For Quick Alerts
ALLOW NOTIFICATIONS  
For Daily Alerts
 

ಏಷ್ಯಾ ಕಪ್: ಬಾಂಗ್ಲಾವನ್ನು ಭರ್ಜರಿ 7 ವಿಕೆಟ್ ನಿಂದ ಮಣಿಸಿದ ಭಾರತ

India vs Bangladesh, Asia Cup, Super Four, Match 1 Live Score

ದುಬೈ, ಸೆಪ್ಟೆಂಬರ್ 21: ಏಷ್ಯಾ ಕಪ್ 2018ರ ಭಾರತ ಮತ್ತು ಬಾಂಗ್ಲಾದೇಶ ತಂಡಗಳ ಮುಖಾಮುಖಿಯಲ್ಲಿ ಭಾರತ 7 ವಿಕೆಟ್ ಭರ್ಜರಿ ಗೆಲುವು ದಾಖಲಿಸಿದೆ. ನಾಯಕ ರೋಹಿತ್ ಶರ್ಮಾ ( 83 ರನ್) ಮತ್ತು ಶಿಖರ್ ಧವನ್ (40 ರನ್) ಬ್ಯಾಟಿಂಗ್ ಬೆಂಬಲದೊಂದಿಗೆ ಭಾರತ ತಂಡ ಬಾಂಗ್ಲಾ ಎದುರು ಗೆಲುವನ್ನಾಚರಿಸಿತು.

ಸ್ಕೋರ್ ಕಾರ್ಡ್ ಗಾಗಿ ಕೆಳಗಿನ ಲಿಂಕ್ ಕ್ಲಿಕ್ ಮಾಡಿ

1
44052

ರವೀಂದ್ರ ಜಡೇಜಾ (4 ವಿಕೆಟ್), ಭುವನೇಶ್ವರ್ ಕುಮಾರ್ ಮತ್ತು ಜಸ್ ಪ್ರೀತ್ ಬೂಮ್ರಾ (ತಲಾ 3 ವಿಕೆಟ್) ಮಾರಕ ದಾಳಿ ನೆರವಿನಿಂದ ಭಾರತ ತಂಡ ಬಾಂಗ್ಲಾ ದೇಶವನ್ನು 175 ರನ್ ಒಳಗೆ ಕಟ್ಟಿ ಹಾಕುವಲ್ಲಿ ಯಶಸ್ವಿಯಾಗಿತ್ತು. ಟಾಸ್ ಸೋತು ಬ್ಯಾಟಿಂಗ್ ಗೆ ಇಳಿದಿದ್ದ ಬಾಂಗ್ಲಾ 49.1 ಓವರ್ ಮುಕ್ತಾಯಕ್ಕೆ ಎಲ್ಲಾ ವಿಕೆಟ್ ಕಳೆದು 173 ರನ್ ಪೇರಿಸಿತ್ತು.

ದುಬೈಯ ಇಂಟರ್ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಸೂಪರ್ ಫೋರ್ ಈ ಮೊದಲ ಪಂದ್ಯದಲ್ಲಿ 174 ಸಾಧಾರಣ ರನ್ ಗುರಿ ಬೆನ್ನತ್ತಿದ ಭಾರತ ಪರ ರೋಹಿತ್ ಶರ್ಮಾ ವಿಕೆಟ್ ಕಾವಲು ನಿಂತರು. ಶಿಖರ್ ಧವನ್ ಅವರ ರನ್ ಕೊಡುಗೆಯೂ ತಂಡಕ್ಕೆ ಲಭಿಸಿತು. ಮತ್ತೊಂದೆಡೆ ಎಂಎಸ್ ಧೋನಿಯೂ 33 ರನ್ ಸೇರಿಸಿ ಭಾರತವನ್ನು ಗೆಲುವಿನ ದಡ ಮುಟ್ಟಿಸಿದರು. ಭಾರತ 36.2 ಓವರ್ ಗೆ 3 ವಿಕೆಟ್ ಕಳೆದು 174 ರನ್ ಪೇರಿಸಿತು.

ಹಾಂಕಾಂಗ್ ಎದುರು ಮೊದಲ ಪಂದ್ಯದಲ್ಲಿ ಪರದಾಡಿ ಗೆದ್ದಿದ್ದ ಟೀಮ್ ಇಂಡಿಯಾ, ಪಾಕಿಸ್ತಾನ ಎದುರು ಸುಲಭ ಜಯ ಸಾಧಿಸಿತ್ತು. ಮತ್ತೆ ಸೆಪ್ಟೆಂಬರ್ 23ರ ಭಾನುವಾರ ಭಾರತ ಮತ್ತು ಪಾಕಿಸ್ತಾನ ತಂಡಗಳು ಎದುರುಬದುರಾಗಲಿರುವುದರಿಂದ ಬಾಂಗ್ಲಾ ಎದುರಿನ ಪಂದ್ಯವನ್ನು ಗೆದ್ದು ಪ್ರಶಸ್ತಿ ಸುತ್ತಿನ ದಾರಿಯನ್ನ ಸುಲಭವಾಗಿಸುವ ಭಾರತದ ಯೋಜನೆ ಫಲಿಸಿದೆ.

ಭಾರತ ತಂಡ: ರೋಹಿತ್ ಶರ್ಮಾ (ಸಿ), ಶಿಖರ್ ಧವನ್, ಅಂಬಾಟಿ ರಾಯುಡು, ದಿನೇಶ್ ಕಾರ್ತಿಕ್, ಎಂಎಸ್ ಧೋನಿ (ವಿ.ಕೆ), ಕೇದಾರ ಜಾಧವ್, ರವೀಂದ್ರ ಜಡೇಜಾ, ಭುವನೇಶ್ವರ ಕುಮಾರ್, ಕುಲದೀಪ್ ಯಾದವ್, ಜಾಸ್ ಪ್ರೀತ್ ಬೂಮ್ರಾ, ಯುಜುವೇಂದ್ರ ಚಾಹಲ್.

ಬಾಂಗ್ಲಾದೇಶ: ಲಿಟಾನ್ ದಾಸ್ (ವಿಕೆ), ನಜ್ಮುಲ್ ಹುಸೇನ್ ಶಾಂಟೋ, ಶಕೀಬ್ ಅಲ್ ಹಸನ್, ಮುಷ್ಫಿಕರ್ ರಹೀಮ್, ಮೊಹಮ್ಮದ್ ಮಿಥುನ್, ಮಹಮೂದುಲ್ಲಾ, ಮೊಸಡೆಕ್ ಹುಸೇನ್, ಮೆಹಿದ್ದಿ ಹಸನ್, ಮಶ್ರಫೆ ಮೊರ್ಟಾಜಾ (ಸಿ), ರುಬೆಲ್ ಹುಸೇನ್, ಮುಸ್ತಾಫಿಜರ್ ರಹಮಾನ್.

Story first published: Friday, September 21, 2018, 23:58 [IST]
Other articles published on Sep 21, 2018
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+