IND vs BAN ODI: ರೋಹಿತ್ vs ಮುಷ್ತಫಿಜುರ್, ವಿರಾಟ್ vs ತಸ್ಕಿನ್
ಭಾರತ ಹಾಗೂ ಬಾಂಗ್ಲಾದೇಶ ತಂಡಗಳ ನಡುವಣ ಹೈವೋಲ್ಟೇಜ್ ಫೈಟ್ ನಡೆಯಲಿದೆ. ಚಾಂಪಿಯನ್ಸ್ ಟ್ರೋಫಿಯ "ಬಿ" ಗುಂಪಿನ ಪಂದ್ಯಕ್ಕೆ ದುಬೈ ಮೈದಾನ ಸಾಕ್ಷಿಯಾಗಲಿದೆ. ಅಂಕಿ ಅಂಶಗಳ ಲೆಕ್ಕಾಚಾರದಲ್ಲಿ ಬಲಿಷ್ಠವಾಗಿರುವ ಭಾರತ, ಈ ಪಂದ್ಯದಲ್ಲಿ ಗೆದ್ದು ಶುಭಾರಂಭ ಮಾಡುವ ನಿರೀಕ್ಷೆಯಲ್ಲಿದೆ. ಭಾರತ ತಂಡದ ಸ್ಟಾರ್ ಆಟಗಾರರು ಮೈದಾನ ಪ್ರವೇಶಿಸಲಿದ್ದು ಕುತೂಹಲ ಮನೆ ಮಾಡಿದೆ. ಉಭಯ ದೇಶಗಳ ನಡುವೆ ಯಾವಾಗಲೂ ಪಂದ್ಯಗಳು ನಡೆದರೂ ಉತ್ಸಾಹ ಇದ್ದೇ ಇರುತ್ತದೆ.
ಇನ್ನು ಬಾಂಗ್ಲಾದೇಶ ಹಾಗೂ ಭಾರತ ತಂಡಗಳು ಚಾಂಪಿಯನ್ಸ್ ಟ್ರೋಫಿಯಲ್ಲಿ ಕೇವಲ ಒಂದು ಬಾರಿ ಮುಖಾಮುಖಿ ಆಗಿವೆ. ಈ ಟೂರ್ನಿಯಲ್ಲಿ ಭಾರತ ಭರ್ಜರಿ ಜಯ ಸಾಧಿಸಿದೆ. ಬಿ ಗುಂಪಿನ ಮೊದಲ ಪಂದ್ಯದ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಈ ಪಂದ್ಯದಲ್ಲಿ ಕೀ ಸ್ಟಾರ್ ಪ್ಲೇಯರ್ಸ್‌ಗಳ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಹಾಗಿದ್ದರೆ ಯಾವ ಪ್ಲೇಯರ್‌ಗೆ ಯಾವ ಪ್ಲೇಯರ್ ಸವಾಲು ಎಸೆದಿದ್ದಾರೆ ಎಂಬ ಬಗ್ಗೆ ಮಾಹಿತಿ ಇಲ್ಲಿದೆ.

ರೋಹಿತ್ vs ಮುಷ್ತಫಿಜುರ್
ಉಭಯ ದೇಶಗಳ ನಡುವಿನ ಪಂದ್ಯ ನಡೆದಾಗ ರೋಹಿತ್ ಶರ್ಮಾ ಹಾಗೂ ಮುಷ್ತಾಫಿಜುರ್ ರಹಮಾನ್ ಅವರ ನಡುವೆ ಕಾದಾಟ ಕಾಣಬಹುದಾಗಿದೆ. ಈ ಇಬ್ಬರ ನಡುವಿನ ಕಾಳಗ ಹೆಚ್ಚು ಚರ್ಚೆಗೆ ಗ್ರಾಸವಾಗಿದೆ. ಇನ್ನು ಈ ಇಬ್ಬರೂ ಆಟಗಾರರು 10 ಬಾರಿ ಮುಖಾಮುಖಿಯಾಗಿದ್ದಾರೆ. ಈ ವೇಳೆ ರಹಮಾನ್ 3 ಬಾರಿ ರೋಹಿತ್ ವಿಕೆಟ್ ಪಡೆಯುವಲ್ಲಿ ಸಫಲರಾಗಿದ್ದಾರೆ. ಇನ್ನು ರೋಹಿತ್, ಮುಷ್ತಾಫಿಜುರ್ ವಿರುದ್ಧ 43.33ರ ಸರಾಸರಿಯಲ್ಲಿ 130 ರನ್ ಸಿಡಿಸಿದ್ದಾರೆ.

ವಿರಾಟ್ vs ತಸ್ಕಿನ್
ಟೀಮ್ ಇಂಡಿಯಾದ ಸೂಪರ್ ಸ್ಟಾರ್ ವಿರಾಟ್ ಕೊಹ್ಲಿ ಹಾಗೂ ತಸ್ಕಿನ್ ಅಹ್ಮದ್ ಅವರ ನಡುವಿನ ಫೈಟ್ ಎಲ್ಲರ ಚಿತ್ತ ಕದ್ದಿದೆ. ಇನ್ನು ಬಾಂಗ್ಲಾ ವಿರುದ್ಧ ಉತ್ತಮ ಅಂಕಿ ಅಂಶಗಳನ್ನು ಹೊಂದಿದ್ದಾರೆ. ತಸ್ಕಿನ್ ಅಹ್ಮದ್ ಅವರು ಭಾರತ ವಿರುದ್ಧ ಆಡಿದ 4 ಪಂದ್ಯಗಳಲ್ಲಿ 1 ಬಾರಿ ಅವರನ್ನು ಪೆವಿಲಿಯನ್‌ಗೆ ಅಟ್ಟಿದ್ದಾರೆ.

ಕ್ಯಾಪ್ಟನ್ vs ಶಮಿ
ಬಾಂಗ್ಲಾದೇಶ ತಂಡದ ನಾಯಕ ನಜ್ಮುಲಾ ಹುಸೇನ್ ಶಂಟೋ ಹಾಗೂ ಮೊಹಮ್ಮದ್ ಶಮಿ ನಡುವೆ ಜಿದ್ದು ಕಾಣಲಿದೆ. ಬಹು ದಿನಗಳ ಬಳಿಕ ಅಂಗಳಕ್ಕೆ ಮರಳಿರುವ ಶಮಿ ಎರಡೂ ಕಡೆಗಳಲ್ಲಿ ಚೆಂಡನ್ನು ತಿರುಗಿಸ ಬಲ್ಲ ಕ್ಷಮತೆಯನ್ನು ಹೊಂದಿರುವ ಆಟಗಾರ. ಹೀಗಾಗಿ ಇವರು ಬಾಂಗ್ಲಾ ಕ್ಯಾಪ್ಟನ್‌ಗೆ ಕಾಟ ನೀಡುವ ಸಾಧ್ಯತೆ ಇದೆ.

ಜಡೇಜಾ vs ರಹೀಮ್
ಸ್ಟಾರ್ ಆಲ್‌ರೌಂಡರ್ ರವೀಂದ್ರ ಜಡಜೇ ಹಾಗೂ ಮುಷ್ಫೀಕರ್ ರಹೀಮ್ ಕಾಳಗದ ಮೇಲೂ ಎಲ್ಲರ ಚಿತ್ತ ನೆಟ್ಟಿದೆ. ಇನ್ನು ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಅಮೋಘ ಬೌಲಿಂಗ್ ಪ್ರದರ್ಶನ ನೀಡಿದ್ದರು. ಇನ್ನು ಎಂಟು ಬಾರಿ ಬಾಂಗ್ಲಾ ವಿರುದ್ಧ ಜಡ್ಡು ಕಣಕ್ಕೆ ಇಳಿದಿದ್ದು, ಈ ವೇಳೆ ಒಮ್ಮೆ ರಹೀಮ್ ಅವರನ್ನು ಔಟ್ ಮಾಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications