Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಟೀಮ್ ಇಂಡಿಯಾ ವಿರುದ್ಧ ಟಿ20 ಚೊಚ್ಚಲ ಜಯದ ಇತಿಹಾಸ ಬರೆದ ಬಾಂಗ್ಲಾ!

India vs Bangladesh, 1st T20I - Live Cricket Score

ನವದೆಹಲಿ, ನವೆಂಬರ್ 3: ಭಾರತ ಪ್ರವಾಸದಲ್ಲಿರುವ ಬಾಂಗ್ಲಾದೇಶ ಕ್ರಿಕೆಟ್‌ ತಂಡ ಭಾನುವಾರ (ನವೆಂಬರ್ 3) ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಅತಿಥೇಯ ಭಾರತ ವಿರುದ್ಧದ ಮೊದಲನೇ ಟಿ20 ಪಂದ್ಯದಲ್ಲಿ 7 ವಿಕೆಟ್ ಗೆಲುವನ್ನಾಚರಿಸಿದೆ. ಇದು ಬಾಂಗ್ಲಾಕ್ಕೆ ಭಾರತ ವಿರುದ್ಧ ಲಭಿಸಿದ ಚೊಚ್ಚಲ ಟಿ20ಐ ವಿಜಯ.

ಮುಷ್ಫಿಕರ್ ಹಹೀಮ್ ಅರ್ಧಶತಕ, ಸೌಮ್ಯ ಸರ್ಕಾರ್ ಬ್ಯಾಟಿಂಗ್ ಬೆಂಬಲದೊಂದಿಗೆ ಬಾಂಗ್ಲಾದೇಶ ವಿಜಯ ಪತಾಕೆ ಹಾರಿಸಿತು. ಬಾಂಗ್ಲಾ ಮತ್ತು ಭಾರತ ತಂಡಗಳು ಅಂತಾರಾಷ್ಟ್ರೀಯ ಟಿ20ಯಲ್ಲಿ ಒಟ್ಟಿಗೆ 9 ಬಾರಿಗೆ ಮುಖಾಮುಖಿಯಾಗಿದೆ. ಇದರಲ್ಲಿ ಬಾಂಗ್ಲಾಕ್ಕೆ ಲಭಿಸಿದ ಮೊದಲ ಗೆಲುವಿದು. ಇದಕ್ಕೂ ಹಿಂದಿನ ಎಂಟೂ ಪಂದ್ಯಗಳನ್ನು ಬಾಂಗ್ಲಾ ಸೋತಿತ್ತು.

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಭಾರತದ ಬ್ಯಾಟ್ಸ್‌ಮನ್‌ಗಳನ್ನು ಬಾಂಗ್ಲಾ ಬೌಲರ್‌ಗಳು ಕಾಡಿದರು. ಆರಂಭಿಕ ಬ್ಯಾಟ್ಸ್‌ಮನ್ ರೋಹಿತ್ 9, ಶಿಖರ್ ಧವನ್ 41, ಕೆಎಲ್ ರಾಹುಲ್ 15, ಶ್ರೇಯಸ್ ಐಯ್ಯರ್ 22, ರಿಷಬ್ ಪಂತ್ 27, ಕೃನಾಲ್ ಪಾಂಡ್ಯ 15, ವಾಷಿಂಗ್ಟನ್ ಸುಂದರ್ 14 ರನ್‌ನೊಂದಿಗೆ ಭಾರತ 20 ಓವರ್‌ಗೆ 6 ವಿಕೆಟ್ ನಷ್ಟದಲ್ಲಿ 148 ರನ್ ಮಾಡಿತು.

ಗುರಿ ಬೆಂಬತ್ತಿದ ಬಾಂಗ್ಲಾದೇಶ ಚತುರ ಬ್ಯಾಟಿಂಗ್ ಪ್ರದರ್ಶಿಸಿತು. ಲಿಟನ್ ದಾಸ್ 7, ಮೊಹಮ್ಮದ್ ನೈಮ್ 26, ಸೌಮ್ಯ ಸರ್ಕಾರ್ 39, ಮುಷ್ಫಿಕರ್ ಹಹೀಮ್ ಅಜೇಯ 60 (43 ಎಸೆತ), ಮಹಮ್ಮದುಲ್ಲ ಅಜೇಯ 15 ರನ್‌ ಸೇರ್ಪಡೆಯೊಂದಿಗೆ 19.3ನೇ ಓವರ್‌ಗೆ ಬಾಂಗ್ಲಾ 3 ವಿಕೆಟ್ ನಷ್ಟದಲ್ಲಿ 154 ರನ್ ಮಾಡಿತು. ಮುಷ್ಫಿಕರ್ ಹಹೀಮ್ ಪಂದ್ಯಶ್ರೇಷ್ಠರೆನಿಸಿದರು.

ಭಾರತ vs ಬಾಂಗ್ಲಾದೇಶ, 1ನೇ ಟಿ20 ಪಂದ್ಯ, ಸ್ಕೋರ್‌ಕಾರ್ಡ್

1
46116

ಭಾರತ ತಂಡ: ರೋಹಿತ್ ಶರ್ಮಾ (ಸಿ), ಶಿಖರ್ ಧವನ್, ಲೋಕೇಶ್ ರಾಹುಲ್, ಶ್ರೇಯಸ್ ಅಯ್ಯರ್, ರಿಷಭ್ ಪಂತ್ (ವಿಕೆ), ಕೃನಾಲ್ ಪಾಂಡ್ಯ, ಶಿವಂ ದೂಬೆ, ವಾಷಿಂಗ್ಟನ್ ಸುಂದರ್, ಯುಜುವೇಂದ್ರ ಚಾಹಲ್, ದೀಪಕ್ ಚಹಾರ್, ಕೆ ಖಲೀಲ್ ಅಹ್ಮದ್.

ಬಾಂಗ್ಲಾದೇಶ ತಂಡ: ಲಿಟಾನ್ ದಾಸ್, ಸೌಮ್ಯಾ ಸರ್ಕಾರ್, ಮೊಹಮ್ಮದ್ ನೈಮ್, ಮುಶ್ಫಿಕುರ್ ರಹೀಮ್ (ವಿಕೆ), ಮಹಮ್ಮದುಲ್ಲಾ (ಸಿ), ಅಫಿಫ್ ಹೊಸೈನ್, ಮೊಸದ್ದೇಕ್ ಹೊಸೈನ್, ಅಮೀನುಲ್ ಇಸ್ಲಾಂ, ಶಫಿಯುಲ್ ಇಸ್ಲಾಂ, ಮುಸ್ತಾಫಿಜುರ್ ರಹಮಾನ್, ಅಲ್-ಅಮೀನ್ ಹೊಸೈನ್.

Story first published: Sunday, November 3, 2019, 22:54 [IST]
Other articles published on Nov 3, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+