ಅಹರ್ನಿಶಿ ಟೆಸ್ಟ್ ಪಂದ್ಯ 3ನೇ ದಿನ Live: ಮೂರೇ ದಿನದಲ್ಲಿ ಗೆಲುವು ಆಚರಿಸಿದ ಭಾರತ

ಕೊಲ್ಕತ್ತಾ ನವೆಂಬರ್ 24: ಈಡನ್ ಗಾರ್ಡನ್‌ನಲ್ಲಿ ನಡೆಯುತ್ತಿರುವ ಐತಿಹಾಸಿಕ ಪಂದ್ಯವನ್ನು ಭಾರತ ಭರ್ಜರಿಯಾಗಿ ಗೆದ್ದುಕೊಂಡಿದೆ. ಅದ್ಭುತ ಬೌಲಿಂಗ್ ಮೂಲಕ ಪಂದ್ಯವನ್ನು ಸಂಪೂರ್ಣವಾಗಿ ತನ್ನ ತೆಕ್ಕೆಗೆವ ತೆಗೆದುಕೊಂಡಿತ್ತು. ನಿನ್ನೆ 152 ರನ್‌ಗಳಿಗೆ ಆರುವಿಕೆಟ್ ಕಳೆದುಕೊಂಡಿದ್ದ ಬಾಂಗ್ಲಾ ಇಂದಿನ ಮೊದಲ ಅವಧಿಯಲ್ಲೇ ಉಳಿದ ಎಲ್ಲಾ ವಿಕೆಟ್ ಕಳೆದುಕೊಂಡು ಶರಣಾಗಿದೆ.
ಭಾರತದ ವೇಗದ ಬೌಲಿಂಗ್ ದಾಳಿಗೆ ಬೆದರಿದ ಬಾಂಗ್ಲಾದೇಶದ ಆಟಗಾರರು ಒಬ್ಬರ ಹಿಂದೊಬ್ಬರಂತೆ ಫೆವಿಲಿಯನ್ ಸೇರಿಕೊಂಡರು. ಎರಡನೇ ಇನ್ನಿಂಗ್ಸ್‌ನಲ್ಲಿ ಉಮೇಶ್ ಯಾದವ್ 5 ವಿಕೆಟ್ ಪಡೆದರೆ ಇಶಾಂತ್ ಶರ್ಮಾ 4 ವಿಕೆಟ್ ಕೀಳುವಲ್ಲಿ ಯಶಸ್ವಿಯಾಗಿದ್ದಾರೆ. ಬಾಂಗ್ಲಾದ ಇನ್ನೋರ್ವ ಆಟಗಾಟ ಮಹಮ್ಮದುಲ್ಲಾ ಗಾಯಗೊಂಡು ನಿವೃತ್ತರಾಗಿದ್ದರು.
ಮೊದಲ ಇನ್ನಿಂಗ್ಸ್‌ನಲ್ಲಿ ಇಶಾಂತ್ ಶರ್ಮಾ 5ವಿಕೆಟ್ ಗೊಂಚಲು ಪಡೆದಿದ್ದರೆ ಎರಡನೇ ಇನ್ನಿಂಗ್ಸ್‌ನಲ್ಲಿ ಉಮೇಶ್ ಯಾದವ್ ಈ ಸಾಧನೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಇಡೀ ಪಂದ್ಯದಲ್ಲಿ ಭಾರತದ ಸ್ಪಿನ್ನರ್‌ಗಳು ಕೇವಲ 7ಓವರ್ ಮಾತ್ರವೇ ಬೌಲಿಂಗ್ ಮಾಡಿದ್ದಾರೆ. ಇದು ಭಾರತದ ವೇಗಿಗಳ ಪರಾಕ್ರಮಕ್ಕೆ ಸಾಕ್ಷಿಯಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications