ತಂಡ ನವೆಂಬರ್ 2 ರಂದು ದಕ್ಷಿಣ ಆಫ್ರಿಕಾ ವಿರುದ್ಧ ಪ್ರಶಸ್ತಿಗಾಗಿ ಕಾದಟ ನಡೆಸಲಿದೆ.
ಅಂಕಿ ಅಂಶಗಳ ಲೆಕ್ಕಾಚಾರದಲ್ಲಿ ಆಸ್ಟ್ರೇಲಿಯಾ ಬಲಾಢ್ಯವಾಗಿದೆ. ಆದರೆ ಪ್ರಸಕ್ತ ಫಾರ್ಮ್ ಭಾರತ ತಂಡದ್ದೂ ಅಮೋಘವಾಗಿದೆ. ಆದರೆ ಲೀಗ್ ಹಂತದಲ್ಲಿ ಭಾರತ, ಆಸ್ಟ್ರೇಲಿಯಾ ವಿರುದ್ಧ ನಿರಾಸೆ ಅನುಭವಿಸಿತ್ತು. ಸೆಮಿಫೈನಲ್ ಪಂದ್ಯದಲ್ಲಿ ಸ್ಥಿರ ಪ್ರದರ್ಶನ ನೀಡಿ ಫೈನಲ್‌ಗೆ ಪ್ರವೇಶಿಸುವ ಆಸೆಯನ್ನು ಹೊಂದಿದೆ. ಈ ಮೂಲಕ 3ನೇ ಬಾರಿಗೆ ಫೈನಲ್ ಪ್ರವೇಶಿಸಿ, ಚೊಚ್ಚಲ ಬಾರಿಗೆ ಪ್ರಶಸ್ತಿ ಎತ್ತುವ ಕನಸು ಹೊಂದಿದೆ.ಉಭಯ ತಂಡಗಳಲ್ಲಿ ಸ್ಟಾರ್ ಆಟಗಾರ್ತಿಯರು ಇದ್ದು ಕುತೂಹ ಹೆಚ್ಚಿಸಿದೆ. ಇನ್ನು ಎರಡನೇ ಸೆಮಿಫೈನಲ್ ಪಂದ್ಯಕ್ಕೆ ಮಳೆ ಕಾಟ ನೀಡುವ ಸಾಧ್ಯತೆ ಇದೆ. ಹೀಗಾಗಿ ಟಾಸ್ ಮಹತ್ವದ ಪಾತ್ರವನ್ನು ವಹಿಸಲಿದೆ.

ಸ್ಮೃತಿ ಮಂಧಾನ ಅವರ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಇವರು ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಅಬ್ಬರದ ಶತಕ ಬಾರಿಸಿದ್ದರು. ಅಲ್ಲದೆ ಆಸ್ಟ್ರೇಲಿಯಾಕ್ಕೆ ಇವರು ಭಯ ಹುಟ್ಟಿಸಿರುವ ಆಟಗಾರ್ತಿ. ಆಸೀಸ್ ವಿರುದ್ಧ ಆಡಿದ ಐದೂ ಪಂದ್ಯಗಳಲ್ಲಿ ಅಬ್ಬರದ ಆಟವನ್ನು ಆಡಿ ಅಬ್ಬರಿಸಿದ್ದರು. ಹೀಗಾಗಿ ಇವರ ಮೇಲೆ ಎಲ್ಲರ ಚಿತ್ತ ನೆಟ್ಟಿದೆ.
ಭಾರತದ ಸ್ಟಾರ್ ಆರಂಭಿಕ ಆಟಗಾರ್ತಿ ಪ್ರತಿಕಾ ರಾವಲ್ ಗಾಯಕ್ಕೆ ತುತ್ತಾಗಿದ್ದು, ಇವರ ಬದಲಿಗೆ ಶೆಫಾಲಿ ವರ್ಮಾ ಇನಿಂಗ್ಸ್ ಆರಂಭಿಸುವ ಸಾಧ್ಯತೆ ಇದೆ. ಇನ್ನು ಮಧ್ಯಮ ಕ್ರಮಾಂಕದಲ್ಲಿ ರಿಚಾ ಘೋಷ್ ಸಹ ಎದುರಾಳಿಗಳನ್ನು ಕಾಡಬ್ಲರು. ನಾಯಕಿ ಹರ್ಮನ್ ಪ್ರೀತ್ ಕೌರ್, ಅಮನ್‌ಜೋತ್ ಕೌರ್, ಜೆಮಿಮಾ ರೋಡ್ರಿಗಾಸ್, ಹರ್ಲೀನ್ ಡಿಯೋಲ್ ತಂಡಕ್ಕೆ ಸ್ಥಿರ ಪ್ರದರ್ಶನ ನೀಡಿ ಆಧಾರವಾಗಬೇಕಿದೆ.
ಭಾರತದ ಪರ ಹೆಚ್ಚು ರನ್ ಕಲೆ ಹಾಕಿದ ಆಟಗಾರ್ತಿಯರು
ಸ್ಮೃತಿ ಮಂಧಾನ, 365 ರನ್
ಪ್ರತಿಕಾ ರಾವಲ್, 308 ರನ್
ರಿಚಾ ಘೋಷ್, 175 ರನ್
ವೇಗದ ಬೌಲರ್‌ಗಳಾಗಿ ಕ್ರಾಂತಿ ಗೌಡ, ರೇಣುಕಾ ಸಿಂಗ್ ತಮ್ಮ ಬಿಗುವಿನ ದಾಳಿಯ ಮೂಲಕ ಎದುರಾಳಿಗಳನ್ನು ಕಾಡಬಲ್ಲರು. ಇನ್ನು ಸ್ಪಿನ್ ಬೌಲರ್ ಆಗಿ ದೀಪ್ತಿ ಶರ್ಮಾ, ಸ್ನೇಹಾ ರಾಣ, ಶ್ರೀ ಚರಣಿ ತಮ್ಮ ಪಿರ್ಕಿ ಮೂಲಕ ಆಸೀಸ ಬ್ಯಾಟರ್‌ಗಳನ್ನು ಕಾಡಬೇಕಿದೆ ಅಂದಾಗ ಮಾತ್ರ ಗೆಲುವಿನ ಕನಸು ನನಸಾಗುತ್ತದೆ.
ಭಾರತ ಸಂಭಾವ್ಯ ತಂಡ: ಸ್ಮೃತಿ ಮಂಧಾನ, ಶಫಾಲಿ ವರ್ಮಾ, ಹರ್ಲೀನ್ ಡಿಯೋಲ್, ಹರ್ಮನ್‌ಪ್ರೀತ್ ಕೌರ್ (ನಾಯಕಿ), ಜೆಮಿಮಾ ರೋಡ್ರಿಗಸ್, ರಿಚಾ ಘೋಷ್ (ವಿಕೆಟ್ ಕೀಪರ್), ದೀಪ್ತಿ ಶರ್ಮಾ, ಸ್ನೇಹ್ ರಾಣಾ, ಕ್ರಾಂತಿ ಗೌಡ್, ಶ್ರೀ ಚರಣಿ, ರೇಣುಕಾ ಸಿಂಗ್.

ಸ್ಟಾರ್ ಆಟಗಾರ್ತಿಯರ ಬಲ
ಮಹಿಳಾ ಏಕದಿನ ಕ್ರಿಕೆಟ್‌ನಲ್ಲಿ ಆಸ್ಟ್ರೇಲಿಯಾ 7 ಬಾರಿ ಚಾಂಪಿಯನ್ ಪಟ್ವವನ್ನು ಅಲಂಕರಿಸಿದೆ. ಸೆಮಿಫೈನಲ್ ಪಂದ್ಯದಲ್ಲಿ ಭಾರತ ತಂಡವನ್ನು ಮಣಿಸಿ ಫೈನಲ್‌ಗೆ ಏರುವ ಕನಸು ಕಾಣುತ್ತಿದೆ. ಒತ್ತಡವನ್ನು ಮೆಟ್ಟಿ ನಿಲ್ಲುವ ಕ್ಷಮತೆ ಆಸೀಸ್ ಆಟಗಾರ್ತಿಯರಿಗಿದೆ. ಅಲ್ಲದೆ ತಂಡದಲ್ಲಿ ಸ್ಟಾರ್ ಆಟಗಾರ್ತಿಯರ ದಂಡೇ ಇದ್ದು ಯಾವುದೇ ಕ್ಷಣದಲ್ಲೂ ಪಂದ್ಯದ ಗತಿಯನ್ನೇ ಬದಲಿಸಬಲ್ಲರು.
ಆಸ್ಟ್ರೇಲಿಯಾ ಸಂಭಾವ್ಯ ತಂಡ: ಅಲಿಸ್ಸಾ ಹೀಲಿ (ನಾಯಕಿ ಮತ್ತು ವಿಕೆಟ್ ಕೀಪರ್), ಫೋಬ್ ಲಿಚ್‌ಫೀಲ್ಡ್, ಎಲ್ಲಿಸ್ ಪೆರಿ, ಅನ್ನಾಬೆಲ್ ಸಥರ್ಲ್ಯಾಂಡ್, ಬೆತ್ ಮೂನಿ, ಆಶ್ಲೀ ಗಾರ್ಡ್ನರ್, ತಾಹಲಿಯಾ ಮೆಕ್‌ಗ್ರಾತ್, ಸೋಫಿ ಮೊಲಿನೆಕ್ಸ್, ಅಲಾನಾ ಕಿಂಗ್, ಕಿಮ್ ಗಾರ್ತ್, ಮೇಗನ್ ಶಟ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications