Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಭಾರತ vs ಬಾಂಗ್ಲಾ ಡೇ-ನೈಟ್ ಟೆಸ್ಟ್: ಬೆಟ್ಟಿಂಗ್ ಆರೋಪದಡಿ ನಾಲ್ವರ ಸೆರೆ

India vs Bangladesh: Four arrested for betting in Kolkata

ಕೋಲ್ಕತ್ತಾ, ನವೆಂಬರ್ 23: ಈಡನ್ ಗಾರ್ಡನ್‌ನಲ್ಲಿ ನಡೆಯುತ್ತಿರುವ ಭಾರತ vs ಬಾಂಗ್ಲಾದೇಶ ಐತಿಹಾಸಿಕ ಪಿಂಕ್‌ ಬಾಲ್ ಟೆಸ್ಟ್ ಪಂದ್ಯದ ವೇಳೆ ಬೆಟ್ಟಿಂಗ್ ನಡೆಸುತ್ತಿದ್ದರು ಎಂಬ ಆರೋಪದಡಿಯಲ್ಲಿ ನಾಲ್ವರನ್ನು ಬಂಧಿಸಲಾಗಿದೆ. ಕೋಲ್ಕತ್ತಾದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಶನಿವಾರ ಈ ಮಾಹಿತಿ ನೀಡಿದ್ದಾರೆ.

ಜೋರಬಗನ್ ಪೊಲೀಸ್ ಠಾಣೆ ವ್ಯಾಪ್ತಿಯ ಬೃಂದಾವನ್ ಬಾಸಕ್ ಸ್ಟ್ರೀಟ್‌ನಲ್ಲಿ ಕ್ರಿಕೆಟ್ ಬೆಟ್ಟಿಂಗ್‌ ಆ್ಯಪ್ ಬಳಸಿ ಬೆಟ್ಟಿಂಗ್ ದಂಧೆ ನಡೆಸುತ್ತಿದ್ದ ನಾಲ್ವರನ್ನು ಶುಕ್ರವಾರ (ನವೆಂಬರ್ 22) ಸಂಜೆ ಬಂಧಿಸಲಾಗಿದೆ ಎಂದು ನಗರ ಪೊಲೀಸ್ ಜಂಟಿ ಆಯುಕ್ತ (ಕ್ರೈಮ್) ಮುರುಳೀಧರ್ ಶರ್ಮಾ ಹೇಳಿದ್ದಾರೆ.

ಭಾರತ vs ಬಾಂಗ್ಲಾದೇಶ, ಡೇ-ನೈಟ್ ಟೆಸ್ಟ್, Live ಸ್ಕೋರ್‌ಕಾರ್ಡ್

1
46120

ಕುಂದನ್ ಸಿಂಗ್ (22 ವರ್ಷ), ಮುಕೇಶ್ ಮಾಲಿ (32), ಸಂಜಯ್ ಸಿಂಗ್ (42) ಅವರನ್ನು ಮೊದಲು ಬಂಧಿಸಿ ವಿಚಾರಣೆ ನಡೆಸಲಾಗಿತ್ತು. ಅವರು ನೀಡಿದ ಹೇಳಿಕೆ ಮೇರೆಗೆ ಮತ್ತೋರ್ವ ಆರೋಪಿ ಮೊಹಮ್ಮದ್ ಸರ್ಜಿಲ್ ಹೊಸೈನ್‌ (22) ಅನ್ನು ನ್ಯೂ ಮಾರ್ಕೆಟ್ ಏರಿಯಾ ಬಳಿ ಬಂಧಿಸಲಾಗಿದೆ ಎಂದು ತಿಳಿದುಬಂದಿದೆ.

ಬಂಧಿತ ಆರೋಪಿಗಳಿಂದ 4 ಮೊಬೈಲ್ ಫೋನ್‌ಗಳು, 2 ಕಂಪ್ಯೂಟರ್‌ಗಳು, ನೋಟ್‌ ಬುಕ್‌ ಮತ್ತು ಸುಮಾರು 2,05,000 ರೂ. ನಗದನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಶರ್ಮಾ ತಿಳಿಸಿದ್ದಾರೆ. ಅಂದ್ಹಾಗೆ, ನವೆಂಬರ್ 22ರಿಂದ ಆರಂಭಗೊಂಡಿರುವ ಭಾರತ-ಬಾಂಗ್ಲಾ ಡೇ-ನೈಟ್ ಟೆಸ್ಟ್ ನವೆಂಬರ್ 26ರಂದು ಕೊನೆಗೊಳ್ಳಲಿದೆ.

Story first published: Saturday, November 23, 2019, 12:23 [IST]
Other articles published on Nov 23, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+