Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಟಿ20 : ಬಾಂಗ್ಲಾ ಮಣಿಸಿ, ಫೈನಲಿಗೆ ಲಗ್ಗೆ ಇಟ್ಟ ಭಾರತ

India Vs Bangladesh, Nidahas Trophy 5th T20I Match report

ಕೊಲಂಬೋ, ಮಾರ್ಚ್ 14: ಶ್ರೀಲಂಕಾ ವಿರುದ್ಧದ ಪಂದ್ಯವನ್ನು ಗೆದ್ದ ಉತ್ಸಾಹದಲ್ಲಿರುವ ರೋಹಿತ್ ಪಡೆ, ಆತ್ಮವಿಶ್ವಾಸದಿಂದ ಬಾಂಗ್ಲಾದೇಶವನ್ನು ಎದುರಿಸಿತು. ಭಾರತ ನೀಡಿದ್ದ 177ರನ್ ಗಳ ಗುರಿಯನ್ನು ಬೆನ್ನು ಹತ್ತಿದ ಬಾಂಗ್ಲಾದೇಶ ನಿಗದಿತ 20 ಓವರ್ ಗಳಲ್ಲಿ 159/6 ಸ್ಕೋರ್ ಮಾಡಿ, 17ರನ್ ಗಳ ಅಂತರ ಅಂತರದಿಂದ ಸೋಲೊಪ್ಪಿಕೊಂಡಿತು.

ಇಲ್ಲಿನ ಎಂ ಪ್ರೇಮದಾಸ ಕ್ರೀಡಾಂಗಣದಲ್ಲಿ ನಿದಹಾಸ್ ಮೂರು ರಾಷ್ಟ್ರಗಳ ಟಿ20 ಸರಣಿಯ ಲೀಗ್ ಪಂದ್ಯದಲ್ಲಿ ಬಾಂಗ್ಲಾದೇಶ ಮಣಿಸಿದ ಭಾರತ, ಫೈನಲ್ ತಲುಪಿದೆ.

ಶಿಖರ್ ಧವನ್ 27 ಎಸೆತಗಳಲ್ಲಿ 35ರನ್ (5 ಬೌಂಡರಿ, 1ಸಿಕ್ಸರ್) ಗಳಿಸಿ ಔಟಾದರೆ, ಸುರೇಶ್ ರೈನಾ 30 ಎಸೆತಗಳಲ್ಲಿ 47ರನ್ ಬಾರಿಸಿದರು. ನಾಯಕ ರೋಹಿತ್ ಶರ್ಮ ತಮ್ಮ ಎಂದಿನ ಲಯ ಕಂಡುಕೊಂಡು 61 ಎಸೆತಗಳಲ್ಲಿ 89ರನ್ ಚೆಚ್ಚಿದರು. 5 ಬೌಂಡರಿ ಹಾಗೂ 5 ಸಿಕ್ಸರ್ ಸಿಡಿಸಿದ ರೋಹಿತ್ ಕೊನೆ ಎಸೆತದಲ್ಲಿ ರನೌಟ್ ಆದರು.

ಇಲ್ಲಿನ ಎಂ ಪ್ರೇಮದಾಸ ಕ್ರೀಡಾಂಗಣದಲ್ಲಿ ನಿದಹಾಸ್ ಮೂರು ರಾಷ್ಟ್ರಗಳ ಟಿ20 ಸರಣಿಯ ಲೀಗ್ ಪಂದ್ಯದಲ್ಲಿ ಬಾಂಗ್ಲಾದೇಶ ನಾಯಕ ಮೊಹಮ್ಮದುಲ್ಲಾ ಅವರು ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಭಾರತ ತಂಡದಲ್ಲಿ ವೇಗಿ ಜಯದೇವ್ ಉನದ್ಕತ್ ಗೆ ವಿಶ್ರಾಂತಿ ನೀಡಲಾಗಿದ್ದು, ಯುವ ವೇಗಿ ಮೊಹಮ್ಮದ್ ಸಿರಾಜ್ ಗೆ ಅವಕಾಶ ನೀಡಲಾಗಿದೆ.

ಸ್ಕೋರ್ ಕಾರ್ಡ್

ಬಾಂಗ್ಲಾದೇಶ ತಾನಾಡಿರುವ ಕಳೆದ 15 ಟಿ20 ಪಂದ್ಯಗಳಲ್ಲಿ 13 ಪಂದ್ಯಗಳಲ್ಲಿ ಸೋಲು ಕಂಡಿದೆ. ಭಾರತ ವಿರುದ್ಧ ಇದು ಏಳನೇ ಪಂದ್ಯವಾಗಿದ್ದು, ಆರು ಪಂದ್ಯಗಳಲ್ಲೂ ಬಾಂಗ್ಲಾದೇಶ ಸೋಲು ಅನುಭವಿಸಿದೆ.

ತಂಡ ಇಂತಿದೆ:
ಭಾರತ: ರೋಹಿತ್ ಶರ್ಮ (ನಾಯಕ), ಶಿಖರ್ ಧವನ್, ಲೋಕೇಶ್ ರಾಹುಲ್, ಸುರೇಶ್ ರೈನಾ, ಮನೀಶ್ ಪಾಂಡೆ, ದಿನೇಶ್ ಕಾರ್ತಿಕ್(ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ವಿಜಯ್ ಶಂಕರ್, ಮೊಹಮ್ಮದ್ ಸಿರಾಜ್, ಶಾರ್ದೂಲ್ ಠಾಕೂರ್, ಯಜುವೇಂದ್ರ ಚಹಾಲ್.

ಬಾಂಗ್ಲಾದೇಶ: ತಮೀಮ್ ಇಕ್ಬಾಲ್, ಲಿಟೋನ್ ದಾಸ್, ಸೌಮ್ಯ ಸರ್ಕಾರ್, ಮುಷ್ಫಿಕರ್ ರಹೀಂ(ವಿಕೆಟ್ ಕೀಪರ್), ಮೊಹಮ್ಮದುಲ್ಲಾ(ನಾಯಕ), ಸಬ್ಬೀರ್ ರಹ್ಮಾನ್, ಮೆಹದಿ ಹಸನ್, ಅಬು ಹಿದರ್, ರುಬೇಲ್ ಹುಸೇನ್, ಮುಷ್ತಫಿಜುರ್ ರಹ್ಮನ್, ನಜ್ಮಲ್ ಇಸ್ಲಾಮ್.

Story first published: Thursday, March 15, 2018, 0:07 [IST]
Other articles published on Mar 15, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+