ಶುಬ್ಮನ್ ಗಿಲ್ ಸಿಕ್ಸರ್‌ಗೆ ಸಂಭ್ರಮಿಸಿದ ಸಾರಾ ತೆಂಡೂಲ್ಕರ್: ವಿಡಿಯೋ
ಭಾರತ ಹಾಗೂ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಟೀಮ್ ಇಂಡಿಯಾ ಬೌಲಿಂಗ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದ ಬಳಿಕ ಬ್ಯಾಟಿಂಗ್‌ನಲ್ಲಿಯೂ ಅಬ್ಬರಿಸಿದೆ. ಅಗ್ರ ಕ್ರಮಾಂಕದ ಆಟಗಾರರ ಅದ್ಭುತ ಪ್ರದರ್ಶನದಿಂದಾಗಿ ಟೀಮ್ ಇಂಡಿಯಾ ಬಾಂಗ್ಲಾದೇಶ ನೀಡಿದ ಗುರಿಯನ್ನು ಸುಲಭವಾಗಿ ಬೆನ್ನಟ್ಟಿದೆ. ಇನ್ನು ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಆಟಗಾರರ ಪ್ರದರ್ಶನವನ್ನು ಕೋಟ್ಯಂತರ ಅಭಿಮಾನಿಗಳು ಟಿವಿಯಲ್ಲಿ ವೀಕ್ಷಿಸಿದ್ದರೆ ಮೈದಾನದಲ್ಲಿಯೂ ಕಿಕ್ಕಿರಿದು ಸೇರಿದ್ದ ಅಭಿಮಾನಿಗಳು ಮನರಂಜನೆ ಪಡೆದುಕೊಂಡಿದ್ದಾರೆ.
ಆದರೆ ಈ ಪಂದ್ಯದಲ್ಲಿ ಟೀಮ್ ಇಂಡಿಯಾದ ಆರಂಭಿಕ ಆಟಗಾರರಾದ ರೋಹಿತ್ ಶರ್ಮಾ ಹಾಗ ಶುಬ್ಮನ್ ಗಿಲ್ ಬ್ಯಾಟಿಂಗ್ ನಡೆಸುತ್ತಿರಬೇಕಾದರೆ ಭಾರತೀಯ ಅಭಿಮಾನಿಗಳ ಚಿತ್ತ ಓರ್ವ ವಿಶೇಷ ಅಭಿಮಾನಿಯ ಮೇಲೆ ನೆಟ್ಟಿತ್ತು. ಅದು ಬೇರೆ ಯಾರೂ ಅಲ್ಲ, ದಿಗ್ಗಜ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಪುತ್ರಿ ಸಾರಾ ತೆಂಡೂಲ್ಕರ್. ಟೀಮ್ ಇಂಡಿಯಾದ ಯುವ ಆರಂಭಿಕ ಆಟಗಾರ ಶುಬ್ಮನ್ ಗಿಲ್ ಹೆಸರು ಸಚಿನ್ ಪುತ್ರಿ ಸಾರಾ ಜೊತೆಗೆ ತಳುಕು ಹಾಕಿಕೊಳ್ಳುತ್ತಿರುವ ಕಾರಣದಿಂದಾಗಿ ಗಿಲ್ ಆಟಕ್ಕೆ ಸಾರಾ ಸಂಭ್ರಮಿಸುತ್ತಿರುವ ದೃಶ್ಯಗಳು ಈಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೂರಲ್ ಆಗುತ್ತಿವೆ.

ಈ ಪಂದ್ಯದಲ್ಲಿ ಶುಬ್ಮನ್ ಗಿಲ್ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನಿಡಿದ್ದು ವಿಶ್ವಕಪ್‌ನಲ್ಲಿ ಚೊಚ್ಚಲ ಅರ್ಧ ಶತಕ ಸಿಡಿಸಿದ್ದಾರೆ. 55 ಎಸೆತಗಳಲ್ಲಿ ಎದುರಿಸಿದ ಶುಬ್ಮನ್ ಗಿಲ್ ಐದು ಬೌಂಡರಿ ಹಾಗೂ ಎರಡು ಭರ್ಜರಿ ಸಿಕ್ಸರ್ ಸಿಡಿಸಿದ್ದು 53 ರನ್‌ಗಳನ್ನು ಬಾರಿಸಿದರು. ಕ್ರೀಸ್‌ನಲ್ಲಿ ಗಿಲ್ ಇರುವಷ್ಟು ಹೊತ್ತ ಕೂಡ ಕ್ಯಾಮರಾದ ಕಣ್ಣು ಸಾರಾ ಮೇಲಿದ್ದು ಗಿಲ್ ಬೌಂಡರಿ ಸಿಕ್ಸರ್ ಬಾರಿಸುತ್ತಿದ್ದರೆ ಸಾರಾ ಸಂಭ್ರಮಿಸುತ್ತಿರುವ ದೃಶ್ಯಗಳು ಸೆರೆಯಾಗಿದೆ.
ಟೀಮ್ ಇಂಡಿಯಾ ಬ್ಯಾಟಿಂಗ್‌ನ 7ನೇ ಓವರ್‌ನಲ್ಲಿ ಗಿಲ್ 10* ರನ್‌ಗಳೊಂದಿಗೆ ಕ್ರೀಸ್‌ನಲ್ಲಿದ್ದಾಗ ಭರ್ಜರಿ ಬೌಂಡರಿಯೊಂದನ್ನು ಬಾರಿಸಿದರು. ಈ ಸಂದರ್ಭದಲ್ಲಿ ಸಾರಾ ಉತ್ಸಾಹದಿಂದ ಚಪ್ಪಾಳೆ ತಟ್ಟಿ ಸಂಭ್ರಮಿಸುತ್ತಿರುವ ವಿಡಿಯೋ ಸೆರೆಯಾಯಿತು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಕ್ಷಣಾರ್ಧದಲ್ಲಿ ಸಾಕಷ್ಟು ವೈರಲ್ ಆಗಿದೆ.
ಶುಬ್ಮನ್ ಗಿಲ್ ಹಾಗೂ ಸಾರಾ ತೆಂಡೂಲ್ಕರ್ ಕಳೆದ ಕೆಲ ವರ್ಷಗಳಿಂದ ಪ್ರೀತಿಯಲ್ಲಿದ್ದಾರೆ ಎನ್ನುವ ವಿಚಾರ ಆಗಾಗ ಸುದ್ದಿಯಾಗುತ್ತಲೇ ಇದೆ. ಆದರೆ ಈ ಬಗ್ಗೆ ಇಬ್ಬರು ಕೂಡ ಅಧಿಕೃತವಾಗಿ ಈವರೆಗೂ ಯಾವುದೇ ಸ್ಪಷ್ಟತೆಯನ್ನು ನೀಡಿಲ್ಲ. ಆದರೆ ಈ ಇಬ್ಬರ ಹೆಸರು ಮತ್ತೆ ಮತ್ತೆ ಒಡಾಡುತ್ತಲೇ ಇದೆ ಎನ್ನುವುದು ಮಾತ್ರ ನಿಜ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications