IND vs BAN: ಅಶ್ವಿನ್-ಜಡೇಜಾ ಸ್ಪಿನ್ ದಾಳಿಗೆ ಬೆದರಿದ ಬಾಂಗ್ಲಾದೇಶ; ಭಾರತಕ್ಕೆ 95 ರನ್ ಗುರಿ
ಕಾನ್ಪುರದ ಗ್ರೀನ್ ಪಾರ್ಕ್ ಸ್ಟೇಡಿಯಂನಲ್ಲಿ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಎರಡನೇ ಟೆಸ್ಟ್ ಪಂದ್ಯದ ಕೊನೆಯ ದಿನದಾಟ ನಡೆಯುತ್ತಿದೆ. ಈ ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿ 146 ರನ್‌ಗಳಿಗೆ ಬಾಂಗ್ಲಾದೇಶ ಸರ್ವಪತನವಾಗಿದೆ. ಭಾರತಕ್ಕೆ ಗೆಲುವಿಗೆ 95 ರನ್‌ಗಳ ಸುಲಭ ಗುರಿಯನ್ನು ಬಾಂಗ್ಲಾದೇಶ ನೀಡಿದೆ.
ಬಾಂಗ್ಲಾದೇಶ ವಿರುದ್ಧ ಕೊನೆಯ ದಿನ ರವಿಚಂದ್ರನ್ ಅಶ್ವಿನ್ ಮತ್ತು ರವೀಂದ್ರ ಜಡೇಜಾ ಅದ್ಭುತ ಬೌಲಿಂಗ್ ಪ್ರದರ್ಶಿಸಿದರು. ಈ ಸ್ಪಿನ್ ಜೋಡಿಯ ಬೌಲಿಂಗ್ ದಾಳಿಗೆ ಬೆದರಿದ ಬಾಂಗ್ಲಾದೇಶ ಆಲೌಟಾಯಿತು. ಇದರೊಂದಿಗೆ ಎರಡನೇ ಟೆಸ್ಟ್ ಅನ್ನು ಡ್ರಾ ಮಾಡಿಕೊಳ್ಳುವ ಬಾಂಗ್ಲಾದೇಶದ ಕನಸು ಭಗ್ನವಾಗಿದೆ.

ಬಾಂಗ್ಲಾದೇಶ ಪರ ಎರಡನೇ ಇನ್ನಿಂಗ್ಸ್‌ನಲ್ಲಿ ಶಾದ್ಮನ್ ಇಸ್ಲಾಂ (50) ಅರ್ಧಶತಕ ಬಾರಿಸಿ ಸಂಭ್ರಮಿಸಿದರು. ಆದರೆ, ಮತ್ತೊಂದೆಡೆ ಬಾಂಗ್ಲಾದೇಶದ ಬ್ಯಾಟರ್‌ಗಳು ಟೀಮ್ ಇಂಡಿಯಾ ಬೌಲಿಂಗ್ ದಾಳಿಯನ್ನು ಎದುರಿಸುವಲ್ಲಿ ವಿಫಲವಾದರು. ಮಾಧ್ಯಮ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದ ಅನುಭವಿ ಮುಶ್ಫಿಕರ್ ರಹೀಮ್ 37 ರನ್ ಗಳಿಸುವ ಮೂಲಕ ತಂಡ ಎರಡನೇ ಟಾಪ್ ಸ್ಕೋರರ್ ಆದರು. ಟೀಮ್ ಇಂಡಿಯಾ ಪರ ಅಶ್ವಿನ್ ಜಡೇಜಾ ಮತ್ತು ಜಸ್ಪ್ರೀತ್ ಬುಮ್ರಾ ತಲಾ 3 ವಿಕೆಟ್ ಕಬಳಿಸಿ ಮಿಂಚಿದರೆ, ಆಕಾಶ್ ದೀಪ್ 1 ವಿಕೆಟ್ ಪಡೆದರು.
ಮೊದಲನೇ ಇನ್ನಿಂಗ್ಸ್
ಇದಕ್ಕೂ ಮುನ್ನ ಪಂದ್ಯದ ನಾಲ್ಕನೇ ದಿನದಂದು ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ ಬಾಂಗ್ಲಾದೇಶವನ್ನು 233 ರನ್‌ಗಳಿಗೆ ಆಲೌಟ್ ಮಾಡಿತ್ತು. ಮೊಮಿನುಲ್ ಹಕ್ 107 ರನ್ ಗಳಿಸಿದ್ದರು. ಇದಾದ ಬಳಿಕ ಟೀಮ್ ಇಂಡಿಯಾ ತನ್ನ ಮೊದಲ ಇನಿಂಗ್ಸ್‌ನಲ್ಲಿ 9 ವಿಕೆಟ್ ಕಳೆದುಕೊಂಡು 285 ರನ್‌ಗಳಿಗೆ ಡಿಕ್ಲೇರ್ ಮಾಡಿಕೊಂಡಿತ್ತು. ಈ ಸಂದರ್ಭದಲ್ಲಿ ಟೀಮ್ ಇಂಡಿಯಾ 52 ರನ್‌ಗಳ ಮುನ್ನಡೆ ಪಡೆದಿತ್ತು.
ಟೀಮ್ ಇಂಡಿಯಾ ಪರ ಯಶಸ್ವಿ ಜೈಸ್ವಾಲ್ (72), ಕೆಎಲ್ ರಾಹುಲ್ (63), ವಿರಾಟ್ ಕೊಹ್ಲಿ (47), ಶುಭಮನ್ ಗಿಲ್ (39) ಮತ್ತು ರೋಹಿತ್ ಶರ್ಮಾ (23) ಬಿರುಸಿ ಬ್ಯಾಟಿಂಗ್ ಮಾಡಿದ್ದರು. ಕೊನೆಯಲ್ಲಿ ಬೌಲಿಂಗ್ ಆಲ್‌ರೌಂಡರ್ ಆಕಾಶ್ ದೀಪ್ ಅವರು ವಿರಾಟ್ ಕೊಹ್ಲಿ ನೀಡಿದ ಬ್ಯಾಟ್‌ನಲ್ಲಿ ಎರಡು ಬ್ಯಾಕ್-ಟು-ಬ್ಯಾಕ್ ಸಿಕ್ಸರ್‌ಗಳನ್ನು ಸಿಡಿಸಿ ಔಟಾಗಿದ್ದರು. ಇದರೊಂದಿಗೆ ವಿಶ್ವ ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತ ಹಲವು ದಾಖಲೆಗಳನ್ನು ಸೃಷ್ಟಿಸಿತ್ತು.
ಈಗಾಗಲೇ ಬಾಂಗ್ಲಾದೇಶ ವಿರುದ್ಧ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಟೀಮ್ ಇಂಡಿಯಾ 1-0 ಅಂತರದಿಂದ ಮುನ್ನಡೆ ಸಾಧಿಸಿದೆ. ಚೆನ್ನೈನಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ ರೋಹಿತ್ ಪಡೆ 280 ರನ್‌ಗಳ ಜಯ ಸಾಧಿಸಿತ್ತು. ಇದೀಗ ಎರಡನೇ ಪಂದ್ಯವನ್ನು ಗೆದ್ದು ಸರಣಿ ಕ್ಲೀನ್ ಸ್ವೀಪ್ ಮಾಡುವತ್ತ ಭಾರತ ಸಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications