ಭಾರತ vs ಆಸೀಸ್: ರಿಷಭ್ ಪಂತ್ ಬದಲು ಸಹಾಗೆ ಆದ್ಯತೆ ಸಾಧ್ಯತೆ

ಸಿಡ್ನಿ: ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿ ಆರಂಭಿಕ ಪಂದ್ಯದಲ್ಲಿ ಯುವ ಬ್ಯಾಟ್ಸ್‌ಮನ್ ರಿಷಭ್ ಪಂತ್ ಬದಲಿಗೆ ಅನುಭವಿ ಬ್ಯಾಟ್ಸ್‌ಮನ್ ವೃದ್ಧಿಮಾನ್ ಸಹಾಗೆ ವಿಕೆಟ್ ಕೀಪಿಂಗ್‌ನಲ್ಲಿ ಆದ್ಯತೆ ನೀಡುವ ಸಾಧ್ಯತೆಯಿದೆ. ಟೆಸ್ಟ್ ಕ್ರಿಕೆಟ್‌ನಲ್ಲಿ ವಿಕೆಟ್ ಕೀಪಿಂಗ್ ವಿಚಾರದಲ್ಲಿ ವೃದ್ಧಿಮಾನ್ ಅವರೇ ಉನ್ನತ ಸ್ಥಾನದಲ್ಲಿದ್ದಾರೆ. ಹೀಗಾಗಿ ಮೊದಲ ಪಂದ್ಯದಲ್ಲಿ ಸಹಾ ಪ್ಲೇಯಿಂಗ್ XIನಲ್ಲಿ ಕಾಣಿಸಿಕೊಳ್ಳುವ ನಿರೀಕ್ಷೆಯಿದೆ.
ಭಾರತ-ಆಸ್ಟ್ರೇಲಿಯಾ ನಡುವಿನ ನಾಲ್ಕು ಪಂದ್ಯಗಳ ಕುತೂಹಲಕಾರಿ ಟೆಸ್ಟ್ ಪಂದ್ಯದಲ್ಲಿ ಅದರಲ್ಲೂ ಆರಂಭಿಕ ಟೆಸ್ಟ್‌ನಲ್ಲಿ ವಿಕೆಟ್ ಕೀಪಿಂಗ್ ಜವಾಬ್ದಾರಿ ಯಾರಿಗೆ ಸಿಗಬಹುದು ಎಂದು ಕ್ರಿಕೆಟ್ ವಯಲದಲ್ಲಿ ಚರ್ಚೆಗಳಾಗುತ್ತಿವೆ. 36ರ ಹರೆಯದ ವೃದ್ಧಿಮಾನ್ ಸಹಾ ಹೆಗಲಿಗೆ ಕೀಪಿಂಗ್ ಜವಾಬ್ದಾರಿ ಬೀಳುತ್ತಾ ಇಲ್ಲ 23ರ ಹರೆಯದ ಪಂತ್ ಕೀಪಿಂಗ್ ಮಾಡ್ತಾರಾ ಎಂದು ಕ್ರಿಕೆಟ್ ಅಭಿಮಾನಿಗಳು ಮಾತನಾಡಿಕೊಳ್ಳುತ್ತಿದ್ದಾರೆ.
ವಿಕೆಟ್ ಕೀಪಿಂಗ್ ಮತ್ತು ಬ್ಯಾಟಿಂಗ್ ಎರಡೂ ವಿಚಾರದಲ್ಲಿ ಪಂತ್‌ಗಿಂತ ಸಹಾ ಮೇಲಿದ್ದಾರೆ. ಟೀಮ್ ಇಂಡಿಯಾ ಕೋಚ್ ರವಿ ಶಾಸ್ತ್ರಿ, ನಾಯಕ ವಿರಾಟ್ ಕೊಹ್ಲಿ, ಸಹ ಕೋಚ್‌ಗಳಾದ ವಿಕ್ರಮ್ ರಾಥೋರ್, ಭರತ್ ಅರುಣ್, ಆಯ್ಕೆದಾರ ಹರ್ವೀಂದರ್ ಸಿಂಗ್ ಅವರು ಸಹಾ ಮತ್ತು ಪಂತ್ ಸಾಧನೆಗಳನ್ನು ಪರಿಶೀಲಿಸುತ್ತಿದ್ದಾರೆ. ಅಂತಿಮ ನಿರ್ಧಾರ ಇನ್ನಷ್ಟೇ ಗೊತ್ತಾಗಬೇಕಿದೆ.
ಆಸ್ಟ್ರೇಲಿಯಾಕ್ಕೆ ಪ್ರವಾಸ ಕೈಗೊಂಡಿರುವ ಭಾರತ ಕ್ರಿಕೆಟ್ ತಂಡ ಆತಿಥೇಯರ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 2-1ರ ಹಿನ್ನಡೆ ಕಂಡಿತ್ತು. ಟಿ20ಐ ಸರಣಿಯಲ್ಲಿ 2-1ರ ಜಯ ಕಂಡಿತ್ತು. ಇನ್ನು ಡಿಸೆಂಬರ್ 17ರಿಂದ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿ ಆರಂಭಗೊಳ್ಳಲಿದೆ. ಮೊದಲ ಟೆಸ್ಟ್ ಪಂದ್ಯ ಡೇ/ನೈಟ್ ಟೆಸ್ಟ್ ಅಥವಾ ಪಿಂಕ್‌ಬಾಲ್ ಟೆಸ್ಟ್ ಆಗಿರಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications