Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಎಂಎಸ್ ಧೋನಿ ದಾಖಲೆ ಮುರಿಯಲು ಹಿಟ್‌ಮ್ಯಾನ್‌ ರೋಹಿತ್ ಶರ್ಮಾ ಸಜ್ಜು

India vs Bangladesh, 1st T20I: Rohit Sharma all set to surpass MS Dhoni

ನವದೆಹಲಿ, ನವೆಂಬರ್ 3: ನವದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಭಾನುವಾರ (ನವೆಂಬರ್ 3) ನಡೆಯಲಿರುವ ಭಾರತ vs ಬಾಂಗ್ಲಾದೇಶ ಮೊದಲನೇ ಟಿ20 ಪಂದ್ಯದಲ್ಲಿ ಸ್ಟ್ಯಾಂಡ್‌ ಇನ್ ಕ್ಯಾಪ್ಟನ್ ರೋಹಿತ್ ಶರ್ಮಾ, ಎಂಎಸ್ ಧೋನಿ ಹೆಸರಿನಲ್ಲಿರುವ ದಾಖಲೆಯೊಂದನ್ನು ಮುರಿಯಲಿದ್ದಾರೆ.

ಟೀಮ್ ಇಂಡಿಯಾದ ಎಂದಿನ ನಾಯಕ ವಿರಾಟ್ ಕೊಹ್ಲಿ ಈ ಟಿ20 ಸರಣಿಯಲ್ಲಿ ವಿಶ್ರಾಂತಿಯಲ್ಲಿರುವುದರಿಂದ ತಂಡದ ನಾಯಕತ್ವ ವಹಿಸಿಕೊಂಡಿರುವ ಶರ್ಮಾ, ಭಾನುವಾರ ಮೈದಾನಕ್ಕಿಳಿಯುತ್ತಿದ್ದಂತೆಯೇ ದಾಖಲೆ ನಿರ್ಮಾಣವಾಗಲಿದೆ. ಭಾರತ ಪರ ಅತ್ಯಧಿಕ ಅಂತಾರಾಷ್ಟ್ರೀಯ ಟಿ20 ಪಂದ್ಯಗಳನ್ನಾಡಿದ ಹಿರಿಮೆಗೆ ಶರ್ಮಾ ಕಾರಣರಾಗಲಿದ್ದಾರೆ.

ಭಾರತ vs ಬಾಂಗ್ಲಾದೇಶ, 1ನೇ ಟಿ20 ಪಂದ್ಯ, Live ಸ್ಕೋರ್‌ಕಾರ್ಡ್

1
46116

2007ರ ವಿಶ್ವ ಟಿ20ಯಲ್ಲಿ ಅಂತಾರಾಷ್ಟ್ರೀಯ ಟಿ20ಗೆ ಪಾದಾರ್ಪಣೆ ಮಾಡಿದ್ದಲ್ಲಿಂದ ಹಿಡಿದು ಇಲ್ಲೀವರೆಗೆ ರೋಹಿತ್ ಶರ್ಮಾ ಒಟ್ಟಿಗೆ 98 ಟಿ20ಐ ಪಂದ್ಯಗಳನ್ನಾಡಿದ್ದಾರೆ. ಭಾರತದ ಮಾಜಿ ನಾಯಕ, ಕೂಲ್ ಕ್ಯಾಪ್ಟನ್ ಖ್ಯಾತಿಯ ಧೋನಿ ಕೂಡ 98 ಟಿ20ಐ ಪಂದ್ಯಗಳನ್ನಾಡಿದ ದಾಖಲೆ ಹೊಂದಿದ್ದಾರೆ.

ಹೀಗಾಗಿ ದೆಹಲಿ ಪಂದ್ಯದಲ್ಲಿ ರೋಹಿತ್ ಮೈದಾನಕ್ಕಿಳಿದರೆ 99 ಟಿ20ಐ ಪಂದ್ಯಗಳನ್ನಾಡಿದಂತಾಗುತ್ತದೆ. ಧೋನಿ ದಾಖಲೆ ಬದಿಗೆ ಸರಿಯಲಿದೆ. ಅಲ್ಲದೆ ವಿಶ್ವದಲ್ಲಿ ಅತ್ಯಧಿಕ ಟಿ20ಐ ಪಂದ್ಯಗಳನ್ನಾಡಿದ 3ನೇ ಆಟಗಾರನಾಗಿ ಶರ್ಮಾ ಗುರುತಿಸಿಕೊಳ್ಳಲಿದ್ದಾರೆ. ಮೊದಲೆರಡು ಸ್ಥಾನಗಳಲ್ಲಿ ಪಾಕಿಸ್ತಾನದ ಶೋಯೆಬ್ ಮಲ್ಲಿಕ್ (111) ಮತ್ತು ಶಾಹಿದ್ ಅಫ್ರಿದಿ (99) ಇದ್ದಾರೆ.

Story first published: Sunday, November 3, 2019, 17:56 [IST]
Other articles published on Nov 3, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+