Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IND vs BAN: ಬಾಂಗ್ಲಾದೇಶ ಪ್ರವಾಸ ಬೆಳೆಸಲಿದೆ ಭಾರತ

2025ರಲ್ಲಿ ನಡೆಯಬೇಕಿದ್ದ ಭಾರತ ಹಾಗೂ ಬಾಂಗ್ಲಾದೇಶ ನಡುವಣ ಸರಣಿಗೆ ಈ ಮುಹೂರ್ತ ಫಿಕ್ಸ್ ಆಗಿದೆ. ಬಾಂಗ್ಲಾದೇಶ ಕ್ರಿಕೆಟ್‌ ಮಂಡಳಿ ದ್ವಿಪಕ್ಷೀಯ ಸರಣಿಗಳ ಬಗ್ಗೆ ದೊಡ್ಡ ಹೇಳಿಕೆ ನೀಡಿದೆ. ಬಾಂಗ್ಲಾದೇಶ ತಂಡ ಈ ವರ್ಷದ ತವರಿನ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ವೇಳಾಪಟ್ಟಿಯಂತೆ ಭಾರತ ಹಾಗೂ ಬಾಂಗ್ಲಾದೇಶ ನಡುವಣ ಪಂದ್ಯ ಆಗಸ್ಟ್ ನಿಂದ ಸೆಪ್ಟೆಂಬರ್ ವರೆಗೆ ನಡೆಯಲಿದೆ. ಆದರೆ ಈ ಸರಣಿಯ ಬಗ್ಗೆ ಬಿಸಿಸಿಐ ಯಾವುದೇ ಹೇಳಿಕೆ ನೀಡಿಲ್ಲ.

2026ರಲ್ಲಿ ಬಾಂಗ್ಲಾದೇಶಕ್ಕೆ ಪಾಕಿಸ್ತಾನ, ಆಸ್ಟ್ರೇಲಿಯಾ, ಭಾರತ ತಂಡಕ್ಕೆ ಪ್ರವಾಸ ಬೆಳೆಸಲಿದೆ. ಬಾಂಗ್ಲಾದೇಶ ವಿರುದ್ಧದ ಸರಣಿಯಲ್ಲಿ ಭಾರತ ಮೂರು ಏಕದಿನ ಪಂದ್ಯ, ಮೂರು ಟಿ20 ಪಂದ್ಯವನ್ನು ಆಡಲಿದೆ. ಈ ಬಗ್ಗೆ ಇನ್ನು ಯಾವುದೇ ಬಿಸಿಸಿಐ ಅಧಿಕೃತ ಘೋಷಣೆ ಮಾಡದೇ ಇದ್ದರೂ, ಈ ಉಭಯ ತಂಡಗಳ ನಡುವಣ ವೇಳಾಪಟ್ಟಿ ಒಂದು ಮೂಲಗಳ ಪ್ರಕಾರ ತಿಳಿದು ಬಂದಿದೆ.

India vs Bangladesh 2026 Series Schedule Revealed ODIs and T20Is Set for August-September

ಸರಣಿ ಆರಂಭವಾಗುವುದು ಯಾವಾಗ?

ಕಳೆದ ವರ್ಷ ನಡೆಯಬೇಕಿದ್ದ ಸರಣಿಯನ್ನು ಮರು ನಿಗದಿಪಡಿಸಲಾಗಿದೆ ಎಂದು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯ ಕಾರ್ಯಾಚರಣೆ ಮುಖ್ಯಸ್ಥ ಶಹರಿಯಾರ್ ನಫೀಸ್ ತಿಳಿಸಿದ್ದಾರೆ. ಆಗಸ್ಟ್‌ 28 ರಂದು ಟೀಮ್ ಇಂಡಿಯಾ ಬಾಂಗ್ಲಾದೇಶ ಪ್ರವಾಸವನ್ನು ಬೆಳೆಸಲಿದೆ. ಈ ವೇಳೆ ಉಭಯ ತಂಡಗಳ ನಡುವಣ ಸರಣಿಯ ಮೊದಲ ಏಕದಿನ ಪಂದ್ಯ ಸೆಪ್ಟೆಂಬರ್ 1 ನಡೆಯಲಿದೆ. ಎರಡನೇ ಏಕದಿನ ಪಂದ್ಯ ಸೆ.3, ಮೂರನೇ ಏಕದಿನ ಪಂದ್ಯ ಸೆ.6 ರಂದು ನಡೆಯಲಿದೆ.

ಇನ್ನು ಟೀಮ್ ಇಂಡಿಯಾ ಇದೇ ವೇಳೆ ಮೂರು ಪಂದ್ಯಗಳ ಟಿ20 ಸರಣಿಯನ್ನು ಆಡಲಿದೆ ಎಂದು ತಿಳಿದು ಬಂದಿದೆ. ಭಾರತ ಹಾಗೂ ಬಾಂಗ್ಲಾ ನಡುವಣ ಮೊದಲ ಟಿ20 ಪಂದ್ಯ ಸೆಪ್ಟೆಂಬರ್ 9 ರಂದು ನಡೆಯಲಿದೆ. ಎರಡನೇ ಟಿ20 ಪಂದ್ಯ ಸೆ.12 ರಂದು, ಮೂರನೇ ಟಿ20 ಪಂದ್ಯ ಸೆ.13 ರಂದು ನಡೆಯಲಿದೆ. ಬಾಂಗ್ಲಾದೇಶದಲ್ಲಿನ ಸದ್ಯದ ಪರಿಸ್ಥಿತಿಗಳನ್ನು ಗಮನಿಸಿದಾಗ ಟೀಮ್ ಇಂಡಿಯಾ ಪ್ರವಾಸ ಕೈಗೊಳ್ಳುತ್ತದೋ ಎಂಬ ಬಗ್ಗೆ ಇನ್ನು ಯಾವುದೇ ಖಚಿತ ಮಾಹಿತಿ ಇಲ್ಲ.

Story first published: Friday, January 2, 2026, 22:18 [IST]
Other articles published on Jan 2, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+