For Quick Alerts
ALLOW NOTIFICATIONS  
For Daily Alerts
 

ಭಾರತ vs ಬಾಂಗ್ಲಾ, ಟೆಸ್ಟ್, Live Score: ವಿಕೆಟ್ ಒಪ್ಪಿಸಿದ ರೋಹಿತ್ ಶರ್ಮಾ

IND vs BAN 1st test : An experienced team India dominates Bangla | Oneindia Kannada
India vs Bangladesh, 1st Test - Live Cricket Score

ಇಂದೋರ್, ನವೆಂಬರ್ 14: ಭಾರತ ಪ್ರವಾಸದಲ್ಲಿರುವ ಬಾಂಗ್ಲಾದೇಶ ಕ್ರಿಕೆಟ್ ತಂಡ, ಆತಿಥೇಯ ಭಾರತದ ವಿರುದ್ಧ ಗುರುವಾರ (ನವೆಂಬರ್ 14) ಮೊದಲನೇ ಏಕದಿನ ಟೆಸ್ಟ್ ಪಂದ್ಯವನ್ನಾಡುತ್ತಿದೆ. ಇಂದೋರ್‌ನ ಹೋಲ್ಕರ್ ಕ್ರಿಕೆಟ್‌ ಸ್ಟೇಡಿಯಂನಲ್ಲಿ ಈ ಪಂದ್ಯ ನಡೆಯುತ್ತಿದೆ. ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದ್ದ ಬಾಂಗ್ಲಾ ಅಲ್ಪ ಮೊತ್ತಕ್ಕೆ ಮೊದಲ ಇನ್ನಿಂಗ್ಸ್ ಮುಗಿಸಿದೆ. ಭಾರತ ಪ್ರಥಮ ಇನ್ನಿಂಗ್ಸ್ ಆಡುತ್ತಿದೆ.

ಮೊದಲ ಇನ್ನಿಂಗ್ಸ್‌ ಆಡಿದ ಬಾಂಗ್ಲಾ ತಂಡವನ್ನು ಭಾರತದ ಬೌಲರ್‌ಗಳು ಕಾಡಿದರು. ಶಾಡ್ಮನ್ ಇಸ್ಲಾಂ 6, ಇಮ್ರುಲ್ ಕಾಯಿಸ್ 6, ಮೊಮಿನುಲ್ ಹಕ್ 37, ಮೊಹಮ್ಮದ್ ಮಿಥುನ್ 13, ಮುಷ್ಫಿಕರ್ ರಹೀಮ್ 43, ಮಹಮದುಲ್ಲ 10, ಲಿಟನ್ ದಾಸ್ 21, ಅಬು ಜಾಯೆದ್ 7 ರನ್‌ಗೆ ವಿಕೆಟ್ ಒಪ್ಪಿಸಿದರು.

ಭಾರತ vs ಬಾಂಗ್ಲದೇಶ, 1ನೇ ಟೆಸ್ಟ್ ಪಂದ್ಯ, Live ಸ್ಕೋರ್‌ಕಾರ್ಡ್

1
46119

58.3 ಓವರ್‌ಗೆ ಸರ್ವ ಪತನ ಕಂಡು 150 ರನ್ ಬಾರಿಸಿ ಬಾಂಗ್ಲಾ ತಂಡ ಮೊದಲ ಇನ್ನಿಂಗ್ಸ್‌ ಮುಗಿಸಿತು. ಇಶಾಂತ್ ಶರ್ಮಾ 2, ಉಮೇಶ್ ಯಾದವ್ 2, ಮೊಹಮ್ಮದ್ ಶಮಿ 3, ಆರ್‌ ಅಶ್ವಿನ್ 2 ವಿಕೆಟ್‌ನೊಂದಿಗೆ ಗಮನ ಸೆಳೆದರು.

ಈ ಟೆಸ್ಟ್ ಸರಣಿ ಒಟ್ಟು 2 ಪಂದ್ಯಗಳನ್ನು ಒಳಗೊಂಡಿದೆ. ಇದರಲ್ಲಿ ನವೆಂಬರ್ 22ರಿಂದ ಆರಂಭಗೊಳ್ಳಲಿರುವ 2ನೇ ಪಂದ್ಯ ಡೇ-ನೈಟ್ ಟೆಸ್ಟ್ ಆಗಿರಲಿದೆ. ಇಂದಿನ ಪಂದ್ಯಕ್ಕಾಗಿ ಟೀಮ್ ಇಂಡಿಯಾದಲ್ಲಿ ಅನುಭವಿ ಆಟಗಾರರು ಕಣಕ್ಕಿಳಿದಿದ್ದಾರೆ.

ಭಾರತ ತಂಡ: ಮಯಾಂಕ್ ಅಗರ್ವಾಲ್, ರೋಹಿತ್ ಶರ್ಮಾ, ಚೇತೇಶ್ವರ್ ಪೂಜಾರ, ವಿರಾಟ್ ಕೊಹ್ಲಿ (ಸಿ), ಅಜಿಂಕ್ಯ ರಹಾನೆ, ರವೀಂದ್ರ ಜಡೇಜಾ, ವೃದ್ಧಿಮಾನ್ ಸಹಾ (ವಿಕೆ), ರವಿಚಂದ್ರನ್ ಅಶ್ವಿನ್, ಉಮೇಶ್ ಯಾದವ್, ಮೊಹಮ್ಮದ್ ಶಮಿ, ಇಶಾಂತ್ ಶರ್ಮಾ.

ಬಾಂಗ್ಲಾದೇಶ ತಂಡ: ಇಮ್ರುಲ್ ಕಾಯೆಸ್, ಶಾಡ್ಮನ್ ಇಸ್ಲಾಂ, ಮೊಹಮ್ಮದ್ ಮಿಥುನ್, ಮೊಮಿನುಲ್ ಹಕ್ (ಸಿ), ಮುಶ್ಫಿಕುರ್ ರಹೀಮ್, ಮಹಮೂದುಲ್ಲಾ, ಲಿಟಾನ್ ದಾಸ್ (ವಿಕೆ), ಮೆಹೆದಿ ಹಸನ್, ತೈಜುಲ್ ಇಸ್ಲಾಂ, ಅಬು ಜಯೀದ್, ಎಬಾದತ್ ಹೊಸೈನ್.

Story first published: Thursday, November 14, 2019, 15:40 [IST]
Other articles published on Nov 14, 2019
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+