ಭಾರತ vs ಬಾಂಗ್ಲಾದೇಶ: ಮೊದಲನೇ ಟಿ20 ಪಂದ್ಯಕ್ಕೆ ಭಾರತ ಸಂಭಾವ್ಯ XI

ನವದೆಹಲಿ, ನವೆಂಬರ್ 2: ವಿಶ್ವಕಪ್ ಬಳಿಕ ನಡೆದ ಸರಣಿಗಳಲ್ಲಿ ಸತತ ಗೆಲುವು ಕಾಣುತ್ತಿರುವ ಟೀಮ್ ಇಂಡಿಯಾ, ಬಾಂಗ್ಲಾ ವಿರುದ್ಧದ ಟಿ20 ಸರಣಿಯನ್ನೂ ಗೆದ್ದುಕೊಳ್ಳುವತ್ತ ಕಣ್ಣಿಟ್ಟಿದೆ. 3 ಪಂದ್ಯಗಳ ಬಾಂಗ್ಲಾ vs ಭಾರತ ಟಿ20 ಸರಣಿ, ನವೆಂಬರ್ 3ರಿಂದ ನಡೆಯಲಿದೆ.
ಭಾರತ ಮತ್ತು ಬಾಂಗ್ಲಾ ನಡುವೆ ಈವರೆಗೆ ನಡೆದ 8 ಟಿ20 ಪಂದ್ಯಗಳಲ್ಲಿ ಭಾರತ 8ರಲ್ಲೂ ಗೆದ್ದು 8-0ಯ ಮುನ್ನಡೆಯಲ್ಲಿದೆ. ಹೀಗಾಗಿ ಸರಣಿಯ ಆರಂಭಿಕ ಪಂದ್ಯದಲ್ಲೇ ಜಯ ಸಾಧಿಸುವ ಯೋಜನೆಯ ಭಾರತವಿದೆ. ತಂಡದ ಎಂದಿನ ನಾಯಕ ವಿರಾಟ್ ಕೊಹ್ಲಿ ವಿಶ್ರಾಂತಿ ಪಡೆಯುತ್ತಿದ್ದು, ರೋಹಿತ್ ಶರ್ಮಾ ಸರಣಿಯಲ್ಲಿ ತಂಡವನ್ನು ಮುನ್ನಡೆಸುತ್ತಿದ್ದಾರೆ.
ಆರಂಭಿಕ ಟಿ20 ಪಂದ್ಯದಲ್ಲಿ ಯುವ ಆಟಗಾರರು ಹೆಚ್ಚಿನ ಸಂಖ್ಯೆಯಲ್ಲಿ ಅವಕಾಶ ಗಿಟ್ಟಿಸಿಕೊಳ್ಳುವುದನ್ನು ನಿರೀಕ್ಷಿಸಲಾಗಿದೆ. ಶಿಖರ್ ಧವನ್ ಮತ್ತು ರೋಹಿತ್ ಶರ್ಮಾ ಜೋಡಿ ಆರಂಭಿಕರಾಗಿ ಆಡಲಿದೆ. ಮೊದಲ ಟಿ20 ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ 7 pmಗೆ ಆರಂಭವಾಗಲಿದೆ.
1ನೇ ಟಿ20ಗೆ ಸಂಭಾವ್ಯ ಭಾರತ ತಂಡ: ರೋಹಿತ್ ಶರ್ಮಾ, ಶಿಖರ್ ಧವನ್, ಕೆ.ಎಲ್. ರಾಹುಲ್, ಶ್ರೇಯಸ್ ಅಯ್ಯರ್, ಸಂಜು ಸ್ಯಾಮ್ಸನ್, ರಿಷಭ್ ಪಂತ್, ಕೃನಾಲ್ ಪಾಂಡ್ಯ, ವಾಷಿಂಗ್ಟನ್ ಸುಂದರ್, ಯುಜುವೇಂದ್ರ ಚಾಹಲ್, ದೀಪಕ್ ಚಾಹರ್, ಖಲೀಲ್ ಅಹ್ಮದ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications