
ಭಾರತ ಹಾಗೂ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ರೋಹಿತ್ ಶರ್ಮಾ ಪಡೆ ರೋಚಕ ಗೆಲುವು ಸಾಧಿಸಿದೆ. ಟೀಮ್ ಇಂಡಿಯಾ ದೊಡ್ಡ ಮೊತ್ತದ ಗುರಿಯನ್ನು ಬಾಂಗ್ಲಾದೇಶಕ್ಕೆ ನೀಡಿದ ಹೊರತಾಗಿಯೂ ಸ್ಪೋಟಕ ಆರಂಭವನ್ನು ಬಾಂಗ್ಲಾದೇಶ ಪಡೆದ ಕಾರಣ ಒಂದು ಹಂತದಲ್ಲಿ ಭಾರತ ತಂಡದ ಅಭಿಮಾನಿಗಳಲ್ಲಿ ಸೋಲಿನ ಆತಂಕ ಮನೆಮಾಡಿತ್ತು. ಆದರೆ ಒಂದು ರನೌಟ್ ಪಂದ್ಯದಲ್ಲಿ ಬಾಂಗ್ಲಾದೇಶದ ಬಿಗಿ ಹಿಡಿತ ತಪ್ಪುವಂತೆ ಮಾಡಿತು.
ಭಾರತ ತಂಡ ನಿಡಿದ ಗುರಿಯುನ್ನು ಬೆನ್ನಟ್ಟಿದ ಬಾಂಗ್ಲಾದೇಶ ತಂಡಕ್ಕೆ ಸ್ಪೋಟಕ ಆರಂಭ ದೊರೆಯಿತು. ಬಾಂಗ್ಲಾ ಆರಂಭಿಕ ಆಟಗಾರ ಲಿಟನ್ ದಾಸ್ ಸ್ಪೋಟಕ ಆರಂಭವನ್ನು ನೀಡುವ ಮೂಲಕ ಆರಂಬಿಕ ಮೇಲುಗೈ ಸಾಧಿಸಲು ಕಾರಣವಾದರು. 21 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ ಲಿಟನ್ 27 ಎಸೆತಗಳಲ್ಲಿ 60 ರನ್ ಗಳಿಸಿ ಮುನ್ನುಗ್ಗುತ್ತಿದ್ದರು. ಈ ಬ್ಯಾಟಿಂಗ್‌ನ ಕಾರಣದಿಂದಾಗಿ ಭಾರತ ತಂಡಕ್ಕೆ ಸೋಲಿನ ಆತಂಕವೂ ಎದುರಾಗಿತ್ತು. ಆದರೆ ಕೆಎಲ್ ರಾಹುಲ್ ಅವರ ಅದ್ಭುತ ಫಿಲ್ಡಿಂಗ್‌ನ ಕಾರಣದಿಂದಾಗಿ ಲಿಟನ್ ದಾಸ್ ರನೌಟ್ ಆಗುವ ಮೂಲಕ ವಿಕೆಟ್ ಕಳೆದುಕೊಂಡು ಫೆವಿಲಿಯನ್‌ಗೆ ನಡೆದರು.
ಮಿಡ್ ವಿಕೆಟ್‌ನಲ್ಲಿ ಫೀಲ್ಡಿಂಗ್ ನಡೆಸುತ್ತಿದ್ದ ಕೆಎಲ್ ರಾಹುಲ್ ಅವರತ್ತ ಬಾರಿಸಿದ ಚೆಂಡನ್ನು ಹಿಡಿದ ಕೆಎಲ್ ರಾಹುಲ್ ರನ್‌ಗಾಗಿ ಓಡುತ್ತಿದ್ದ ಲಿಟನ್ ದಾಸ್ ಅವರನ್ನು ಔಟ್ ಮಾಡುವ ದೃಷ್ಟಿಯಿಂದ ನೇರವಾಗಿ ವಿಕೆಟ್‌ಗೆ ಗುರಿಯಿಡುವಲ್ಲಿ ರಾಹುಲ್ ಯಶಸ್ವಿಯಾದರು. ಇದರ ಪರಿಣಾಮವಾಗಿ ಲಿಟನ್ ದಾಸ್ ವಿಕೆಟ್ ಕಳೆದುಕೊಳ್ಳಬೇಕಾಯಿತು. ಈ ಸಂದರ್ಭದಲ್ಲಿ ಟೀಮ್ ಇಂಡಿಯಾದ ಆಟಗಾರ ಕೆಎಲ್ ರಾಹುಲ್ ಅವರ ಸಮಯಪ್ರಜ್ಞೆಗೆ ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಭಾರೀ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
"ಅದೊಂದು ್ಯಾಜಿಕಲ್ ಕ್ಷಣವಾಗಿತ್ತು. ಆ ಸಂದರ್ಭದಲ್ಲಿ ಕೆಎಲ್ ರಾಹುಲ್‌ಗೆ ವಿಕೆಟ್ ಕೀಪರ್‌ನತ್ತ ಚೆಂಡನ್ನು ಎಸೆಯುವುದು ಸುಲಭದ ಆಯ್ಕೆಯಾಗಿತ್ತು. ಆದರೆ ಆ ಸಂದರ್ಭವನ್ನು ಗಮನಿಸಿಕೊಂಡು ಲಿಟನ್ ದಾಸ್ ಓಡುತ್ತಿದ್ದ ಬೌಲರ್ ತುದಿಯತ್ತ ರಾಹುಲ್ ಚೆಂಡನ್ನು ಎಸೆದರು. ಈ ಮೂಲಕ ತಮ್ಮ ಸಮಯಪ್ರಜ್ಞೆಯನ್ನು ತೋರ್ಪಡಿಸಿದ್ದಾರೆ. ಓಡುತ್ತಿದ್ದಾಗ ಕಣ್ಣ ಬದಿಯಿಂದ ಲಿಟನ್ ದಾಸ್ ಎಡವಿದ್ದು ರಾಹುಲ್ ಗನಕ್ಕೆ ಬಂದಿದೆ. ಆ ಕ್ಷಣದಲ್ಲಿ ಬೌಲರ್ ತುದಿಗೆ ಚೆಂಡನ್ನು ಎಸೆಯುವುದು ತಂಡಕ್ಕೆ ಹೆಚ್ಚು ಉಪಯೋಗವಾಗುತ್ತದೆ ಎಂಬುದನ್ನು ಅರಿತುಕೊಂಡು ರಾಹುಲ್ ಆ ನಿರ್ಧಾರಕ್ಕೆ ಬಂದಿದ್ದಾರೆ. ಅದೊಂದು ಅದ್ಭುತವಾದ ನಿರ್ಧಾರ" ಎಂದು ಕೆಎಲ್ ರಾಹುಲ್ ಬಗ್ಗೆ ಗವಾಸ್ಕರ್ ವಿಶೇಷ ಪ್ರಶಂಸೆಯ ಮಾತುಗಳನ್ನಾಡಿದ್ದಾರೆ.
ಟೀಮ್ ಇಂಡಿಯಾ ಆಡುವ ಬಳಗ: ಕೆಎಲ್ ರಾಹುಲ್, ರೋಹಿತ್ ಶರ್ಮಾ (ನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಅಕ್ಷರ್ ಪಟೇಲ್, ರವಿಚಂದ್ರನ್ ಅಶ್ವಿನ್, ಭುವನೇಶ್ವರ್ ಕುಮಾರ್, ಮೊಹಮ್ಮದ್ ಶಮಿ, ಅರ್ಷದೀಪ್ ಸಿಂಗ್
ಬೆಂಚ್: ರಿಷಬ್ ಪಂತ್, ಹರ್ಷಲ್ ಪಟೇಲ್, ಯುಜ್ವೇಂದ್ರ ಚಾಹಲ್, ದೀಪಕ್ ಹೂಡಾ
ಬಾಂಗ್ಲಾದೇಶ ಆಡುವ ಬಳಗ: ನಜ್ಮುಲ್ ಹೊಸೈನ್ ಶಾಂಟೊ, ಲಿಟ್ಟನ್ ದಾಸ್, ಶಾಕಿಬ್ ಅಲ್ ಹಸನ್ (ನಾಯಕ), ಅಫೀಫ್ ಹೊಸೈನ್, ಯಾಸಿರ್ ಅಲಿ, ಮೊಸದ್ದೆಕ್ ಹೊಸೈನ್, ನೂರುಲ್ ಹಸನ್ (ವಿಕೆಟ್ ಕೀಪರ್), ಮುಸ್ತಾಫಿಜುರ್ ರೆಹಮಾನ್, ಹಸನ್ ಮಹ್ಮದ್, ತಸ್ಕಿನ್ ಅಹ್ಮದ್, ಶೋರಿಫುಲ್ ಇಸ್ಲಾಂ
ಬೆಂಚ್: ಮೆಹಿದಿ, ಎಹಮಿನ್‌ಬಾ ಹಸನ್, ಮಿಸ್ಸಾ ಮಿಸ್ , ಸೌಮ್ಯ ಸರ್ಕಾರ್