ದೆಹಲಿಯಲ್ಲಿ ಬಾಂಗ್ಲಾಗೆ ಸಿಕ್ಕಿದೆ ಬೂಸ್ಟ್: ಸದ್ಯದ ಫಾರ್ಮ್ ನೋಡಿದರೆ ಭಾರತವೇ ಬೆಸ್ಟ್
ನವದೆಹಲಿ: ಭಾರತ ಹಾಗೂ ಬಾಂಗ್ಲಾದೇಶ ತಂಡಗಳ ನಡುವಣ ಎರಡನೇ ಟಿ20 ಪಂದ್ಯ ನವದೆಹಲಿಯ ಅರುಣ್ ಜೆಟ್ಲಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಗ್ವಾಲಿಯರ್ ನಲ್ಲಿ ನಡೆದಿದ್ದ ಪಂದ್ಯದಲ್ಲಿ ಟೀಮ್ ಇಂಡಿಯಾ ಏಳು ವಿಕೆಟ್ ಜಯ ಸಾಧಿಸಿತ್ತು. ಈಗ ಟೀಮ್ ಇಂಡಿಯಾ ಎರಡನೇ ಪಂದ್ಯವನ್ನು ಗೆದ್ದು ಸರಣಿಯನ್ನು ವಶ ಪಡಿಸಿಕೊಳ್ಳುವ ವಿಶ್ವಾಸದಲ್ಲಿದೆ.
ದೆಹಲಿಯಲ್ಲಿ ನಡೆಯುತ್ತಿರುವ ಎರಡನೇ ಟಿ20 ಪಂದ್ಯದಲ್ಲಿ ಬಾಂಗ್ಲಾ ಪುಟಿದೇಳುವ ವಿಶ್ವಾಸದಲ್ಲಿದೆ. ಬಾಂಗ್ಲಾ ತಂಡ, ಭಾರತದ ವಿರುದ್ಧ ಏಕೈಕ ಟಿ20 ಪಂದ್ಯದಲ್ಲಿ ಗೆಲುವು ದಾಖಲಿಸಿದೆ. ಆ ಪಂದ್ಯಕ್ಕೆ ರಾಷ್ಟ್ರ ರಾಜಧಾನಿಯ ಇದೇ ಮೈದಾನ ಸಾಕ್ಷಿಯಾಗಿತ್ತು. ಹಳೆಯ ಗೆಲುವಿನ ಹುಮ್ಮಸ್ಸನ್ನು ಪಡೆದು ಬಾಂಗ್ಲಾ ತಂಡ ಮೈದಾಕ್ಕೆ ಇಳಿಯುವ ಸಾಧ್ಯತೆ ಇದೆ.

ಅಂಕಿ ಅಂಶದ ಲೆಕ್ಕಾಚಾರದಲ್ಲಿ ಭಾರತ ಬಲಿಷ್ಠ
ಈ ಹಿಂದೆ ಈ ಮೈದಾನವನ್ನು ಫಿರೋಜ್ ಷಾ ಕೋಟ್ಲಾ ಕ್ರೀಡಾಂಗಣ ಎಂದು ಕರೆಯಲಾಗುತ್ತಿತ್ತು. ಆ ಅಂಗಳದಲ್ಲಿ ಭಾರತ ಸೋಲು ಕಂಡಿದೆ. ಈ ಪಂದ್ಯದಲ್ಲಿ ಜಯ ಸಾಧಿಸಿ ಟೀಮ್ ಇಂಡಿಯಾ ಕ್ಲೀನ್ ಸ್ವೀಪ್ ಸಾಧಿಸುವ ಆಸೆಗೆ ಹತ್ತಿರುವ ಆಗುವ ಕನಸು ಹೊಂದಿದೆ. ಒಟ್ಟಾರೆ ಉಭಯ ತಂಡಗಳ ನಡುವೆ 15 ಟಿ20 ಪಂದ್ಯಗಳು ನಡೆದಿದ್ದು, ಈ ಪೈಕಿ ಬಾಂಗ್ಲಾ ಒಂದರಲ್ಲಿ ಮಾತ್ರ ಗೆಲುವು ದಾಖಲಿಸಿದೆ. ಆ ಒಂದು ಗೆಲುವು ದೆಹಲಿಯಲ್ಲಿ ದಾಖಲಾಗಿದೆ.
2019 ರಲ್ಲಿ ನಡೆದಿದ್ದ ಪಂದ್ಯದಲ್ಲಿ ಟೀಮ್ ಇಂಡಿಯಾವನ್ನು ರೋಹಿತ್ ಶರ್ಮಾ ಮುನ್ನಡೆಸಿದ್ದರು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾ ನಿಗದಿತ ಓವರ್‌ಗಳಲ್ಲಿ 6 ವಿಕೆಟ್‌ಗೆ 148 ರನ್ ಗಳಿಸಿತು, ಇದಕ್ಕೆ ಉತ್ತರವಾಗಿ ಬಾಂಗ್ಲಾದೇಶ ತಂಡ 19.3 ಓವರ್‌ಗಳಲ್ಲಿ ಗುರಿಯನ್ನು ಬೆನ್ನಟ್ಟಿತು. ಭಾರತದ ವಿರುದ್ಧ ಬಾಂಗ್ಲಾ ಗೆದ್ದ ಏಕೈಕ ಪಂದ್ಯ ಇದಾಗಿದೆ.

ದೆಹಲಿ ಬಾಂಗ್ಲಾ ಪಾಲಿಗೆ ಲಕ್ಕಿ ಗ್ರೌಂಡ್
ಬಾಂಗ್ಲಾದೇಶ ಭಾರತದಿಂದ ಗೆದ್ದ ಏಕೈಕ ಪಂದ್ಯ ಇದಾಗಿದೆ. ಇದಾದ ನಂತರ ಮತ್ತು ಹಿಂದೆಂದೂ ಬಾಂಗ್ಲಾದೇಶ ತಂಡ ಗೆಲ್ಲುವಲ್ಲಿ ಯಶಸ್ವಿಯಾಗಿರಲಿಲ್ಲ. ಇದೀಗ ಮತ್ತೆ ಅದೇ ಕ್ರೀಡಾಂಗಣದಲ್ಲಿ ಪಂದ್ಯ ನಡೆಯಲಿದ್ದು, ಭಾರತ ತಂಡ ಇಲ್ಲಿ ಎಚ್ಚರಿಕೆ ವಹಿಸಬೇಕಿದೆ.
2022ರಲ್ಲಿ ಕೊನೆಯ ಬಾರಿಗೆ ಈ ಅಂಗಳದಲ್ಲಿ ಟಿ20 ಪಂದ್ಯಗಳು ನಡೆದಿತ್ತು. ಈ ಪಂದ್ಯದಲ್ಲೂ ಟೀಮ್ ಇಂಡಿಯಾ ನಿರಾಸೆ ಕಂಡಿತ್ತು. ಈ ಪಂದ್ಯದಲ್ಲಿ ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಪ್ರವಾಸಿ ದಕ್ಷಿಣ ಆಫ್ರಿಕಾ 7 ವಿಕೆಟ್‌ಗಳಿಂದ ಭಾರತ ತಂಡವನ್ನು ಮಣಿಸಿತ್ತು. ಟೀಮ್ ಇಂಡಿಯಾ ಮೊದಲ ಗೆಲುವಿನ ಉತ್ಸಾಹವನ್ನು ಮರೆತು ಮೈದಾನಕ್ಕೆ ಇಳಿದರೆ, ಸರಣಿ ಗೆಲುವಿನ ಕನಸು ನನಸಾಗುತ್ತದೆ.
ಅಜೇಯ ಜಯದ ಓಟವನ್ನು ಓಡುತ್ತಿರುವ ಭಾರತ
ಸದ್ಯ ಟೀಮ್ ಇಂಡಿಯಾ ಭರ್ಜರಿ ಫಾರ್ಮ್‌ನಲ್ಲಿದ್ದು, ಸರಣಿ ಗೆಲುವಿನ ಕನಸು ಕಾಣುತ್ತಿದೆ. ಈಗಾಗಲೇ ಪ್ರವಾಸದಲ್ಲಿ ಒಂಧೇ ಒಂದು ಗೆಲುವು ಕಾಣದ ಬಾಂಗ್ಲಾ ಮೊದಲ ಗೆಲುವಿನ ನಗೆ ಬೀರಲು ಪ್ಲ್ಯಾನ್ ಮಾಡಿಕೊಂಡಿದೆ. ಉಭಯ ತಂಡಗಳ ನಡುವೆ ನಡೆಯುವ ಎರಡನೇ ಪಂದ್ಯದ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಟೀಮ್ ಇಂಡಿಯಾ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸತತವಾಗಿ 8 ಪಂದ್ಯಗಳಲ್ಲಿ ಜಯ ಸಾಧಿಸಿ ದಾಖಲೆ ಬರೆದಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications