For Quick Alerts
ALLOW NOTIFICATIONS  
For Daily Alerts
 

ರೋಹಿತ್ ಶರ್ಮಾ ಸ್ಫೋಟಕ ಅರ್ಧ ಶತಕ, ಬಾಂಗ್ಲಾದೇಶ ಮಣಿಸಿದ ಭಾರತ

India beat Bangladesh by 8 wickets | Oneindia Kannada
India vs Bangladesh, 2nd T20I - Live Cricket Score

ರಾಜ್‌ಕೋಟ್, ನವೆಂಬರ್ 7: ನಾಯಕ ರೋಹಿತ್ ಶರ್ಮಾ ಸ್ಫೋಟಕ ಅರ್ಧ ಶತಕದ ಬೆಂಬಲದೊಂದಿಗೆ, ರಾಜ್‌ಕೋಟ್‌ನ ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಶನ್ ಸ್ಟೇಡಿಯಂನಲ್ಲಿ ಗುರುವಾರ (ನವೆಂಬರ್ 7) ನಡೆದ ಭಾರತ-ಬಾಂಗ್ಲಾದೇಶ ನಡುವಿನ ದ್ವಿತೀಯ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾ 8 ವಿಕೆಟ್ ಗೆಲುವನ್ನಾಚರಿಸಿದೆ.

ಈ ಪಂದ್ಯದ ಮೂಲಕ 100ನೇ ಟಿ20 ಪಂದ್ಯವನ್ನಾಡಿದ ಹಿಟ್‌ಮ್ಯಾನ್ ರೋಹಿತ್ ಭರ್ಜರಿ ಬ್ಯಾಟಿಂಗ್‌ (85 ರನ್, 43 ಎಸೆತ, 6 ಫೋರ್‌, 6 ಸಿಕ್ಸ್) ಮೂಲಕ ಗಮನ ಸೆಳೆದರು. ಆರಂಭಿಕ ಜೊತೆಗಾರ ಶಿಖರ್ ಧವನ್ ಕೂಡ ಉತ್ತಮ ಸಾತ್ ನೀಡಿದ್ದು, ಬೌಲರ್‌ಗಳ ನೆರವೂ ದೊರೆತಿದ್ದರಿಂದ ರೋಹಿತ್ ಶರ್ಮಾ ಪಡೆ, 3 ಪಂದ್ಯಗಳ ಸರಣಿಯನ್ನು 1-1ರಿಂದ ಜೀವಂತವಾಗಿರಿಸಿಕೊಂಡಿದೆ.

ಭಾರತ vs ಬಾಂಗ್ಲಾದೇಶ, 2ನೇ ಟಿ20 ಪಂದ್ಯ, ಸ್ಕೋರ್‌ಕಾರ್ಡ್

1
46117

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಬಾಂಗ್ಲಾದೇಶ, ಲಿಟನ್ ದಾಸ್ 29, ಮೊಹಮ್ಮದ್ ನೈಮ್ 36, ಸೌಮ್ಯ ಸರ್ಕಾರ್ 30, ಮಹಮ್ಮದುಲ್ಲ 30 ರನ್‌ನೊಂದಿಗೆ 20 ಓವರ್‌ ಮುಕ್ತಾಯಕ್ಕೆ 6 ವಿಕೆಟ್ ಕಳೆದು 153 ರನ್ ಮಾಡಿತು. ಬಾಂಗ್ಲಾ ಇನ್ನಿಂಗ್ಸ್‌ನಲ್ಲಿ ಭಾರತದ ದೀಪಕ್ ಚಹಾರ್ 1, ಕೆ ಖಲೀಲ್ ಅಹ್ಮದ್ 1, ವಾಷಿಂಗ್ಟನ್ ಸುಂದರ್ 1, ಯುಜುವೇಂದ್ರ ಚಾಹಲ್ 2 ವಿಕೆಟ್ ಪಡೆದರು.

ಗುರಿ ಬೆಂಬತ್ತಿದ ಭಾರತ, ರೋಹಿತ್ ಶರ್ಮಾ 85 (43 ಎಸೆತ), ಶಿಖರ್ ಧವನ್ 31, ಕೆಎಲ್ ರಾಹುಲ್ 8, ಶ್ರೇಯಸ್ ಐಯ್ಯರ್ 24 ರನ್‌ನೊಂದಿಗೆ ಭಾರತ 15.4 ಓವರ್‌ಗೆ ವಿಕೆಟ್ 2 ನಷ್ಟದಲ್ಲಿ ರನ್‌ 154 ಮಾಡಿತು. ಬಾಂಗ್ಲಾದ ಇಮಿನುಲ್ ಇಸ್ಲಾಮ್ 2 ವಿಕೆಟ್‌ ಪಡೆದರು. ಪಂದ್ಯಶ್ರೇಷ್ಠ ಪ್ರಶಸ್ತಿ ರೋಹಿತ್ ಶರ್ಮಾಗೆ ಲಭಿಸಿತು.

ದೆಹಲಿಯಲ್ಲಿ ನಡೆದಿದ್ದ ಮೊದಲ ಟಿ20ಯಲ್ಲಿ ಭಾರತ ಸೋತಿದ್ದರಿಂದ ಅಂತಾರಾಷ್ಟ್ರೀಯ ಟಿ20ಯಲ್ಲಿ ಬ್ಲ್ಯೂಬಾಯ್ಸ್ ವಿರುದ್ಧ ಚೊಚ್ಚಲ ಗೆಲುವು ದಾಖಲಿಸಿ ಬಾಂಗ್ಲಾದೇಶ ಇತಿಹಾಸ ನಿರ್ಮಿಸಿತ್ತು. ದ್ವಿತೀಯ ಪಂದ್ಯದಲ್ಲಿ ದೇಸಿ ತಂಡದ ಎಚ್ಚರಿಕೆ ಆಟ, ಸರಣಿ ಸೋಲಿನ ಮುಖಭಂಗವನ್ನು ತಪ್ಪಿಸಿದೆ.

ಭಾರತ ತಂಡ: ರೋಹಿತ್ ಶರ್ಮಾ (ಸಿ), ಶಿಖರ್ ಧವನ್, ಲೋಕೇಶ್ ರಾಹುಲ್, ಶ್ರೇಯಸ್ ಅಯ್ಯರ್, ರಿಷಭ್ ಪಂತ್ (ವಿಕೆ), ಶಿವಮ್ ದೂಬೆ, ಕೃನಾಲ್ ಪಾಂಡ್ಯ, ವಾಷಿಂಗ್ಟನ್ ಸುಂದರ್, ದೀಪಕ್ ಚಹಾರ್, ಯುಜುವೇಂದ್ರ ಚಾಹಲ್, ಕೆ ಖಲೀಲ್ ಅಹ್ಮದ್.

ಬಾಂಗ್ಲಾದೇಶ ತಂಡ: ಲಿಟನ್ ದಾಸ್, ಮೊಹಮ್ಮದ್ ನೈಮ್, ಸೌಮ್ಯ ಸರ್ಕಾರ್, ಮುಶ್ಫಿಕರ್ ರಹೀಮ್ (ವಿಕೆ), ಮಹಮದುಲ್ಲಾ (ಸಿ), ಅಫೀಫ್ ಹೊಸೈನ್, ಮೊಸದ್ದೇಕ್ ಹೊಸೈನ್, ಅಮೀನುಲ್ ಇಸ್ಲಾಂ, ಶಫೀಯುಲ್ ಇಸ್ಲಾಂ, ಮುಸ್ತಾಫಿಜುರ್ ರಹಮಾನ್, ಅಲ್-ಅಮೀನ್ ಹೊಸೈನ್.

Story first published: Thursday, November 7, 2019, 22:55 [IST]
Other articles published on Nov 7, 2019
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+