Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಭಾರತ vs ಬಾಂಗ್ಲಾ: ಟೀಮ್ ಇಂಡಿಯಾದಲ್ಲಿ ಕೊಹ್ಲಿ ಬದಲು ಪಂತ್, ಸ್ಯಾಮ್ಸನ್?!

India vs Bangladesh: Rishabh Pant, Sanju Samson could be in T20 squad

ನವದೆಹಲಿ, ಅಕ್ಟೋಬರ್ 24: ಮುಂಬರಲಿರುವ ಬಾಂಗ್ಲಾ ವಿರುದ್ಧದ ಸರಣಿಯಲ್ಲಿ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ವಿಶ್ರಾಂತಿ ನೀಡುವ ಬಗ್ಗೆ ಚರ್ಚೆಗಳಾಗುತ್ತಿವೆ. ಹೀಗಾಗಿ ಭಾರತ ಟಿ20 ತಂಡದಲ್ಲಿ ಯುವ ಬ್ಯಾಟ್ಸ್‌ಮನ್ ಕಮ್ ವಿಕೆಟ್ ಕೀಪರ್‌ಗಳಾದ ರಿಷಬ್ ಪಂತ್ ಮತ್ತು ಸಂಜು ಸ್ಯಾಮ್ಸನ್ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ.

ವಿರಾಟ್ ಕೊಹ್ಲಿ ವಿಶ್ರಾಂತಿಯಿಲ್ಲದ ಒಂದರ ಹಿಂದೆ ಮತ್ತೊಂದು ಸರಣಿಯಲ್ಲಿ ಪಾಲ್ಗೊಳ್ಳುತ್ತಲೇ ಇದ್ದಾರೆ. ಅಕ್ಟೋಬರ್ 2018ರಿಂದ ಈವರೆಗೆ ಕೊಹ್ಲಿ ಒಟ್ಟು 56 ಪಂದ್ಯಗಳಲ್ಲಿ 48 ಪಂದ್ಯಗಳನ್ನಾಡಿದ್ದಾರೆ. ಆದ್ದರಿಂದ ಕೊಹ್ಲಿ ವಿಶ್ರಾಂತಿ ಬಯಸಿದರೆ, ಯುವ ಆಟಗಾರರಿಗೆ ಅವಕಾಶ ನೀಡುವತ್ತ ಆಯ್ಕೆ ಸಮಿತಿ ಯೋಚಿಸುತ್ತಿದೆ.

ಕೊಹ್ಲಿ ವಿಶ್ರಾಂತಿ ಪಡೆದರೂ ಯುವ ಆಟಗಾರರಲ್ಲಿ ರಿಷಬ್ ಪಂತ್‌, ಸಂಜು ಸ್ಯಾಮ್ಸನ್ ಮತ್ತು ಶಿವಂ ದೂಬೆ ಇವರಲ್ಲಿ ಯಾರೂ ಅವಕಾಶ ಗಿಟ್ಟಿಸಿಕೊಳ್ಳಬಹುದು.

ಪಾಂಡ್ಯಗೆ ಗಾಯ

ಪಾಂಡ್ಯಗೆ ಗಾಯ

ಬಿರುಸಿನ ಬ್ಯಾಟಿಂಗ್‌ಗೆ ಗುರುತಿಸಿಕೊಂಡಿದ್ದ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಗಾಯಗೊಂಡಿರುವುದರಿಂದ ಅವರ ಸ್ಥಾನಕ್ಕೆ ಹಾರ್ದಿಕ್ ಅವರಂತೆಯೇ ಸ್ಫೋಟಕ ಬ್ಯಾಟಿಂಗ್ ಸಾಮರ್ಥ್ಯ ಹೊಂದಿರುವ ಮುಂಬೈ ಆಲ್ ರೌಂಡರ್, ಶಿವಂ ದೂಬೆ ಅವರನ್ನು ಸರಣಿಯಲ್ಲಿ ಸೇರಿಸಿಕೊಳ್ಳುವ ಕುರಿತೂ ಚರ್ಚೆಗಳಾಗುತ್ತಿವೆ.

ಬಾಂಗ್ಲಾ ಸರಣಿ

ಬಾಂಗ್ಲಾ ಸರಣಿ

ಭಾರತಕ್ಕೆ ಪ್ರವಾಸ ಕೈಗೊಳ್ಳಲಿರುವ ಬಾಂಗ್ಲಾ ನವೆಂಬರ್ 3ರಿಂದ ದೆಹಲಿ, ರಾಜ್‌ಕೋಟ್ ಮತ್ತು ನಾಗ್ಪುರದಲ್ಲಿ ಒಟ್ಟಿಗೆ 3 ಟಿ20 ಪಂದ್ಯಗಳನ್ನಾಡಲಿದೆ. ಜೊತೆಗೆ ಟೆಸ್ಟ್ ಚಾಂಪಿಯನ್‌ಷಿಪ್ ಭಾಗವಾಗಿ ಇಂದೋರ್ ಮತ್ತು ಕೋಲ್ಕತ್ತಾದಲ್ಲಿ 2 ಟೆಸ್ಟ್‌ ಪಂದ್ಯಗಳನ್ನಾಡಲಿದೆ.

ಸ್ಯಾಮ್ಸನ್ ದ್ವಿಶತಕ

ಸ್ಯಾಮ್ಸನ್ ದ್ವಿಶತಕ

ಸದ್ಯ ನಡೆಯುತ್ತಿರುವ ವಿಜಯ್ ಹಜಾರೆ ಟ್ರೋಫಿಯಲ್ಲಿ ಕೇರಳ ಪರ ಸಂಜು ಸ್ಯಾಮ್ಸನ್ ದ್ವಿಶತಕ ಸಿಡಿಸಿದ್ದರು. ಆದರೆ ಬಾಂಗ್ಲಾ ವಿರುದ್ಧದ ಸರಣಿಯಲ್ಲಿ ಸ್ಯಾಮ್ಸನ್‌ಗೆ ಸ್ಥಾನ ಸಿಕ್ಕೇ ಸಿಗುತ್ತದೆ ಎನ್ನಲಾಗದು. ಯಾಕೆಂದರೆ ಪಂತ್‌ಗೆ ಮೊದಲ ಅವಕಾಶ ನೀಡಿ, ಎರಡನೇ ಆಯ್ಕೆಯಾಗಿ ಸ್ಯಾಮ್ಸನ್‌ ಅವರನ್ನು ಆಯ್ಕೆ ಸಮಿತಿ ಪರಿಗಣಿಸಲೂಬಹುದು.

ಇಬ್ಬರೂ ಕಾಣಿಸಿಕೊಳ್ಳಬಹುದು

ಇಬ್ಬರೂ ಕಾಣಿಸಿಕೊಳ್ಳಬಹುದು

'ರಿಷಬ್ ಮತ್ತು ಸಂಜು ಇಬ್ಬರೂ ಭಾರತ ತಂಡದಲ್ಲಿ ಕಾಣಿಸಿಕೊಂಡರೆ ಅದರಲ್ಲಿ ಅಚ್ಚರಿಯಿಲ್ಲ. ಪಂತ್, ಸ್ಯಾಮ್ಸನ್ ಇಬ್ಬರೂ ಐಪಿಎಲ್‌ನಲ್ಲಿ ಒಂದೇ ತಂಡದಲ್ಲಿ (ಡೆಲ್ಲಿ) ಆಡಿದ್ದಾರೆ. ನಿಯಮಿತ ಓವರ್‌ಗಳ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಪಂತ್ ಅಂಥ ಯಶಸ್ವಿ ಕಂಡಿಲ್ಲ. ಆದರೆ ಸುಧಾರಿಸಲು ಆತನಿಗೆ ನಾವು ಅವಕಾಶ ಕೊಡಬೇಕಿದೆ, ಎಂದು ಬಿಸಿಸಿಐ ಮೂಲ ತಿಳಿಸಿದೆ.

Story first published: Thursday, October 24, 2019, 13:27 [IST]
Other articles published on Oct 24, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+