IND vs BAN: ಮೊದಲ ಟೆಸ್ಟ್‌ಗೆ ಹೇಗಿರಲಿದೆ ಟೀಮ್ ಇಂಡಿಯಾ ಪ್ಲೇಯಿಂಗ್ ಇಲೆವೆನ್?
ಭಾರತ ಹಾಗೂ ಬಾಂಗ್ಲಾದೇಶಗಳ ನಡುವಣ ಮೊದಲ ಟೆಸ್ಟ್ ಪಂದ್ಯಕ್ಕೆ ಚೆನ್ನೈ ಕ್ರಿಕೆಟ್ ಸ್ಟೇಡಿಯಂ ಸಿದ್ಧವಾಗಿದೆ. ಈ ಪಂದ್ಯದಲ್ಲಿ ಗೆಲುವು ಸಾಧಿಸಲು ಟೀಮ್ ಇಂಡಿಯಾ ಭರ್ಜರಿ ತಾಲೀಮು ನಡೆಸಿದೆ. ಬಾಂಗ್ಲಾದೇಶದ ಆಟಗಾರರು ಸಹ ಚಿದಂಬರಂ ಅಂಗಳದಲ್ಲಿ ಸೋಮವಾರ ಅಭ್ಯಾಸ ನಡೆಸಿದ್ದಾರೆ. ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಭಾಗವಾಗಿರುವ ಈ ಪಂದ್ಯದಲ್ಲಿ ಗೆಲುವು ಸಾಧಿಸಲು ರೋಹಿತ್ ಶರ್ಮಾ ಭರ್ಜರಿ ಪ್ಲ್ಯಾನ್ ಮಾಡಿಕೊಂಡಿದ್ದಾರೆ.
ಚೆನ್ನೈನ ಪಿಚ್ ಯಾವಾಗಲು ಸ್ಪಿನ್ ಬೌಲರ್‌ಗಳಿಗೆ ಹೆಚ್ಚಿನ ನೆರವು ನೀಡುತ್ತದೆ. ಈ ಹಿನ್ನೆಲೆಯಲ್ಲಿ ಟೀಮ್ ಇಂಡಿಯಾ ಯಾವ ಕಾಂಬಿನೇಷನ್‌ನೊಂದಿಗೆ ಅಂಗಳಕ್ಕೆ ಇಳಿಯುತ್ತದೆ ಎಂಬ ಕುತೂಹಲ ಮನೆ ಮಾಡಿದೆ. ಟಾಸ್ ರೋಹಿತ್ ಶರ್ಮಾ ಅವರು ಗೆದ್ದರೆ ಫೀಲ್ಡಿಂಗ್ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ಇದೆ. ಇನ್ನು ಆ ಸಮಯದಲ್ಲಿ ಟೀಮ್ ಇಂಡಿಯಾದ ಪ್ಲೇಯಿಂಗ್ ಇಲೆವೆನ್ ಬಹಿರಂಗವಾಗಲಿದೆ. ಪಿಚ್ ಮರ್ಮವನ್ನು ನೋಡಿಕೊಂಡು ಹೇಳುವುದಾದರೆ, ಭಾರತದ ಸಂಭಾವ್ಯ ತಂಡ ಹೀಗಿರಲಿದೆ.

ಟಾಪ್ ಆರ್ಡರ್ ಸ್ಲಾಟ್ ಫಿಕ್ಸ್
ನಾಯಕ ರೋಹಿತ್ ಶರ್ಮಾ, ಯಶಸ್ವಿ ಜೈಸ್ವಾಲ್ ಆರಂಭಿಕರಾಗಿ ಕಣಕ್ಕೆ ಇಳಿಯಲಿದ್ದಾರೆ. ಈ ಜೊಡಿ ತವರಿನಲ್ಲಿ ಸ್ಥಿರ ಪ್ರದರ್ಶನ ನೀಡಿದ್ದರಿಂದ ಭರವಸೆ ಮೂಡಿದೆ. ಇನ್ನು ಮೂರನೇ ಕ್ರಮಾಂಕದಲ್ಲಿ ಶುಭಮನ್ ಗಿಲ್ ಬ್ಯಾಟ್ ಮಾಡಲಿದ್ದು, ರನ್‌ಗಳನ್ನು ಗುಡ್ಡೆ ಹಾಕುವ ಅನಿವಾರ್ಯತೆ ಇದೆ. 37 ವಾರಗಳ ಬಳಿಕ ಟೆಸ್ಟ್ ಆಡಲಿರುವ ವಿರಾಟ್ ಕೊಹ್ಲಿ ಸಹ ಅಭ್ಯಾಸದ ವೇಳೆ ಬಿಗ್ ಹಿಟ್ ಬಾರಿಸಿ ಭರವಸೆ ಮೂಡಿಸಿದ್ದಾರೆ.
ಆಲ್‌ರೌಂಡರ್ ಕೋಟದಲ್ಲಿ ಇಬ್ಬರಿಗೆ ಸ್ಥಾನ?
ಟೀಮ್ ಇಂಡಿಯಾದ ಪ್ಲೇಯಿಂಗ್ ಇಲೆವೆನ್‌ನಲ್ಲಿ ಆಲ್‌ರೌಂಡರ್ ಕೋಟಾದಲ್ಲಿ ಇಬ್ಬರಿಗೆ ಸ್ಥಾನ ಸಿಗುವ ಸಾಧ್ಯತೆ ಇದೆ. ತವರಿನ ಹುಡುಗ ರವಿಚಂದ್ರನ್ ಅಶ್ವಿನ್ ಹಾಗೂ ಅನುಭವಿ ರವೀಂದ್ರ ಜಡೇಜಾ ಆಲ್‌ರೌಂಡರ್ ರೂಪದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇವರಿಬ್ಬರೂ ಈ ಪಿಚ್‌ನಲ್ಲಿ ಬೌಲಿಂಗ್‌ನಲ್ಲಿ ಮಾರಕ ದಾಳಿ ನಡೆಸುವ ಸಾಧ್ಯತೆ ಇದೆ. ಇನ್ನು ವಿಕೆಟ್ ಕೀಪರ್ ರೂಪದಲ್ಲಿ ಅನುಭವಿ ರಿಷಭ್ ಪಂತ್ ಸ್ಥಾನ ಪಡೆಯುವುದು ಪಕ್ಕಾ ಆದಂತೆ ಕಾಣುತ್ತಿದೆ. ಇವರು ಅಂತಾರಾಷ್ಟ್ರೀಯ ಸೀಮಿತ ಓವರ್‌ಗಳ ಪಂದ್ಯಗಳಲ್ಲಿ ಭರ್ಜರಿ ಕಮ್‌ಬ್ಯಾಕ್ ಮಾಡಿದ್ದಾರೆ.

ಅಕ್ಷರ್, ಕುಲ್ದೀಪ್ ನಡುವೆ ಫೈಟ್?
ನಿರಂತರವಾಗಿ ಸ್ಥಿರ ಪ್ರದರ್ಶನ ನೀಡುತ್ತಿರುವ ಟೀಮ್ ಇಂಡಿಯಾದ ಭರವಸೆಯ ಆಟಗಾರ ಅಕ್ಷರ್ ಪಟೇಲ್ ಮೊದಲ ಟೆಸ್ಟ್‌ನ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆಯುವುದು ಡೌಟ್. ಇವರ ಸ್ಥಾನದಲ್ಲಿ ಕುಲ್‌ದೀಪ್ ಯಾದವ್ ಸ್ಥಾನ ಗಿಟ್ಟಿಸಿಕೊಳ್ಳಬಹುದು. ಕುಲ್‌ದೀಪ್ ಅವರ ರಾಂಗ್ ಒನ್ ಎಸೆತಗಳನ್ನು ಎದುರಿಸುವುದು ಬಾಂಗ್ಲಾ ಬ್ಯಾಟರ್‌ಗಳಿಗೆ ಕಠಿಣವಾಗಬಹುದು. ಈ ಲೆಕ್ಕಾಚಾರದಲ್ಲಿ ಅವರಿಗೆ ಸ್ಥಾನ ಸಿಗುವು ಸಾಧ್ಯತೆ ಹೆಚ್ಚಿದೆ.
ವೇಗದ ಬೌಲಿಂಗ್ ರೂಪದಲ್ಲಿ ಜಸ್ಪ್ರಿತ್ ಬುಮ್ರಾ ಹಾಗೂ ಮೊಹಮ್ಮದ್ ಸಿರಾಜ್ ಅವರು ಕಾಣಿಸಿಕೊಳ್ಳಲಿದ್ದಾರೆ. ಈ ಮೂಲಕ ಆಕಾಶದೀಪ್ ಮತ್ತು ಯಶ್ ದಯಾಲ್ ಅವರ ಕಾಯುವಿಕೆ ಮುಂದುವರೆಯಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications