IND vs BAN 1st Test: ಪಾಕ್‌ನಲ್ಲಿ ಸರಣಿ ಗೆಲುವಿನ ಬಾಂಗ್ಲಾ ಹುಮ್ಮಸ್ಸಿಗೆ ಮೊದಲ ಇನಿಂಗ್ಸ್‌ನಲ್ಲಿ ಬ್ರೇಕ್
ಭಾರತ ಹಾಗೂ ಬಾಂಗ್ಲಾದೇಶ ತಂಡಗಳ ನಡುವೆ ಮೊದಲ ಟೆಸ್ಟ್ ಚೆನ್ನೈನಲ್ಲಿ ನಡೆದಿದೆ. ಎರಡನೇ ದಿನದ ಆಟದ ಮೇಲೆ ಎಲ್ಲರ ಚಿತ್ತ ನೆಟ್ಟಿತ್ತು. ಈ ವೇಳೆ ಪ್ರವಾಸಿ ಬಾಂಗ್ಲಾ ಮೊದಲ ದಿನ ಮೊನಚಾದ ದಾಳಿ ಸಂಘಟಿಸಿ, ಅಬ್ಬರಿಸಿತ್ತು. ಈ ಮೂಲಕ ಪಾಕ್‌ನಲ್ಲಿ ಸರಣಿ ಗೆಲುವಿನ ಉತ್ಸಾಹ ತಮ್ಮಲ್ಲಿ ಕಮ್ಮಿ ಆಗಿಲ್ಲ ಎಂದು ತೋರಿಸಿತು.
ಆದರೆ ಬಾಂಗ್ಲಾ ತಂಡಕ್ಕೆ ಪಾಕಿಸ್ತಾನ ಬೇರೆ ತಂಡ, ಭಾರತ ಬೇರೆ ಎಂಬುವುದು ಎರಡನೇ ದಿನದ ಎರಡನೇ ಅವಧಿಯಲ್ಲಿ ಗೊತ್ತಾಯಿತು. ಈ ಮೂಲಕ ಪಾಕ್‌ನಲ್ಲಿ ಸರಣಿ ಗೆಲುವಿನ ಹುಮ್ಮಸ್ಸಿನಲ್ಲಿದ್ದ ಬಾಂಗ್ಲಾ ಆಟಗಾರರಿಗೆ ಆರಂಭದಲ್ಲೇ ಟೀಮ್ ಇಂಡಿಯಾ ಬ್ರೇಕ್ ಹಾಕುವಲ್ಲಿ ಸಫಲವಾಗಿದೆ.

ಆಲ್‌ರೌಂಡರ್ ಜುಗಲಬಂಧಿ
144 ರನ್‌ಗಳಿಗೆ ಆರು ವಿಕೆಟ್ ಕಳೆದು ಕೊಂಡು ಟೀಮ್ ಇಂಡಿಯಾ ಸಂಕಷ್ಟದಲ್ಲಿದ್ದಾಗ, ಬಾಂಗ್ಲಾ ಅಂದುಕೊಂಡಂತೆ ಆಗುತ್ತಿದ್ದೆ ಎಂದು ಭಾವಿಸಿತ್ತು. ಆದರೆ ಅಶ್ವಿನ್- ಜಡೇಜಾ ಅವರ ಅಮೋಗ ಜೊತೆಯಾಟ ಬಾಂಗ್ಲಾದೇಶದ ಆಟಗಾರರ ಮುಖದಲ್ಲಿ ಚಿಂತೆಯ ಗೆರೆಗಳನ್ನು ಮೂಡಿಸಿದವು. ಟಾಪ್ ಆರ್ಡರ್ ಆಟಗಾರರು ಪ್ಲಾಫ್ ಆದರೂ, ಆಲ್‌ರೌಂಡರ್‌ಗಳು ಇನಿಂಗ್ಸ್ ಮುನ್ನಡೆಸಿದ್ದು, ಬಾಂಗ್ಲಾ ಆಟಗಾರರ ಟೆನ್ಷನ್ ಹೆಚ್ಚಿಸಿತು. ಪರಿಣಾಮ ಸಾಧರಣ ರನ್‌ಗೆ ಆಲೌಟ್ ಆಗುವ ಭೀತಿಯಲ್ಲಿದ್ದ ಟೀಮ್ ಇಂಡಿಯಾ, ಉತ್ತಮ ಮೊತ್ತ ಕಲೆ ಹಾಕಿತು.
ಬಾಂಗ್ಲಾ ಕನಸಿಗೆ ಬ್ರೇಕ್
ಬಾಂಗ್ಲಾ ತಂಡದ ಸ್ಟಾರ್ ಬ್ಯಾಟರ್‌ಗಳು ಪಾಕಿಸ್ತಾನ ಪ್ರವಾಸದಲ್ಲಿ ಸ್ಥಿರ ಪ್ರದರ್ಶನವನ್ನು ನೀಡಿದ್ದರು. ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಶಿಸ್ತು ಬದ್ಧ ಪ್ರದರ್ಶನ ನೀಡಿ ಆತಿಥೇಯ ತಂಡವನ್ನು ಕಾಡಿತ್ತು. ಅಲ್ಲದೆ ಪಾಕ್‌ನಲ್ಲಿ ಸರಣಿ ಗೆಲುವಿನ ನಗೆ ಬೀರಿತ್ತು. ಇದೇ ಹುಮ್ಮಸ್ಸಿನಲ್ಲಿ ಶುಕ್ರವಾರ ಎರಡನೇ ದಿನದಾಟದ ಮೊದಲಾವಧಿಯಲ್ಲಿ ಬ್ಯಾಟಿಂಗ್ ಆರಂಭಿಸಿದ ಬಾಂಗ್ಲಾ ಆಟಗಾರರಿಗೆ ಟೀಮ್ ಇಂಡಿಯಾ ಬೌಲರ್‌ಗಳು ಕಾಟ ನೀಡಿದರು.

ಜಸ್ಪ್ರಿತ್ ಬುಮ್ರಾ, ಮೊಹಮ್ಮದ್ ಸಿರಾಜ್ ಹಾಗೂ ಯುವ ವೇಗದ ಬೌಲರ್ ಆಕಾಶ್ ದೀಪ್ ಅವರ ಕರಾರುವಕ್ ದಾಳಿಯನ್ನು ಎದುರಿಸುವಲ್ಲಿ ಬಾಂಗ್ಲಾ ಬೌಲರ್‌ಗಳು ಎಡವಿದರು. ಕೇವಲ 40 ರನ್ ಆಗುಷ್ಟರಲ್ಲಿ ಬಾಂಗ್ಲಾದೇಶದ ಐವರು ಬ್ಯಾಟರ್‌ಗಳು ಪೆವಿಲಿಯನ್ ಸೇರಿದ್ದರು. ಇಲ್ಲಿಂದ ಬಾಂಗ್ಲಾ ಬ್ಯಾಟರ್‌ಗಳು ನೆಲಕಚ್ಚಿ ಬ್ಯಾಟ್ ಮಾಡುವ ಸೂಚನೆ ನೀಡಿದರೂ ಫಲ ಲಭಿಸಲಿಲ್ಲ. ಪಾಕ್ ಪ್ರವಾಸದಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದ್ದ ಲಿಟನ್ ದಾಸ್, ಮುಷ್ಫೀಕರ್ ರಹೀಮ್, ರನ್ ಕಲೆ ಹಾಕುವಲ್ಲಿ ವಿಫಲಾದರು. ಮುಷ್ಫೀಕರ್ ರಹೀಮ್ ಸಿಂಗಲ್ ಡಿಜಿಟ್‌ನಲ್ಲಿ ಆಟ ಮುಗಿಸಿದರು.
ಬಾಂಗ್ಲಾ ಪರ ಭರವಸೆಯ ಆಟಗಾರ ಶಕೀಬ್ ಅಲ್ ಹಸನ್ (32), ಮೆಹದಿ ಹಸನ್ ಮಿರ್ಜಾ (27), ಲಿಟನ್ ದಾಸ್ (22), ತಂಡದ ಪರ ಬಿಗ್ ಇನಿಂಗ್ಸ್ ಕಟ್ಟುವ ಸೂಚನೆ ನೀಡಿದರು. ಆದರೆ ಫಲಿಸಲಿಲ್ಲ. ಅಂತಿಮವಾಗಿ ಬಾಂಗ್ಲಾದೇಶ ಕೇವಲ 47.1 ಓವರ್‌ಗಳಲ್ಲಿ 149 ರನ್‌ಗಳಿಗೆ ಆಲೌಟ್ ಆಯಿತು. ಭಾರತದ ಪರ ಜಸ್ಪ್ರಿತ್ ಬುಮ್ರಾ 4, ಮೊಹಮ್ಮದ್ ಸಿರಾಜ್, ಸ್ಪಿನ್ ಬೌಲರ್ ರವೀಂದ್ರ ಜಡೆಜಾ ತಲಾ ಎರಡು ವಿಕೆಟ್ ಪಡೆದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications