Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IND vs BAN: ಭಾರತ -ಬಾಂಗ್ಲಾದೇಶ ಮೊದಲ ಟೆಸ್ಟ್‌ ಪಂದ್ಯದ ಟಿಕೆಟ್ ಬೆಲೆ ಎಷ್ಟು?; ಬುಕ್ ಮಾಡುವುದು ಹೇಗೆ?

ಎರಡು ಟೆಸ್ಟ್ ಹಾಗೂ ಮೂರು ಟಿ20 ಪಂದ್ಯಗಳ ಸರಣಿಗಾಗಿ ಬಾಂಗ್ಲಾದೇಶ ತಂಡವು ಭಾರತ ಪ್ರವಾಸ ಕೈಗೊಳ್ಳುತ್ತಿದೆ. ಭಾರತ ಮತ್ತು ಬಾಂಗ್ಲಾದೇಶ ನಡುವಿನ ಮೊದಲ ಟೆಸ್ಟ್ ಕ್ರಿಕೆಟ್ ಪಂದ್ಯ ಸೆಪ್ಟೆಂಬರ್ 19 ರಂದು ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಆರಂಭವಾಗಲಿದೆ.

ಮೊದಲ ಟೆಸ್ಟ್ ಕ್ರಿಕೆಟ್ ಪಂದ್ಯಕ್ಕೆ ಭಾರತ ತಂಡವನ್ನು ನಿನ್ನೆ (ಭಾನುವಾರ) ಪ್ರಕಟಿಸಲಾಗಿದೆ. ನಾಯಕ ರೋಹಿತ್ ಶರ್ಮಾ ನೇತೃತ್ವದ 16 ಸದಸ್ಯರ ಭಾರತ ತಂಡದಲ್ಲಿ ಹಲವು ಅನುಭವಿ ಆಟಗಾರರಿಗೆ ಸ್ಥಾನ ನೀಡಲಾಗಿದೆ. 21 ತಿಂಗಳ ಬಳಿಕ ವಿಕೆಟ್‌ಕೀಪರ್- ಬ್ಯಾಟರ್ ರಿಷಬ್ ಪಂತ್ ಭಾರತ ತಂಡಕ್ಕೆ ಸೇರ್ಪಡೆಯಾಗುವ ಮೂಲಕ ಶಕ್ತಿ ತುಂಬಿದ್ದಾರೆ.

India vs Bangladesh first test match ticket price

ಟೆಸ್ಟ್ ಕ್ರಿಕೆಟ್‌ನ ಯಶಸ್ವಿ ಸ್ಪಿನ್ ಬೌಲರ್ ರವಿಚಂದ್ರನ್ ಆಶ್ವಿನ್ ಕೂಡ ತವರಿನ ಟೆಸ್ಟ್ ಸರಣಿಗೆ ಆಯ್ಕೆಯಾಗಿದ್ದಾರೆ. ಮೊದಲ ಬಾರಿಗೆ ವೇಗದ ಬೌಲರ್ ಯಶ್ ದಯಾಳ್ ಕೂಡ ಭಾರತ ತಂಡಕ್ಕೆ ಸೇರಿಕೊಂಡಿದ್ದಾರೆ. ಅವರು ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್ ಕ್ರಿಕೆಟ್ ಪಂದ್ಯದಲ್ಲಿ ಆಡುವ ನಿರೀಕ್ಷೆಯಿದೆ.

ಹಲವು ದಿನಗಳ ಬಳಿಕ ಕನ್ನಡಿಗ ಕೆಎಲ್ ರಾಹುಲ್ ಕೂಡ ತಂಡಕ್ಕೆ ಮರಳಿದ್ದು, ಶ್ರೇಯಸ್ ಅಯ್ಯರ್ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ವಿಫಲವಾಗಿದ್ದಾರೆ. ಹೀಗಿರುವಾಗ ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯಲಿರುವ ಭಾರತ-ಬಾಂಗ್ಲಾದೇಶ ಟೆಸ್ಟ್ ಪಂದ್ಯದ ಟಿಕೆಟ್ ಮಾರಾಟದ ವಿವರ ಹೊರಬಿದ್ದಿದೆ. ಪಂದ್ಯವು ಪ್ರತಿ ಐದು ದಿನಗಳಲ್ಲಿ ಬೆಳಿಗ್ಗೆ 9:30 ಕ್ಕೆ ಪ್ರಾರಂಭವಾಗಲಿದೆ.

ಟಿಕೆಟ್ ಬುಕ್ ಮಾಡುವುದು ಹೇಗೆ?

ಭಾರತ ಮತ್ತು ಬಾಂಗ್ಲಾದೇಶ ನಡುವಿನ ಟೆಸ್ಟ್ ಪಂದ್ಯದ ಟಿಕೆಟ್‌ಗಳ ಮಾರಾಟ ಇಂದು (ಸೋಮವಾರ) ಬೆಳಗ್ಗೆ ಆರಂಭವಾಗಿದೆ. insider.in ವೆಬ್ ಸೈಟ್ ಮೂಲಕ ಅಭಿಮಾನಿಗಳು ಟಿಕೆಟ್ ಖರೀದಿಸಬಹುದು ಎಂದು ಬಿಸಿಸಿಐ ಮಾಹಿತಿ ನೀಡಿದೆ. ಟಿಕೆಟ್‌ನ ಆರಂಭಿಕ ಬೆಲೆ 1000 ರೂ. ಗಳಿದೆ.

ಸ್ಟ್ಯಾಂಡ್‌ಗಳ ಹೆಸರು ಮತ್ತು ಟಿಕೆಟ್ ದರ

1) ಸಿ, ಡಿ, ಇ ಕೆಳ ಹಂತ- 1000 ರೂ.
2) ಐ, ಜೆ, ಕೆ ಕೆಳ ಹಂತ- 2000 ರೂ.
3) ಐ, ಜೆ, ಕೆ ಮೇಲಿನ ಶ್ರೇಣಿ- 1250 ರೂ.
4) ಕೆಎಂಕೆ ಟೆರೇಸ್- 5000 ರೂ.
5) ಸಿ, ಡಿ, ಇ ಹಾಸ್ಪಿಟಾಲಿಟಿ ಬಾಕ್ಸ್ (ಎ/ಸಿ)- 10000 ರೂ.
6) ಜೆ ಹಾಸ್ಪಿಟಾಲಿಟಿ ಬಾಕ್ಸ್ (ಎ/ಸಿ)- 15000 ರೂ.

Story first published: Monday, September 9, 2024, 18:27 [IST]
Other articles published on Sep 9, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+