IND vs BAN ODI: ಬಾಂಗ್ಲಾ ವಿರುದ್ಧ ಸೂಪರ್ ಸ್ಟಾರ್ಸ್ ಆರ್ಭಟ ಫಿಕ್ಸ್
ಇನ್ನು ಎರಡು ದಿನಗಳಲ್ಲಿ ಚಾಂಪಿಯನ್ಸ್ ಟ್ರೋಫಿ ಆರಂಭವಾಗಲಿದೆ. ಈ ಟೂರ್ನಿಗಾಗಿ ಭಾಹವಹಿಸಲು ಎಲ್ಲ ತಂಡಗಳು ಪಾಕ್ ತಲುಪಿವೆ. ಭಾರತ ಸಹ ಈ ಟೂರ್ನಿಯಲ್ಲಿ ಭಾಗವಹಿಸಲಿದೆ. ಟೀಮ್ ಇಂಡಿಯಾ ತನ್ನ ಪಂದ್ಯಗಳನ್ನು ದುಬೈನಲ್ಲಿ ಆಡಲಿದೆ. ಟೀಮ್ ಇಂಡಿಯಾ ಟೂರ್ನಿಯ ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶದ ವಿರುದ್ಧ ಕಾದಾಟ ನಡೆಸಲಿದೆ. ಈ ಪಂದ್ಯದ ಮೇಲೆ ಎಲ್ಲರ ಚಿತ್ತ ನೆಟ್ಟಿದೆ.
ಟೀಮ್ ಇಂಡಿಯಾ ಈ ಪಂದ್ಯವನ್ನು ಗೆದ್ದು ಶುಭಾರಂಭ ಮಾಡುವ ಕನಸು ಕಾಣುತ್ತಿದೆ. ಇನ್ನು ಟೂರ್ನಿಯ ಎರಡನೇ ಪಂದ್ಯದಲ್ಲಿ ಭಾರತ ಸಾಂಪ್ರದಾಯಿಕ ಎದುರಾಳಿ ಪಾಕ್ ವಿರುದ್ಧ ಕಾದಾಟ ನಡೆಸಲಿದೆ. ಈ ಪಂದ್ಯದ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಮಾರ್ಚ್ 2 ರಂದು ನ್ಯೂಜಿಲೆಂಡ್ ವಿರುದ್ಧ ಕಾದಾಟ ನಡೆಸಲಿದೆ.

ಭಾರತ ತನ್ನ ಮೊದಲ ಪಂದ್ಯದಲ್ಲಿ ಬಾಂಗ್ಲಾ ವಿರುದ್ಧ ಕಾದಾಟ ನಡೆಸಲಿದೆ. ಈ ವೇಳೆ ಅಂಕಿ ಅಂಶಗಳತ್ತ ಎಲ್ಲರತ್ತ ಚಿತ್ತ ನೆಟ್ಟಿದೆ. ಉಭಯ ದೇಶಗಳು ಈಗಾಗಲೇ ಒಟ್ಟು 41 ಏಕದಿನ ಪಂದ್ಯಗಳನ್ನು ಆಡಿದ್ದು, ಅದರಲ್ಲಿ ಭಾರತ ಒಟ್ಟು 32 ಪಂದ್ಯ ಗೆದ್ದಿದೆ. ಇನ್ನು ಬಾಂಗ್ಲಾ 8ರಲ್ಲಿ ಗೆಲುವಿನ ನಗೆ ಬೀರಿದೆ. ಇನ್ನು ಒಂದು ಪಂದ್ಯ ಫಲಿತಾಂಶ ಹೀನವಾಗಿದೆ.
ಟೀಮ್ ಇಂಡಿಯಾದ ಆಟಗಾರರಿಗೆ ಬಾಂಗ್ಲಾದೇಶ ವಿರುದ್ಧ ಬ್ಯಾಟ್ ಮಾಡುವುದು ಎಂದರೆ ಅಚ್ಚು ಮೆಚ್ಚು. ಈ ವೇಳೆ ಸ್ಟಾರ್ ಆಟಗಾರರು ಅಬ್ಬರಿಸಿದ್ದಾರೆ. ಈ ದೇಶದ ವಿರುದ್ಧ ಅತಿ ಹೆಚ್ಚು ರನ್ ಬಾರಿಸಿದ ಹೆಗ್ಗಳಿಕೆ ವಿರಾಟ್ ಕೊಹ್ಲಿ ಅವರಿಗೆ ಸಲ್ಲುತ್ತದೆ. ಇವರು ಅಡಿದ 16 ಪಂದ್ಯಗಳಲ್ಲಿ 910 ರನ್ ಸಿಡಿಸಿದ್ದಾರೆ. ಈ ವೇಳೆ 5 ಶತಕಗಳು ಸೇರಿವೆ. ಇನ್ನು ಬಾಂಗ್ಲಾ ಎಂದರೆ ರೋಹಿತ್ ಶರ್ಮಾ ಅವರಿಗೂ ಅಚ್ಚು ಮೆಚ್ಚು.

ಬಾಂಗ್ಲಾದೇಶದ ವಿರುದ್ಧ ಏಕದಿನ ಪಂದ್ಯದಲ್ಲಿ ಭಾರತದ ಬ್ಯಾಟರ್‌ಗಳ ಸಾಧನೆ
ವಿರಾಟ್ ಕೊಹ್ಲಿ, 16 ಪಂದ್ಯ, 910 ರನ್, 5 ಶತಕ, 3 ಅರ್ಧಶತ
ರೋಹಿತ್ ಶರ್ಮಾ, 17 ಪಂದ್ಯ, 786 ರನ್, 3 ಶತಕ, 3 ಅರ್ಧಶತಕ
ಗೌತಮ್ ಗಂಭೀರ್, 11 ಪಂದ್ಯ, 592 ರನ್, 2 ಶತಕ, 3 ಅರ್ಧಶತಕ
ಇನ್ನು ಬೌಲರ್‌ಗಳ ಪಟ್ಟಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಸಾಧನೆಯನ್ನು ಮಾಜಿ ಆಟಗಾರ ಅಜಿತ್ ಅಗರ್ಕರ್ ಅವರಿಗೆ ಸಲ್ಲುತ್ತದೆ. ಇವರು 8 ಪಂದ್ಯಗಳಲ್ಲಿ 16 ವಿಕೆಟ್ ಕಳಿಸಿದ್ದಾರೆ. ಈ ಪಟ್ಟಿಯಲ್ಲಿ ಆಲ್‌ರೌಂಡರ್ ರವೀಂದ್ರ ಜಡೇಜಾಗೆ ಎರಡನೇ ಸ್ಥಾನ. ಇವರು 14 ವಿಕೆಟ್ ಪಡೆದಿದ್ದಾರೆ. ಸಚಿನ್ ತೆಂಡೂಲ್ಕರ್ 12 ವಿಕೆಟ್ ಉರುಳಿಸಿದ್ದಾರೆ.
ಬಾಂಗ್ಲಾ ವಿರುದ್ಧ ಗರಿಷ್ಠ ವಿಕೆಟ್ ಸಾಧಕರು
ಅಜೀತ್ ಅಗರ್ಕರ್, 8 ಪಂದ್ಯ, 16 ವಿಕೆಟ್
ರವೀಂದ್ರ ಜಡೇಜಾ, 13 ಪಂದ್ಯ, 14 ವಿಕೆಟ್
ಸಚಿನ್ ತೆಂಡೂಲ್ಕರ್, 12 ಪಂದ್ಯ, 12 ವಿಕೆಟ್
ಉಭಯ ದೇಶಗಳ ಪಂದ್ಯದಲ್ಲಿ ಗರಿಷ್ಠ ಮೊತ್ತ: 409/8
ಉಭಯ ದೇಶಗಳ ಪಂದ್ಯದಲ್ಲಿ ಕನಿಷ್ಠ ಮೊತ್ತ: 58
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications