Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IND vs BAN: ಬಾಂಗ್ಲಾ ವಿರುದ್ಧದ ಟೆಸ್ಟ್‌ನಿಂದ ಟೀಮ್ ಇಂಡಿಯಾಕ್ಕೆ ಭಾರೀ ಲಾಭ

ಶ್ರೀಲಂಕಾ ಪ್ರಾಸದ ಬಳಿಕ ಸದ್ಯ ಟೀಮ್ ಇಂಡಿಯಾ ತವರಿಗೆ ಮರಳಿದೆ. ಈ ವೇಳೆ ಮುಂದಿನ ಸರಣಿಯ ಮೇಲೆ ಟೀಮ್ ಇಂಡಿಯಾ ಆಟಗಾರರು ಗಮನ ಹರಿಸಿದ್ದಾರೆ. ಇನ್ನು ಒಂದು ತಿಂಗಳು ಬಿಡುವು ಇರುವ ಕಾರಣ ಟೀಮ್ ಇಂಡಿಯಾ ಆಟಗಾರರು ದುಲೀಪ್‌ ಟ್ರೋಫಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಮೂಲಕ ಬಾಂಗ್ಲಾ ವಿರುದ್ಧದ ಸರಣಿಗೆ ಅಭ್ಯಾಸ ನಡೆಸಿದ್ದಾರೆ.

ತವರಿನಲ್ಲಿ ನಡೆಯುವ ಬಾಂಗ್ಲಾದೇಶ ವಿರುದ್ಧದ ಸರಣಿ ಟೀಮ್ ಇಂಡಿಯಾಕ್ಕೆ ಬಹಳ ಮುಖ್ಯ. ಬಾಂಗ್ಲಾ ವಿರುದ್ಧ ಭಾರತ 2 ಪಂದ್ಯಗಳ ಟೆಸ್ಟ್‌ ಸರಣಿಯನ್ನು ಆಡಲಿದೆ. ಈ ವೇಳೆ ಟೀಮ್ ಇಂಡಿಯಾಕ್ಕೆ ಒಂದು ಸುವರ್ಣ ಅವಕಾಶ ಲಭಿಸಿದೆ. ವಿಶ್ವ ಟೆಸ್ಟ್‌ ಚಾಂಪಿಯನ್ ಶಿಪ್‌ನಲ್ಲಿ ತನ್ನ ಸ್ಥಾನವನ್ನು ಮತ್ತಷ್ಟು ಭದ್ರ ಪಡಿಸಿಕೊಳ್ಳುವ ಅವಕಾಶ ಇರಲಿದೆ. ಈ ಸರಣಿ ಯಾವ ಕಾರಣಕ್ಕೆ ಮುಖ್ಯ ಎಂಬ ವರದಿ ಇಲ್ಲಿದೆ.

India vs Bangladesh Crucial Test Series Ahead for WTC Points and Historical Dominance

ಬಾಂಗ್ಲಾ ವಿರುದ್ಧ ಅಜೇಯ ಓಟ

ಭಾರತ ಹಾಗೂ ಬಾಂಗ್ಲಾದೇಶ ತಂಡಗಳು ಸುಮಾರು 24 ವರ್ಷಗಳಿಂದ ಟೆಸ್ಟ್‌ ಪಂದ್ಯಗಳನ್ನು ಆಡುತ್ತಿವೆ. ಅಂದಿನಿಂದ ಇಲ್ಲಿಯವರೆಗೆ ಒಟ್ಟು 13 ಪಂದ್ಯಗಳಲ್ಲಿ ಉಭಯ ತಂಡಗಳು ಮುಖಾಮುಖಿ ಆಗಿವೆ. ಭಾರತ 11 ಪಂದ್ಯಗಳಲ್ಲಿ ಜಯ ಸಾಧಿಸಿದರೆ, 2 ಟೆಸ್ಟ್ ಪಂದ್ಯಗಳು ಡ್ರಾನಲ್ಲಿ ಅಂತ್ಯವಾಗಿವೆ. ಅಂದರೆ ಬಾಂಗ್ಲಾದೇಶ ತಂಡ ಕಳೆದ 24 ವರ್ಷಗಳಿಂದ ಭಾರತದ ವಿರುದ್ಧ ಕನಿಷ್ಠ ಒಂದು ಟೆಸ್ಟ್ ಗೆಲ್ಲಲು ಸಾಧ್ಯವಾಗಿಲ್ಲ. ಈ ಬಾರಿಯೂ ಬಾಂಗ್ಲಾ ಆಸೆ ಈಡೇರುವುದು ಕಡಿಮೆ ಎಂದು ಅನಿಸುತ್ತಿದೆ.

ಟೀಮ್ ಇಂಡಿಯಾ ನಂಬರ್ 1

ಭಾರತ ತಂಡ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅಂಕಪಟ್ಟಿಯಲ್ಲಿ ಪ್ರಸ್ತುತ ಅಗ್ರಸ್ಥಾನದಲ್ಲಿದೆ. ಆಸ್ಟ್ರೇಲಿಯಾ ಎರಡನೇ ಸ್ಥಾನದಲ್ಲಿದೆ, ಆದರೆ ಈ ಅವಧಿಯಲ್ಲಿ ಆಸ್ಟ್ರೇಲಿಯಾ ತಂಡ ಯಾವುದೇ ಟೆಸ್ಟ್ ಆಡುತ್ತಿಲ್ಲ. ಸದ್ಯ ಭಾರತದ ನಂಬರ್ 1 ಸ್ಥಾನ ಅಲುಗಾಡುವುದಿಲ್ಲ. ಭಾರತವು ಪ್ರಸ್ತುತ WTC ಪಾಯಿಂಟ್‌ಗಳ ಪಟ್ಟಿಯಲ್ಲಿ 68.51 ಅಂಕಗಳನ್ನು ಹೊಂದಿದೆ. ಭಾರತ ತಂಡವು ಬಾಂಗ್ಲಾದೇಶದ ವಿರುದ್ಧ ಈ ಎರಡು ಟೆಸ್ಟ್ ಪಂದ್ಯಗಳನ್ನು ಗೆದ್ದರೆ ಅಂಕಗಳು 74.24 ಕ್ಕೆ ಹೆಚ್ಚಿಸಿಕೊಳ್ಳಲಿದೆ. ಈ ಮೂಲಕ ಭಾರತ ತಂಡ ಮತ್ತೊಮ್ಮೆ ಫೈನಲ್‌ ಹತ್ತಿರಕ್ಕೆ ಬಂದು ನಿಲ್ಲಬಹುದು.

ಬಾಂಗ್ಲಾ ವಿರುದ್ಧದ ಸರಣಿಯ ಬಳಿಕ ಟೀಮ್ ಇಂಡಿಯಾ ನ್ಯೂಜಿಲೆಂಡ್‌ ವಿರುದ್ಧ ಮೂರು ಪಂದ್ಯಗಳ ಟೆಸ್ಟ್‌ ಸರಣಿ ಆಡಲಿದೆ. ಈ ಸರಣಿಗಳ ಬಳಿಕ ರೋಹಿತ್ ಪಡೆ ಆಸ್ಟ್ರೇಲಿಯಾ ಪ್ರವಾಸ ಬೆಳೆಸಲಿದೆ. ಈ ವೇಳೆ ಐದು ಪಂದ್ಯಗಳ ಟೆಸ್ಟ್ ಸರಣಿ ಆಡಲಿದೆ. ಆಸ್ಟ್ರೇಲಿಯಾ ಈಗ ಏಕದಿನ ಮತ್ತು ಟಿ20 ಪಂದ್ಯಗಳನ್ನು ಮಾತ್ರ ಆಡಲಿದೆ. ಅಂದರೆ ಭಾರತ ಇನ್ನು ಕೆಲ ತಿಂಗಳು ನಂಬರ್ 1 ಸ್ಥಾನದಲ್ಲಿ ಇರಬಹುದು.

ಬಾರ್ಡರ್‌ ಗವಾಸ್ಕರ್‌ ಟ್ರೋಫಿಯ ಐದು ಪಂದ್ಯಗಳ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಈ ಸರಣಿಯಲ್ಲಿ ದಾಖಲಿಸುವ ಗೆಲುವು ಸೋಲುಗಳು ಅಂಕಪಟ್ಟಿಯನ್ನು ಅಲುಗಾಡಿಸಬಹುದು.

Story first published: Wednesday, August 14, 2024, 7:31 [IST]
Other articles published on Aug 14, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+