For Quick Alerts
ALLOW NOTIFICATIONS  
For Daily Alerts
 

ಮಿಂಚು ಹರಿಸಿದ ಚಹಾರ್, ಬಾಂಗ್ಲಾ ಟೈಗರ್ಸ್ ಬೇಟೆಯಾಡಿದ ಬ್ಲೂ ಬಾಯ್ಸ್!

India vs Bangladesh, 3rd T20I - Live Cricket Score

ನಾಗ್ಪುರ್, ನವೆಂಬರ್ 10: ನಾಗ್ಪುರದ ವಿದರ್ಭ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ಭಾನುವಾರ (ನವೆಂಬರ್ 10) ನಡೆದ ಭಾರತ vs ಬಾಂಗ್ಲಾದೇಶ ನಡುವಿನ 3ನೇ ಮತ್ತು ಕೊನೆಯ ಟಿ20 ಪಂದ್ಯದಲ್ಲಿ ಬಾಂಗ್ಲಾ ಟೈಗರ್ಸ್ ಗೆದ್ದು ಇತಿಹಾಸ ನಿರ್ಮಿಸುವ ಸೂಚನೆ ನೀಡಿತ್ತಾದರೂ, ಕೊನೇ ಕ್ಷಣದಲ್ಲಿ ಅತ್ಯುತ್ತಮ ಆಟವಾಡಿದ ಬ್ಲೂ ಬಾಯ್ಸ್ ಪಡೆ ಗೆಲುವನ್ನು ತನ್ನೆಡೆಗೆ ತಂದುಕೊಂಡಿದೆ.

ಶ್ರೇಯಸ್ ಐಯ್ಯರ್, ಕೆಎಲ್ ರಾಹುಲ್ ಅರ್ಧ ಶತಕದಾಟ, ದೀಪಕ್ ಚಹಾರ್ ಮತ್ತು ಶಿವಂ ದೂಬೆ ಮಾರಕ ಬೌಲಿಂಗ್ ನೆರವಿನಿಂದ ಭಾರತ-ಬಾಂಗ್ಲಾ ಕೊನೇ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾ 30 ರನ್ ರೋಚಕ ಗೆಲುವನ್ನಾಚರಿಸಿದೆ. ಇದರೊಂದಿಗೆ 3 ಪಂದ್ಯಗಳ ಟಿ20 ಸರಣಿ ಸರಣಿ 2-1ರಿಂದ ಭಾರತದ ವಶವಾಗಿದೆ.

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಭಾರತ, ಆರಂಭಿಕ ಆಟಗಾರರಾದ ರೋಹಿತ್ ಶರ್ಮಾ 2, ಶಿಖರ್ ಧವನ್ 19, ಕೆಎಲ್ ರಾಹುಲ್ 52 (35 ಎಸೆತ), ಶ್ರೇಯಸ್ ಐಯ್ಯರ್ 62 (33), ಮನೀಶ್ ಪಾಂಡೆ 22 (13 ಎಸೆತ) ರನ್‌ನೊಂದಿಗೆ 20 ಓವರ್‌ಗೆ 5 ವಿಕೆಟ್ ನಷ್ಟದಲ್ಲಿ 174 ರನ್ ಮಾಡಿತು.

ಭಾರತ vs ಬಾಂಗ್ಲಾದೇಶ, 3ನೇ ಟಿ20 ಪಂದ್ಯ, ಸ್ಕೋರ್‌ಕಾರ್ಡ್

1
46118

ಗುರಿ ಬೆನ್ನತ್ತಿದ ಬಾಂಗ್ಲಾದೇಶ, ಮೊಹಮ್ಮದ್ ನೈಮ್ 81 (48), ಮೊಹಮ್ಮದ್ 27 ಗಮನಾರ್ಹ ರನ್‌ ಸೇರ್ಪಡೆಯೊಂದಿಗೆ ಪಂದ್ಯದ ಮಧ್ಯಭಾಗದವರೆಗೂ ಗೆಲ್ಲುವ ನಿರೀಕ್ಷೆ ಮೂಡಿಸಿತ್ತು. ಆದರೆ ದೀಪಕ್ ಚಹಾರ್ ದಾಖಲೆಯ ಬೌಲಿಂಗ್ (7 ರನ್‌ಗೆ 6 ವಿಕೆಟ್) ಮತ್ತು ಶಿವಂ ದೂಬೆ (30ಕ್ಕೆ 3 ವಿಕೆಟ್) ಮಾರಕ ದಾಳಿಗೆ ಪ್ರವಾಸಿ ಬಾಂಗ್ಲಾ 19.2 ಓವರ್‌ಗೆ ಎಲ್ಲಾ ವಿಕೆಟ್ ಕಳೆದು 144 ರನ್ ಬಾರಿಸಿ ಶರಣಾಯಿತು.

ದೆಹಲಿ ಪಂದ್ಯದಲ್ಲಿ ಬಾಂಗ್ಲಾ ಗೆದ್ದಾಗ ಭಾರತ ತಂಡ ಬಾಂಗ್ಲಾ ಎದುರು ಚೊಚ್ಚಲ ಟಿ20 ಪಂದ್ಯ ಸೋತ ಆಘಾತ ಅನುಭವಿಸಿತ್ತು. ರಾಜ್‌ಕೋಟ್‌ನಲ್ಲಿ ನಡೆದ ದ್ವಿತೀಯ ಪಂದ್ಯವನ್ನು ರೋಹಿತ್ ಶರ್ಮಾ ಪಡೆ ಜಯಿಸಿದ್ದರಿಂದ ಇಂದಿನ ಪಂದ್ಯದ ಗೆಲುವು ಭಾರತದ ಪಾಲಿಗೆ ಪ್ರತಿಷ್ಠೆಯ ವಿಚಾರವಾಗಿತ್ತು.

ಭಾರತ ತಂಡ: ರೋಹಿತ್ ಶರ್ಮಾ (ಸಿ), ಶಿಖರ್ ಧವನ್, ಲೋಕೇಶ್ ರಾಹುಲ್, ಶ್ರೇಯಸ್ ಅಯ್ಯರ್, ಮನೀಶ್ ಪಾಂಡೆ, ರಿಷಭ್ ಪಂತ್ (ವಿಕೆ), ಶಿವಮ್ ದೂಬೆ, ವಾಷಿಂಗ್ಟನ್ ಸುಂದರ್, ದೀಪಕ್ ಚಹಾರ್, ಯುಜುವೇಂದ್ರ ಚಾಹಲ್, ಕೆ ಖಲೀಲ್ ಅಹ್ಮದ್.

ಬಾಂಗ್ಲಾದೇಶ ತಂಡ: ಲಿಟಾನ್ ದಾಸ್, ಮೊಹಮ್ಮದ್ ನೈಮ್, ಸೌಮ್ಯ ಸರ್ಕಾರ್, ಮುಶ್ಫಿಕರ್ ರಹೀಮ್ (ವಿಕೆ), ಮಹಮದುಲ್ಲಾ (ಸಿ), ಅಫೀಫ್ ಹೊಸೈನ್, ಮೊಹಮ್ಮದ್ ಮಿಥುನ್, ಅಮೀನುಲ್ ಇಸ್ಲಾಂ, ಶಫಿಯುಲ್ ಇಸ್ಲಾಂ, ಮುಸ್ತಾಫಿಜುರ್ ರಹಮಾನ್, ಅಲ್-ಅಮೀನ್ ಹೊಸೈನ್.

Story first published: Sunday, November 10, 2019, 23:07 [IST]
Other articles published on Nov 10, 2019
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+