For Quick Alerts
ALLOW NOTIFICATIONS  
For Daily Alerts
 

ನನಗೆ ಒತ್ತಡದ ಅನುಭವವಾಗಲಿಲ್ಲ: 5 ವಿಕೆಟ್ ಗೊಂಚಲು ಪಡೆದ ಬಳಿಕ ಕುಲ್ದೀಪ್ ಯಾದವ್ ಮಾತು

India vs Bangladesh: Kuldeep Yadav said didnt feel that kind of pressure

ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಪರವಾಗಿ ಬೌಲಿಂಗ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿ ಮಿಂಚಿದ್ದಾರೆ. ಐದು ವಿಕೆಟ್‌ಗಳ ಗೊಂಚಲು ಪಡೆದಿರುವ ಕುಲ್ದೀಪ್ ಯಾದವ್ ಟೆಸ್ಟ್ ಮಾದರಿಯಲ್ಲಿ ತನ್ನ ಸಾಮರ್ಥ್ಯವನ್ನು ಪ್ರದರ್ಶಿಸಿದ್ದಾರೆ. ಎರಡನೇ ದಿನದಾಟದಲ್ಲಿ ನಾಲ್ಕು ವಿಕೆಟ್ ಪಡೆದುಕೊಂಡಿದ್ದ ಕುಲ್ದೀಪ್ ಮೂರನೇ ದಿನ ಮತ್ತೊಂದು ವಿಕೆಟ್ ಸಂಪಾದಿಸಿ ಐದು ವಿಕೆಟ್‌ಗಳ ಗೊಂಚಲು ಪಡೆದರು.

ಕುಲ್ದೀಪ್ ಯಾದವ್ ಆಡಿರುವ 14 ಇನ್ನಿಂಗ್ಸ್‌ನಲ್ಲಿ ಅವರ 3ನೇ ಐದು ವಿಕೆಟ್‌ಗಳ ಗೊಂಚಲು ಇದಾಗಿದೆ. ಅಲ್ಲದೆ ಇದು ಕುಲ್ದೀಪ್ ಯಾದವ್ ಅವರ ವೈಯಕ್ತಿಕವಾಗಿ ಅತ್ಯುತ್ತಮ ಪ್ರದರ್ಶನವೂ ಆಗಿದೆ. ಇನ್ನು ಬೌಲಿಂಗ್‌ನಲ್ಲಿ ಅಲ್ಲದೆ ಬ್ಯಾಟಿಂಗ್‌ನಲ್ಲಿಯೂ ಕುಲ್ದೀಪ್ ಈ ಪಂದ್ಯದಲ್ಲಿ ಮಿಂಚಿದ್ದು 114 ಎಸೆತಗಳನ್ನು ಎದುರಿಸಿ 40 ರನ್‌ಗಳನ್ನು ಗಳಿಸಿದರು. ಈ ಬ್ಯಾಟಿಂಗ್‌ನ ಕಾರಣದಿಂದಾಗಿ ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ 400ಕ್ಕೂ ಅಧಿಕ ರನ್ ಗಳಿಸಲು ಸಾಧ್ಯವಾಯಿತು.

28ರ ಹರೆಯದ ಲೆಗ್ ಸ್ಪಿನ್ನರ್ 2021ರ ಫೆಬ್ರವರಿಯಲ್ಲಿ ಚೆನ್ನೈನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಕೊನೆಯದಾಗಿ ಆಡಿದ್ದರು. ಆದರೆ ಭಾರತದ ವೈಟ್‌ಬಾಲ್ ತಂಡದಲ್ಲಿ ಆಡುವ ಬಳಗದಲ್ಲಿ ಹೆಚ್ಚಿನ ಅವಕಾಶ ಪಡೆಯದಿದ್ದರೂ ಸ್ಕ್ವಾಡ್‌ನಲ್ಲಿ ಅವಕಾಶ ಪಡೆದುಕೊಂಡಿದ್ದರು. ಆದರೆ ಚಟ್ಟೋಗ್ರಾಮ್ ಟೆಸ್ಟ್‌ನಲ್ಲಿ ಭಾರತವು ಮೂರು ಸ್ಪಿನ್ ಮತ್ತು ಎರಡು ವೇಗದ ಬೌಲಿಂಗ್ ಆಯ್ಕೆಗಳೊಂದಿಗೆ ಕಣಕ್ಕಿಳಿಯಲು ನಿರ್ಧರಿಸಿದ ಕಾರಣ ಕುಲ್ದೀಪ್ ಯಾದವ್‌ಗೆ ಅವಕಾಶ ದೊರೆತಿದೆ.

ಇನ್ನು ಸುದೂರ್ಘ ಕಾಲದ ಬಳಿಕ ಭಾರತ ತಂಡದ ಆಡುವ ಬಳಗದಲ್ಲಿ ಸ್ಥಾನವನ್ನು ಪಡೆದಿದ್ದರೂ ಇದು ತನಗೆ ಒತ್ತಡವನ್ನು ಮಾಡಲಿಲ್ಲ ಎಂದಿದ್ದಾರೆ ಕುಲ್ದೀಪ್ ಯಾದವ್. ಆಡುವ ಬಳಗದಲ್ಲಿ ಇಲ್ಲದಿದ್ದರೂ ತಂಡದೊಂದಿಗೆ ಇಒದ್ದ ಕಾರಣ ಆ ಒತ್ತಡ ತನ್ನ ಅನುಭವಕ್ಕೆ ಬರಲಿಲ್ಲ ಎಂದಿದ್ದಾರೆ. "ಭಾರತ ತಂಡದಲ್ಲಿ ಬಹಳ ಕಾಲದಿಂದ ಆಡಿಲ್ಲ ಎಂಬ ಬಗ್ಗೆ ನಾನು ಆಲೋಚನೆ ಮಾಡಲಿಲ್ಲ. ನೀವು ಯಾವುದೇ ಮಾದರಿಯಲ್ಲಿಯೂ ಬಹಳ ಕಾಲದಿಂದ ಆಡದಿದ್ದರೆ ಹಾಗೂ ತಂಡದೊಂದಿಗೆ ಸಮಯವನ್ನು ಕಳೆಯದಿದ್ದರೆ ಆಗ ಪರಿಸ್ಥಿತಿ ಭಿನ್ನವಾಗಿರುತ್ತದೆ. ಆದರೆ ಯಾವುದಾದರೂ ಮಾದರಿಯಲ್ಲಿ ಆಡುತ್ತಿದ್ದಾಗ ಆ ಒತ್ತಡ ಇರುವುದಿಲ್ಲ" ಎಂದಿದ್ದಾರೆ ಕುಲ್ದೀಪ್ ಯಾದವ್.

Story first published: Friday, December 16, 2022, 23:13 [IST]
Other articles published on Dec 16, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+