ಭಾರತದ ಎರಡನೇ ಟೆಸ್ಟ್ ಪಂದ್ಯಕ್ಕೂ ಮೊದಲೇ ತಿಳಿದುಕೊಳ್ಳಬೇಕಾದ ಅಂಶಗಳು
ಇಂದೋರ್‌ನಲ್ಲಿ ನಡೆದ ಸರಣಿಯ ಮೊದಲ ಪಂದ್ಯವನ್ನು ಇನ್ನಿಂಗ್ಸ್ ಮತ್ತು 113ರನ್‌ಗಳಿಂದ ಗೆದ್ದುಕೊಂಡಿರುವ ಭಾರತ ಎರಡನೇ ಪಂದ್ಯಕ್ಕೆ ಸಿದ್ಧವಾಗಿದೆ. ಎರಡನೇ ಟೆಸ್ಟ್ ಭಾರತ ಮೊದಲ ಬಾರಿಗೆ ಹಗಲು ರಾತ್ರಿ ಟೆಸ್ಟ್ ಸರಣಿಯಲ್ಲಿ ಪಾಲ್ಗೊಳ್ಳುತ್ತಿದ್ದು ಈ ಕಾರಣಕ್ಕೆ ಐತಿಹಾಸಿಕ ಮಹತ್ವ ಪಡೆದುಕೊಂಡಿದೆ. ಈ ಪಂದ್ಯಕ್ಕೆ ಆತಿಥ್ಯವಹಿಸಿಕೊಳ್ಳುತ್ತಿರುವ ಈಡನ್ ಗಾರ್ಡನ್ ಸಕಲ ರೀತಿಯಲ್ಲೂ ಸಜ್ಜಾಗಿದೆ.
ವಿಶ್ವಕ್ರಿಕೆಟ್‌ನಲ್ಲಿ ಅತ್ಯಂತ ಪ್ರಭಾವಶಾಲಿಯಾಗಿರುವ ಭಾರತ ಟೆಸ್ಟ್ ಮಾನ್ಯತೆ ಪಡೆದಿರುವ ರಾಷ್ಟ್ರಗಳ ಪೈಕಿ ಕೊನೆಯ ತಂಡವಾಗಿ ಪಿಂಕ್ ಬಾಲ್‌ನಲ್ಲಿ ಆಡಲು ಬಾಂಗ್ಲಾದೇಶದ ಜೊತೆಗೆ ಕಣಕ್ಕೆ ಇಳಿಯುತ್ತಿದೆ. ಬಾಂಗ್ಲಾದೇಶಕ್ಕೂ ಇದು ಮೊದಲ ಪಿಂಕ್ ಬಾಲ್ ಪಂದ್ಯವಾಗಿದೆ.
ಸರಣಿಯಲ್ಲಿ ಅಮೋಘ ಪ್ರದರ್ಶನ ನೀಡಿ ಮುನ್ನುಗ್ಗುತ್ತಿರುವ ಭಾರತ ಈ ಪಂದ್ಯದಲ್ಲೂ ನಿಸ್ಸಂಶಯವಾಗಿ ಗೆಲ್ಲುವ ಫೇವರೇಟ್ ತಂಡ ಎನಿಸಿದೆ. ಜೊತೆಗೆ ಬಾಂಗ್ಲಾದೇಶ ಕಳಪೆ ಆಟವನ್ನು ಪ್ರದರ್ಶಿಸುತ್ತಿದ್ದು ಗುಲುವಿನ ಹಾದಿ ಬಾಂಗ್ಲಾಗೆ ತುಂಬಾ ಕಠಿಣವಾಗಿರಲಿದೆ.

ಪಿಚ್ ರಿಪೋರ್ಟ್
ಮೊದಲ ಪಂದ್ಯದಲ್ಲಿ ಭಾರತದ ಬೌಲಿಂಗ್ ಪಡೆ ಮೂರೇದಿನಕ್ಕೆ ಪಂದ್ಯವನ್ನು ಅಂತ್ಯಗೊಳಿಸುವಲ್ಲಿ ಯಶಸ್ವಿಯಾಗಿತ್ತು. ಈಗಿನ ಪಿಚ್ ವರದಿಯ ಪ್ರಕಾರ ಈಡನ್ ಗಾರ್ಡನ್ ಪಿಚ್ ಕೂಡ ವೇಗಿಗಳಿಗೆ ಸಹಕಾರಿಯಾಗಲಿದೆ.

ಬ್ಯಾಟ್ಸ್‌ಮನ್‌ಗಳಿಗೆ ಕಠಿಣ ಸವಾಲು
ಅಹರ್ನಿಶಿ ಪಂದ್ಯವಾದ ಕಾರಣ ಬ್ಯಾಟ್ಸ್‌ಮನ್‌ಗಳಿಗೆ ಸಹಜವಾಗಿಯೇ ಕಠಿಣವಾಗಿರಲಿದೆ. ವೇಗದ ಬೌಲರ್‌ಗಳ ಪಾಲಿಗೆ ಸ್ಬರ್ಗವಾಗುವ ಸಾಧ್ಯತೆಯಿದೆ. ಡೇ ನೈಟ್ ಟೆಸ್ಟ್ ಪಂದ್ಯದ ಇತಿಹಾಸವನ್ನು ಗಮನಿಸಿದಾಗಲೂ ಇದೇ ಅಂಶ ತಿಳಿದು ಬರುತ್ತದೆ.

ಲೈವ್ ಸ್ಟ್ರೀಮಿಂಗ್ ಎಲ್ಲೆಲ್ಲಿ? ಹೇಗೆ?
ಸ್ಟಾರ್‌ಸ್ಪೋರ್ಟ್: ಭಾರತ, ಬಾಂಗ್ಲಾದೇಶ, ಶ್ರೀಲಂಕಾ, ಮಾಲ್ಡೀವ್ಸ್ ಮತ್ತು ನೇಪಾಳದ ವೀಕ್ಷಕರಿಗೆ
ಹಾಟ್‌ಸ್ಟಾರ್: ಭಾರತೀಯ ಉಪಖಂಡದಲ್ಲಿ ಹಾಟ್‌ಸ್ಟಾರ್‌ನಲ್ಲೂ ನೇರಪ್ರಸಾರ ಇರಲಿದೆ.

ಪಂದ್ಯದ ಸಮಯ ಮತ್ತು ಇತರ ಮಾಹಿತಿ;
ಭಾರತೀಯ ಕಾಲಮಾನ 1 ಗಂಟೆಗೆ ಪಂದ್ಯ ಆರಂಭ
ಮೊದಲ ಸೆಶನ್: ಮಧ್ಯಾಹ್ನ 1-3
ಎರಡನೇ ಸೆಶನ್: 3.40PM-5.40PM
ಮೂರನೇ ಸೆಶನ್: ಸಂಜೆ 6:00-8PM

ಹವಾಮಾನ ವರದಿ:
ಕೊಲ್ಕತ್ತಾದ ಹವಾಮಾನ ವರದಿ ಸಾಕಷ್ಟು ಆಶಾದಾಯಕವಾಗಿದೆ. ಪಂದ್ಯದ ಐದು ದಿನವೂ ಮಳೆಯಾಗಯವ ಸಂಭವ ಇಲ್ಲ. ಆದರೆ ಮಂಜಿನ ಹನಿಗಳು ಪಂದ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications