ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ vs ಬಾಂಗ್ಲಾದೇಶ: ಏಕದಿನ ಸರಣಿಯಲ್ಲಿ ರವೀಂದ್ರ ಜಡೇಜಾ ಬದಲಿಗೆ ಶಹ್ಬಾಜ್ ಅಹ್ಮದ್ ಆಯ್ಕೆ

India vs Bangladesh: all-rounder Ravindra Jadeja replaced by Shahbaz Ahmed for ODI series against Bangladesh

ಡಿಸೆಂಬರ್ ತಿಂಗಳಿನಲ್ಲಿ ಭಾರತದ ಬಾಂಗ್ಲಾದೇಶ ಪ್ರವಾಸದಿಂದ ರವೀಂದ್ರ ಜಡೇಜಾ ಹೊರಗುಳಿದಿದ್ದಾರೆ. ಗಾಯದಿಂದ ಚೇತರಿಕೆ ಕಾಣದ ಹಿನ್ನೆಲೆಯಲ್ಲಿ ರವೀಂದ್ರ ಜಡೇಜಾ ಬದಲಿಗೆ ಏಕದಿನ ಕ್ರಿಕೆಟ್ ಮಾದರಿಗೆ ಬದಲಿ ಆಟಗಾರನನ್ನು ಇಂದು ಆಯ್ಕೆ ಮಾಡಲಾಗಿದೆ. ಆಲ್‌ರೌಂಡರ್ ಶಹ್ಬಾಜ್ ಅಹ್ಮದ್ ಅವರನ್ನು ಏಕದಿನ ಸರಣಿಗೆ ಸೇರ್ಪಡೆಗೊಳಿಸಲಾಗಿದೆ. ಇನ್ನು ಈ ಸರಣಿಗೆ ಆಯ್ಕೆಯಾಗಿದ್ದ ಯಶ್ ದಯಾಳ್ ಕೂಡ ಅಲಭ್ಯವಾಗಿದ್ದು ಅವರ ಬದಲಿಗೆ ಕುಲ್‌ದೀಪ್ ಸೇನ್‌ಗೆ ಅವಕಾಶ ದೊರೆತಿದೆ.

ಯಶ್ ದಯಾಳ್ ಬೆನ್ನು ನೋವಿನ ಕಾರಣದಿಂದಾಗಿ ಈ ಸರಣಿಯಿಂದ ಹೊರಗುಳಿಯುತ್ತಿದ್ದಾರೆ. ಇನ್ನು ರವೀಂದ್ರ ಜಡೇಜಾ ಏಷ್ಯಾ ಕಪ್ ಟೂರ್ನಿಯ ಸಂದರ್ಭದಲ್ಲಿ ಮೊಣಕಾಲಿನ ಗಾಯಕ್ಕೆ ತುತ್ತಾಗಿದ್ದು ಇನ್ನೂ ಸಂಪೂರ್ಣವಾಗಿ ಚೇತರಿಕೆ ಕಾಣದ ಕಾರಣ ಈ ಸರಣಿಗೆ ಅಲಭ್ಯವಾಗಿದ್ದಾರೆ.

IND vs NZ: ಸಿರಾಜ್ ನಾನು ಬಯಸಿದ್ದನ್ನು ನಿಖರವಾಗಿ ಮಾಡಿದ; ಆರ್‌ಸಿಬಿ ಬೌಲರ್‌ಗೆ ಪಾಂಡ್ಯ ಶ್ಲಾಘನೆIND vs NZ: ಸಿರಾಜ್ ನಾನು ಬಯಸಿದ್ದನ್ನು ನಿಖರವಾಗಿ ಮಾಡಿದ; ಆರ್‌ಸಿಬಿ ಬೌಲರ್‌ಗೆ ಪಾಂಡ್ಯ ಶ್ಲಾಘನೆ

ಬಾಂಗ್ಲಾದೇಶ ವಿರುದ್ಧದ ಏಕದಿನ ಸರನಿಗೆ ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪ ನಾಯಕ), ಶಿಖರ್ ಧವನ್, ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ಶ್ರೇಯಸ್ ಅಯ್ಯರ್, ರಾಹುಲ್ ತ್ರಿಪಾಠಿ, ರಿಷಬ್ ಪಂತ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ಶಹಬಾಜ್ ಅಹ್ಮದ್, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ದೀಪಕ್ ಚಹಾರ್, ಕುಲದೀಪ್ ಸೇನ್

ಇನ್ನು ಇದೇ ಸಂದರ್ಭದಲ್ಲಿ ಆಯ್ಕೆಗಾರರು ಬಾಂಗ್ಲಾದೇಶ ಎ ವಿರುದ್ಧ ಭಾರತ ಎ ತಂಡದ ಆಟಗಾರರನ್ನು ಕೂಡ ಆಯ್ಕೆ ಮಾಡಿದೆ. ಎರಡು ನಾಲ್ಕು ದಿನಗಳ ಪಂದ್ಯಕ್ಕೆ ತಂಡವನ್ನು ಘೋಷಣೆ ಮಾಡಲಾಗಿದೆ.

ಮೊದಲ ಪಂದ್ಯಕ್ಕೆ ಭಾರತ ಎ ತಂಡ: ಅಭಿಮನ್ಯು ಈಶ್ವರನ್ (ನಾಯಕ), ರೋಹನ್ ಕುನ್ನುಮ್ಮಲ್, ಯಶಸ್ವಿ ಜೈಸ್ವಾಲ್, ಯಶ್ ಧುಲ್, ಸರ್ಫರಾಜ್ ಖಾನ್, ತಿಲಕ್ ವರ್ಮಾ, ಉಪೇಂದ್ರ ಯಾದವ್ (ವಿಕೆಟ್ ಕೀಪರ್), ಸೌರಭ್ ಕುಮಾರ್, ರಾಹುಲ್ ಚಹಾರ್, ಜಯಂತ್ ಯಾದವ್, ಮುಖೇಶ್ ಕುಮಾರ್, ನವದೀಪ್ ಸೈನಿ, ಅತಿತ್ ಶೇತ್

2ನೇ ಪಂದ್ಯಕ್ಕೆ ಭಾರತ ಎ ತಂಡ: ಅಭಿಮನ್ಯು ಈಶ್ವರನ್ (ನಾಯಕ), ರೋಹನ್ ಕುನ್ನುಮ್ಮಲ್, ಯಶಸ್ವಿ ಜೈಸ್ವಾಲ್, ಯಶ್ ಧುಲ್, ಸರ್ಫರಾಜ್ ಖಾನ್, ಸರ್ಫರಾಜ್ ಖಾನ್, ಉಪೇಂದ್ರ ಯಾದವ್ (ವಿಕೆಟ್ ಕೀಪರ್), ಸೌರಭ್ ಕುಮಾರ್, ರಾಹುಲ್ ಚಹಾರ್, ಜಯಂತ್ ಯಾದವ್, ಮುಖೇಶ್ ಕುಮಾರ್, ನವದೀಪ್ ಸೈನಿ, ಅತಿತ್ ಶೇತ್, ಚೇತೇಶ್ವರ ಪೂಜಾರ, ಉಮೇಶ್ ಯಾದವ್, ಕೆಎಸ್ ಭರತ್ (ವಿಕೆಟ್ ಕೀಪರ್)

Story first published: Wednesday, November 23, 2022, 23:30 [IST]
Other articles published on Nov 23, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X