ಏಷ್ಯಾ ಕಪ್ 2018 ಫೈನಲ್: ಮೂರು ವಿಭಿನ್ನ ಸಂಭ್ರಮಾಚರಣೆಗಳ ಸುತ್ತ!

ದುಬೈ, ಸೆಪ್ಟೆಂಬರ್ 29: ಏಷ್ಯಾ ಕಪ್ 2018 ಫೈನಲ್ ನಲ್ಲಿ ಟೀಮ್ ಇಂಡಿಯಾ ರೋಚಕ ರೀತಿಯಲ್ಲಿ 3 ವಿಕೆಟ್ ಜಯ ಸಾಧಿಸಿತ್ತು. ಅಂತಿಮ ಓವರ್ ನಲ್ಲಿ ಭಾರತಕ್ಕೆ 6 ರನ್ ನ ಅವಶ್ಯಕತೆ ಇದ್ದಾಗಂತೂ ಪಂದ್ಯ ಇನ್ನಷ್ಟು ಹೈ ಟೆನ್ಶನ್ ಸೃಷ್ಟಿಸಿತ್ತು. ಆದರೆ ಅಂತಿಮವಾಗಿ ರೋಹಿತ್ ಶರ್ಮಾ ಬಳಗ 7ನೇ ಬಾರಿಗೆ ಏಷ್ಯಾ ಕಪ್ ಗೆ ಮುತ್ತಿಕ್ಕಿತು.
ಭಾರತ ವಿರುದ್ಧ ಫೈನಲ್ ಪಂದ್ಯದಲ್ಲಿ ನಾವು ಬೌಲಿಂಗ್, ಬ್ಯಾಟಿಂಗ್ ಸುಧಾರಿಸಬೇಕಿದೆ. ಭಾರತಕ್ಕೆ ಪ್ರಬಲ ಪೈಪೋಟಿಯಂತೂ ನೀಡಲಿದ್ದೇವೆ ಎಂದು ಬಾಂಗ್ಲಾ ನಾಯಕ ಮಸ್ರಾಫೆ ಮೊರ್ತಾಜೋ ಹೇಳಿದ್ದರು. ಅದರಂತೇ ಬಾಂಗ್ಲಾ ತಂಡ ಹಾಲಿಚಾಂಪಿಯನ್ ಭಾರತಕ್ಕೆ ಭರ್ಜರಿ ಪೈಪೋಟಿ ನೀಡಿದ್ದು ಸುಳ್ಳಲ್ಲ.
48.3 ಓವರ್ ನಲ್ಲಿ ಎಲ್ಲಾ ವಿಕೆಟ್ ಕಳೆದು ಬಾಂಗ್ಲಾ ನೀಡಿದ್ದ ಪೇರಿಸಿದ್ದ 222 ರನ್ ಅನ್ನು ಭಾರತ 50 ಓವರ್ ಗಳಲ್ಲಿ 7 ವಿಕೆಟ್ ಕಳೆದು 223 ರನ್ ಪೇರಿಸುವುದರೊಂದಿಗೆ ಮೀರಿಸಿ ಚಾಂಪಿಯನ್ ಅನ್ನಿಸಿಕೊಂಡಿತ್ತು. ಪಂದ್ಯದಲ್ಲಿನ ರೋಚಕ ಕ್ಷಣ, ತಮಾಷೆ, ಸಿಟ್ಟು, ಸಂಭ್ರಮ ಇವು ಟ್ವಿಟರ್ ಲೋಕದಲ್ಲಿ ವ್ಯಕ್ತವಾದ ಬಗೆ ಕೆಳಗಿದೆ..
ಅತ್ತಿದ್ದ ಪುಟಾಣಿಯ ಸಂಭ್ರಮ
ಏಷ್ಯಾ ಕಪ್ 5ನೇ ಸೂಪರ್ ಫೋರ್ ನಲ್ಲಿನ ಭಾರತ-ಅಫ್ಘಾನಿಸ್ತಾನ ಮುಖಾಮುಖಿಯಲ್ಲಿ ಭಾರತ 252 ರನ್ ನಿಂದ ಅಫ್ಘಾನ್ ನೊಂದಿಗೆ ಪಂದ್ಯವನ್ನು ಟೈ ಮಾಡಿಕೊಂಡಿತ್ತು. ಈ ವೇಳೆ ಅತ್ತು ಗಮನ ಸೆಳೆದಿದ್ದ ಸಿಖ್ ಪುಟಾಣಿ ಫೈನಲ್ ನಲ್ಲಿ ಭಾರತ ಗೆದ್ದಾಗ ಸಂಭ್ರಮಿಸಿದ.
ಭಾರತ ಗೆಲ್ಲಿಸಲು ಬಂದವಳು
ಈ ಬಾರಿಯ ಏಷ್ಯಾ ಕಪ್ ಪಂದ್ಯದ ವೇಳೆ ಆಕರ್ಷಣೆ ಮೂಡಿಸಿದ್ದ ಪಾಕ್ ಚೆಲುವೆಯ ಬಗ್ಗೆ ವ್ಯಕ್ತವಾದ ತಮಾಷೆ. ಕಾರ್ ಡ್ರೈವ್ ಮಾಡುತ್ತಿರುವ ರಾಕ್ 'ನೀವೆಲ್ಲಿಗೆ ಹೋಗಬೇಕಿದೆ ಮೇಡಂ?' ಎಂದಾಗ ಆಕೆ, 'ಫೈನಲ್ ನಲ್ಲಿ ಭಾರತವನ್ನು ಗೆಲ್ಲಿಸಲು' ಅಂದಳಂತೆ!
ಭಾವನೆಗಳನ್ನು ಹಿಡಿದಿಟ್ಟುಕೊಳ್ಳಿ
ಫೈನಲ್ ಪಂದ್ಯದ ವೇಳೆ ಶಿಖರ್ ಧವನ್ ಔಟಾದಾಗ ಭಾರತ ಆಘಾತವನ್ನು ಅನುಭವಿಸಿತ್ತು. ಆ ವೇಳೆ ಬಾಂಗ್ಲಾ ಆಟಗಾರರು ಮತ್ತು ಅಭಿಮಾನಿಗಳು ನಾಗಿಣಿ ಡ್ಯಾನ್ಸು ಮಾಡಿ ಸಂಭ್ರಮಾಚರಿಸಿದ್ದರು. ಅದಕ್ಕೆ ಭಾರತದ ಅಭಿಮಾನಿ ತಿರುಗೇಟು ನೀಡಿದ್ದಾರೆ. ಆಟ ಆಡಿ; ಆದರೆ ಭಾವನೆಗಳನ್ನು ಕೊಂಚ ಹಿಡಿದಿಟ್ಟುಕೊಳ್ಳಿ ಎಂದಿದ್ದಾರೆ.
ಔಟಾ? ನಾಟೌಟಾ?
ಪಂದ್ಯದ ವೇಳೆ ಭಾರತದ ಕೂಲ್ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಅವರು ಬಾಂಗ್ಲಾ ಶತಕದ ಸರದಾರ ಲಿಟನ್ ದಾಸ್ (121 ರನ್) ಅವರನ್ನು ಸ್ಟಂಪ್ಡ್ ಮಾಡಿದ್ದರು. ಬಹಳ ಸೂಕ್ಷ್ಮ ರೀತಿಯಲ್ಲಿದ್ದ ಕ್ಷಣ ಭಾರತೀಯರಿಗಿನ್ನೂ ಪ್ರಶ್ನೆಯಾಗೇ ಉಳಿದಿದೆ.
ಇದೇ ಶಾಶ್ವತ
ಬಾಂಗ್ಲಾ ಆಟಗಾರರ, ಅಭಿಮಾನಿಗಳ ನಾಗಿಣಿ ಡ್ಯಾನ್ಸಿಗೆ ಭಾರತೀಯ ತನ್ಮಯ್ ಕುಲಕರ್ಣಿಯ ತಿರುಗೇಟು. ನಾಗಿಣಿ ಡ್ಯಾನ್ಸ್ ಕ್ಷಣಿಕ, ಈ ಸೋಲಿನ ವೇದನೆ ಶಾಶ್ವತ ಎಂದಿದ್ದಾರೆ ತನ್ಮಯ್.
ಬಾಲ್ ಟು ಬಾಲ್!
ಅಂತಿಮ ಓವರ್ ನಲ್ಲಿ ಭಾರತಕ್ಕೆ ಆರು ರನ್ನಿನ ಅವಶ್ಯಕತೆಯಿದ್ದಾಗ ಭಾರತೀಯರ ರೀಯಾಕ್ಷನ್ ಹೀಗಿತ್ತಂತೆ!
ಕ್ಯಾಪ್ಶನ್ ನ ಹಂಗಿಲ್ಲದ ಟ್ವೀಟ್ ಗಳು ಒಂದಿಷ್ಟಿವೆ..
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications