ಎರಡನೇ ಪಂದ್ಯದಲ್ಲೂ ಭಾರತಕ್ಕೆ ಹೀನಾಯ ಸೋಲು
ಮಿರ್ಪುರ್, ಜೂ.21: ಶೇರ್ ಇ ಬಾಂಗ್ಲಾ ಮೈದಾನದಲ್ಲಿ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಎರಡನೇ ಏಕದಿನ ಪಂದ್ಯದಲ್ಲೂ ಭಾರತ ಮುಖಭಂಗ ಅನುಭವಿಸಿ ಬಾಂಗ್ಲಾ ದೇಶಕ್ಕೆ ಸರಣಿ ಬಿಟ್ಟುಕೊಟ್ಟಿದೆ.
ಮಳೆ ಬಾಧಿತ ಪಂದ್ಯದಲ್ಲಿ ಭಾರತ 200 ರನ್ ಗೆ ಆಲೌಟ್ ಆಯಿತು. ಬಾಂಗ್ಲಾ ಬ್ಯಾಟ್ಸ ಮನ್ ಗಳು ಸುಲಭವಾಗಿ ಗುರಿ ಮುಟ್ಟಿದರು. ಈ ಮೂಲಕ ಸರಣಿ ಬಾಂಗ್ಲಾ ಕೈ ವಶವಾಗಿದ್ದು ಹೊಸ ದಾಖಲೆಗಳು ನಿರ್ಮಾಣವಾದವು.

ಎಡಗೈ ವೇಗಿ ಮುಸ್ತಫಿಜುರ್ ದಾಳಿಗೆ ಭಾರತ ತತ್ತರಿಸಿದ ಭಾರತ 198 ರನ್ ಗೆ 8 ವಿಕೆಟ್ ಕಳೆದುಕೊಂಡಾಗ ಮಳೆ ಪಂದ್ಯಕ್ಕೆ ಅಡ್ಡಗಾಲು ಹಾಕಿತ್ತು. ಆದರೆ ನಂತರ ತಮ್ಮ ಕೊನೆಯ ಎಸೆತದಲ್ಲಿಯೂ ವಿಕೆಟ್ ಕಬಳಿಸಿದ ಮುಸ್ತಫಿಜುರ್ 6 ವಿಕೆಟ್ ಸಾಧನೆ ಮಾಡಿದರು.
ಭಾರತದ ಕಳಪೆ ಪ್ರದರ್ಶನಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ರಹಾನೆ ಬಿಟ್ಟು ರಾಯಡು ಅವರನ್ನು ಕಣಕ್ಕಿಳಿಸಿದ ಧೋನಿಗೆ ಟ್ವಿಟ್ಟಿಗರು ಛೀಮಾರಿ ಹಾಕಿದ್ದಾರೆ.
Story first published: Wednesday, January 3, 2018, 10:03 [IST]
Other articles published on Jan 3, 2018
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications