ಭಾರತ vs ಬಾಂಗ್ಲಾದೇಶ ಡೇ-ನೈಟ್ ಟೆಸ್ಟ್ ಕ್ರಿಕೆಟ್ ಟಿಕೆಟ್ ಬೆಲೆ ತೀರಾ ಕಮ್ಮಿ!

ಕೋಲ್ಕತ್ತಾ, ಅಕ್ಟೋಬರ್ 30: ಬಾಂಗ್ಲಾದೇಶ ವಿರುದ್ಧದ ಭಾರತದ ಚೊಚ್ಚಲ ಡೇ ನೈಟ್ ಟೆಸ್ಟ್ ಪಂದ್ಯ ಆರಂಭವಾಗುವ ಎಂದಿನ ಸಮಯ 2.30pmಗಿಂತ 1 ಗಂಟೆ ಮುಂಚಿತವಾಗಿ ಆರಂಭವಾಗುವುದನ್ನು ನಿರೀಕ್ಷಿಸಲಾಗಿದೆ ಎಂದು ಕ್ರಿಕೆಟ್ ಅಸೋಸಿಯೇಷನ್ ಆಫ್ ಬೆಂಗಾಲ್‌ನ (ಸಿಎಬಿ) ಕಾರ್ಯದರ್ಶಿ ಅವಿಶೇಕ್ ದಾಲ್ಮಿಯಾ ಮಂಗಳವಾರ (ಅಕ್ಟೋಬರ್ 29) ಹೇಳಿದ್ದಾರೆ.
ಮೊದಲ ಬಾರಿಗೆ ಭಾರತ ಡೇ ನೈಟ್ ಟೆಸ್ಟ್‌ನಲ್ಲಿ ಪಾಲ್ಗೊಳ್ಳುತ್ತಿರುವುದರಿಂದ ಕೋಲ್ಕತ್ತಾದ ಈಡನ್ ಗಾರ್ಡನ್ ಸ್ಟೇಡಿಯಂ ಹೌಸ್ ಫುಲ್ ಮಾಡಲು ಸಿಎಬಿ ಮುಂದಡಿಯಿಟ್ಟಿದೆ. 68,000 ಜನರು ಕುಳಿತುಕೊಳ್ಳಲು ಅವಕಾಶವಿರುವ ಈಡನ್ ಗಾರ್ಡನ್ ಸ್ಟೇಡಿಯಂನಲ್ಲಿ ನಡೆಯುವ ಈ ಡೇ ನೈಟ್ ಟೆಸ್ಟ್‌ನ ಐದೂ ದಿನ ದಿನವೊಂದಕ್ಕೆ 50 ರೂ.ನಂತೆ ಟಿಕೆಟ್ ಬೆಲೆಯಿರಲಿದೆ.
ಮೊಲೆ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ನಡೆಯುವ ಪಿಂಕ್ ಬಾಲ್ ಟೆಸ್ಟ್‌ನಂತೆ ಈ ಡೇ ನೈಟ್ ಟೆಸ್ಟ್ 'ವಾರ್ಷಿಕ ವ್ಯವಹಾರ'ದ ಉದ್ದೇಶವನ್ನಿಟ್ಟುಕೊಂಡಿದೆ.

ಬಾಂಗ್ಲಾದಿಂದ ಗ್ರೀನ್ ಸಿಗ್ನಲ್
ಬಿಸಿಸಿಐ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಸೌರವ್ ಗಂಗೂಲಿ ಮುಂದಾಳತ್ವದ ಬೋರ್ಡ್, ಈಡನ್ ಗಾರ್ಡನ್‌ನಲ್ಲಿ ನಡೆಸಲುದ್ದೇಶಿಸಿರುವ ಮೊದಲ ಡೇ-ನೈಟ್ ಟೆಸ್ಟ್‌ಗೆ ಬಾಂಗ್ಲಾದೇಶ ಕ್ರಿಕೆಟ್ ಬೋರ್ಡ್ ಕೂಡ ಗ್ರೀನ್ ಸಿಗ್ನಲ್ ನೀಡರುವುದನ್ನು ಮಂಗಳವಾರ (ಅಕ್ಟೋಬರ್ 29) ತಿಳಿಸಿದೆ.

ಪ್ರೇಕ್ಷಕರಿಗಾಗಿ ಬದಲಾವಣೆ
ಆತಿಥೇಯ ಸಿಎಬಿ ಪಂದ್ಯವನ್ನು 1 pm ಅಥವಾ 1.30 pmಗೆ ಆರಂಭಿಸಲು ಬಿಸಿಸಿಐ ಅನುಮತಿ ನೀಡುವುದಕ್ಕಾಗಿ ಕಾಯುತ್ತಿದೆ. ಇಬ್ಬನಿ ಉದುರುವಿಕೆ ಮತ್ತು ಪ್ರೇಕ್ಷಕರ ಅನುಕೂಲವನ್ನು ಗಮನದಲ್ಲಿಟ್ಟುಕೊಂಡು ಪಂದ್ಯದ ಆರಂಭದ ಸಮಯ ಬದಲಾವಣೆಗೆ ಸಿಎಬಿ ಆಲೋಚಿಸಿದೆ.

ಸಮಯ ಬದಲಾವಣೆಯ ಅನುಕೂಲ
'ವೇಳಾಪಟ್ಟಿಯಲ್ಲಿ ತಿಳಿಸಿರುವುದಕ್ಕಿಂತ 1 ಗಂಟೆ ಮುಂಚಿತವಾಗಿ ಪಂದ್ಯ ಆರಂಭವಾಗುವುದನ್ನು ನಿರೀಕ್ಷಿಸಲಾಗಿದೆ. 1.30 pmಗೆ ಪಂದ್ಯ ಆರಂಭವಾದರೆ 8.30 pmಗೆ ದಿನದಾಟ ಅಂತ್ಯವಾಗಲಿದೆ. ಇದು ಪಂದ್ಯದ ಬಳಿಕ ಮನೆಗೆ ತೆರಳಲು ಪ್ರೇಕ್ಷಕರಿಗೆ ಅನುಕೂಲ ಒದಗಿಸಲಿದೆ,' ಎಂದು ಅವಿಶೇಕ್ ಡಾಲ್ಮಿಯಾ ಹೇಳಿದ್ದಾರೆ.

ಯಾವತ್ತು ಆರಂಭ, ಅಂತ್ಯ?
ಭಾರತಕ್ಕೆ ಪ್ರವಾಸ ಕೈಗೊಳ್ಳಲಿರುವ ಬಾಂಗ್ಲಾದೇಶ ಕ್ರಿಕೆಟ್ ತಂಡ ನವೆಂಬರ್ 3ರಿಂದ 3 ಪಂದ್ಯಗಳ ಟಿ20 ಸರಣಿ ಆಡಲಿದೆ. ಟಿ20 ಬಳಿಕ 2 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಇತ್ತಂಡಗಳು ಪಾಲ್ಗೊಳ್ಳಲಿವೆ. ಇದರಲ್ಲಿ ಕೊನೇಯ ಪಂದ್ಯ ಅಂದರೆ ನವೆಂಬರ್ 22ರಿಂದ 26ರ ವರೆಗೆ ನಡೆಯುವ ದ್ವಿತೀಯ ಟೆಸ್ಟ್, ಡೇ ನೈಟ್ ಟೆಸ್ಟ್ ಆಗಿರಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications