ಭಾರತ vs ಬಾಂಗ್ಲಾದೇಶ: ಕೋಲ್ಕತ್ತಾ ಟೆಸ್ಟ್‌ನಿಂದ ಸೈಫ್ ಸಹನ್ ಹೊರಕ್ಕೆ

ಕೋಲ್ಕತ್ತಾ, ನವೆಂಬರ್ 20: ಕೋಲ್ಕತ್ತಾದಲ್ಲಿ ಶುಕ್ರವಾರದಿಂದ (ನವೆಂಬರ್ 22) ಆರಂಭಗೊಳ್ಳಲಿರುವ ಭಾರತ vs ಬಾಂಗ್ಲಾದೇಶ ನಡುವಿನ ದ್ವಿತೀಯ ಟೆಸ್ಟ್‌ನಿಂದ ಬಾಂಗ್ಲಾ ತಂಡದ ಮೀಸಲು ಆರಂಭಿಕ ಬ್ಯಾಟ್ಸ್‌ಮನ್ ಸೈಫ್ ಹಸನ್ ಹೊರ ಬಿದ್ದಿದ್ದಾರೆ.
ಇಂದೋರ್‌ನಲ್ಲಿ ಮೊದಲ ಟೆಸ್ಟ್‌ನ ವೇಳೆ ಅಭ್ಯಾಸದ ವೇಳೆ ಕೈಬೆರಳಿಗೆ ಗಾಯ ಮಾಡಿಕೊಂಡಿದ್ದ ಹಸನ್ ತಂಡದಿಂದ ಹೊರಬೀಳುವಂತಾಗಿದೆ. ಅವರ ಗಾಯ ಸಂಪೂರ್ಣವಾಗಿ ಗುಣವಾಗದ್ದರಿಂದ ಅಂತಿಮ ಟೆಸ್ಟ್ ಅಥವಾ ಡೇ-ನೈಟ್ ಟೆಸ್ಟ್‌ನಲ್ಲಿ ಹಸನ್ ತಂಡದಲ್ಲಿ ಕಾಣಿಸಿಕೊಳ್ಳುತ್ತಿಲ್ಲ.
'ಹಸನ್ ವಿಶ್ರಾಂತಿ ಪಡೆದರೆ ಹೆಚ್ಚು ಅನುಕೂಲ ಎಂಬ ನಿರ್ಧಾರಕ್ಕೆ ವೈದ್ಯಕೀಯ ತಂಡ ಬಂದಿದೆ. ಹಸನ್ ಗಾಯವನ್ನು ಪರಿಗಣಿಸಿ ಅವರನ್ನು ದ್ವಿತೀಯ ಟೆಸ್ಟ್‌ನಿಂದ ಹೊರಗಿಡಲಾಗಿದೆ,' ಎಂದು ಬಾಂಗ್ಲಾದೇಶ ಕ್ರಿಕೆಟ್ ಬೋರ್ಡ್ (ಬಿಸಿಬಿ) ಕ್ರಿಕ್‌ಬಝ್ ಜೊತೆ ಹೇಳಿಕೊಂಡಿದೆ.
ನವೆಂಬರ್ 22ರಿಂದ ನವೆಂಬರ್ 26ರ ವರೆಗೆ ಕೋಲ್ಕತ್ತಾದ ಈಡನ್ ಗಾರ್ಡನ್‌ನಲ್ಲಿ ಚೊಚ್ಚಲ ಬಾರಿಗೆ ಭಾರತ-ಬಾಂಗ್ಲಾ ತಂಡಗಳು ಡೇ-ನೈಟ್ ಟೆಸ್ಟ್‌ನಲ್ಲಿ ಆಡಲಿವೆ. ಈ ಪಂದ್ಯ 1 pmಗೆ ಆರಂಭಗೊಳ್ಳಲಿದೆ. ಈ ಪಂದ್ಯ ಪಿಂಕ್ ಬಾಲ್ ಟೆಸ್ಟ್ ಪಂದ್ಯವಾಗಿಯೂ ಕರೆಯಲ್ಪಡಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications