Ind vs Ban 3rd ODI : ಭಾರತ vs ಬಾಂಗ್ಲಾದೇಶ: ಅಂತಿಮ ಏಕದಿನ ಪಂದ್ಯ, ಟಾಸ್ ರಿಪೋರ್ಟ್ ಆಡುವ ಬಳಗ, Live ಸ್ಕೋರ್

ಭಾರತ ಹಾಗೂ ಬಾಂಗ್ಲಾದೇಶ ನಡುವಿನ ಏಕದಿನ ಸರಣಿಯ ಅಂತಿಮ ಪಂದ್ಯ ಆರಂಭವಾಗಿದೆ. ಚಿತ್ತಗಾಂಗ್‌ನ ಜಹೂರ್ ಅಹ್ಮದ್ ಚೌದರಿ ಸ್ಟೇಡುಯಂನಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಆತಿಥೇಯ ಬಾಂಗ್ಲಾದೇಶ ಟಾಸ್ ಗೆದ್ದಿದ್ದು ಮೊದಲಿಗೆ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಹೀಗಾಗಿ ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಆರಂಭದಲ್ಲಿ ಬ್ಯಾಟಿಂಗ್ ನಡೆಸುವ ಸವಾಲು ಸ್ವೀಕರಿಸಿದೆ.
ಇನ್ನು ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಆಡುವ ಬಳಗದಲ್ಲಿ ಎರಡು ಬದಲಾವಣೆ ಮಾಡಿಕೊಂಡು ಕಣಕ್ಕಿಳಿಸಿದೆ. ನಾಯಕ ರೋಹಿತ್ ಶರ್ಮಾ ಹಾಗೂ ದೀಪಕ್ ಚಹರ್ ಗಾಯಗೊಂಡಿರುವ ಕಾರಣ ಈ ಪಂದ್ಯದಿಂದ ಹೊರಗುಳಿದಿದ್ದಾರೆ. ಇವರ ಸ್ಥಾನದಲ್ಲಿ ಇಶಾನ್ ಕಿಶನ್ ಹಾಗೂ ಕುಲ್‌ದೀಪ್ ಯಾದವ್ ಸ್ಥಾನವನ್ನು ಗಿಟ್ಟಿಸಿಕೊಂಡಿದ್ದಾರೆ.
Live ಸ್ಕೋರ್ ಹೀಗಿದೆ

ಟೀಮ್ ಇಂಡಿಯಾ ಮುಂದೆ ಸವಾಲು
ಈ ಸರಣಿಯಲ್ಲಿ ಟೀಮ್ ಇಂಡಿಯಾ ಮೊದಲ ಎರಡು ಪಂದ್ಯಗಳಲ್ಲಿ ಸೋಲು ಅನುಭವಿಸಿರುವ ಕಾರಣ ಈಗಾಗಲೇ ಬಾಂಗ್ಲಾದೇಶ ಸರಣಿ ಗೆದ್ದಿದೆ. ಸದ್ಯ ಟೀಮ್ ಇಂಡಿಯಾ ಮುಂದೆ ಸರಣಿ ವೈಟ್‌ವಾಶ್ ಮುಖಭಂಗದಿಂದ ತಪ್ಪಿಸಿಕೊಳ್ಳುವ ಸವಾಲಿದೆ. ಇನ್ನು ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಖಾಯಂ ನಾಯಕ ರೋಹಿತ್ ಶರ್ಮಾ ಅವರು ಅಲಭ್ಯವಾಗಿದ್ದಾರೆ. ಗಾಯದ ಕಾರಣ ಅಂತಿಮ ಪಂದ್ಯದಿಂದ ರೋಹಿತ್ ಹೊರಗುಳಿದಿದ್ದು ಈಗಾಗಲೇ ತವರಿಗೆ ವಾಪಾಸಾಗಿದ್ದಾರೆ. ಹೀಗಾಗಿ ಟೀಮ್ ಇಂಡಿಯಾ ಬ್ಯಾಟಿಂಗ್ ವಿಭಾಗದ ಮುಂದೆ ಈಗ ದೊಡ್ಡ ಸವಾಲಿದೆ.

ಬಾಂಗ್ಲಾದೇಶ ಆಡುವ ಬಳಗ
ಬಾಂಗ್ಲಾದೇಶ: ಅನಾಮುಲ್ ಹಕ್, ಲಿಟನ್ ದಾಸ್ (ನಾಯಕ), ಯಾಸಿರ್ ಅಲಿ, ಶಕೀಬ್ ಅಲ್ ಹಸನ್, ಮುಶ್ಫಿಕರ್ ರಹೀಮ್ (ವಿಕೆಟ್ ಕೀಪರ್), ಮಹಮ್ಮದುಲ್ಲಾ, ಅಫೀಫ್ ಹೊಸೈನ್, ಮೆಹಿದಿ ಹಸನ್ ಮಿರಾಜ್, ಎಬಾಡೋತ್ ಹೊಸೈನ್, ಮುಸ್ತಾಫಿಜುರ್ ರೆಹಮಾನ್, ತಸ್ಕಿನ್ ಅಹ್ಮದ್
ಬೆಂಚ್: ಹಸನ್ ಮಹಮೂದ್, ನೂರುಲ್ ಹಸನ್, ನಸುಮ್ ಅಹ್ಮದ್, ನಜ್ಮುಲ್ ಹೊಸೈನ್ ಶಾಂತೋ

ಭಾರತ ಆಡುವ ಬಳಗ
ಟೀಮ್ ಇಂಡಿಯಾ: ಶಿಖರ್ ಧವನ್, ಇಶಾನ್ ಕಿಶನ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ನಾಯಕ & ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್, ಉಮ್ರಾನ್ ಮಲಿಕ್
ಬೆಂಚ್: ರಾಹುಲ್ ತ್ರಿಪಾಠಿ, ರಜತ್ ಪಾಟಿದಾರ್, ಶಹಬಾಜ್ ಅಹ್ಮದ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications