Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Greenpark Stadium: ಕಾನ್ಪುರದಲ್ಲಿ 3 ವರ್ಷಗಳ ನಂತರ ಭಾರತ-ಬಾಂಗ್ಲಾದೇಶ ಮುಖಾಮುಖಿ; ಟೆಸ್ಟ್‌ ಪಂದ್ಯ ಯಾವಾಗ?

ಜೂನ್‌ 20 ಗುರುವಾರ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) 2024-25ರ ಟೀಮ್‌ ಇಂಡಿಯಾ ತವರಿನಲ್ಲಿ ಆಡುವ ಸರಣಿಗಳ ವೇಳಾಪಟ್ಟಿಯನ್ನು ವೇಳಾಪಟ್ಟಿಯನ್ನು ಪ್ರಕಟಿಸಿದೆ.

ಸುಮಾರು 3 ವರ್ಷಗಳ ನಂತರ ಭಾರತ ಮತ್ತು ಬಾಂಗ್ಲಾದೇಶ ತಂಡದ ಆಟಗಾರರು ನಗರದ ಐತಿಹಾಸಿಕ ಗ್ರೀನ್ ಪಾರ್ಕ್ ಕ್ರೀಡಾಂಗಣದಲ್ಲಿ ಟೆಸ್ಟ್ ಪಂದ್ಯ ಆಡಲಿದ್ದಾರೆ. ಸೆಪ್ಟೆಂಬರ್ 27 ರಂದು ಕಾನ್ಪುರ ಸ್ಟೇಡಿಯಂ ಬಾಂಗ್ಲಾದೇಶ ವಿರುದ್ಧದ ಎರಡನೇ ಟೆಸ್ಟ್ ಪಂದ್ಯಕ್ಕೆ ಆತಿಥ್ಯ ವಹಿಸಲಿದೆ.

India vs Bangladesh Test match after 3 years at Kanpur Greenpark Stadium

ಈ ಬಗ್ಗೆ ಉತ್ತರ ಪ್ರದೇಶ ಕ್ರಿಕೆಟ್ ಸಂಸ್ಥೆಯ (ಯುಪಿಸಿಎ) ಹಿರಿಯ ಅಧಿಕಾರಿ ಖಚಿತಪಡಿಸಿದ್ದಾರೆ. ಮತ್ತೊಂದೆಡೆ ಪಂದ್ಯದ ಮಾಹಿತಿ ತಿಳಿದು ನಗರದ ಲಕ್ಷಾಂತರ ಕ್ರಿಕೆಟ್ ಪ್ರೇಮಿಗಳು ಸಂತಸಗೊಂಡಿದ್ದಾರೆ. ಗ್ರೀನ್ ಪಾರ್ಕ್ ನಲ್ಲಿ ಮತ್ತೊಮ್ಮೆ ಅಂತಾರಾಷ್ಟ್ರೀಯ ಮಟ್ಟದ ಪಂದ್ಯಗಳು ನಡೆಯಲಿದ್ದು, ಗ್ರೀನ್ ಪಾರ್ಕ್ ಗೆ ಜೀವ ಬಂದಿದೆ ಎನ್ನುತ್ತಾರೆ ಕ್ರಿಕೆಟ್ ಪ್ರೇಮಿಗಳು.

ಹಲವು ವರ್ಷಗಳಿಂದ ಗ್ರೀನ್ ಪಾರ್ಕ್‌ನಲ್ಲಿ ಪಂದ್ಯಗಳನ್ನು ನಡೆಸುವ ಬದಲು ಲಕ್ನೋದ ಏಕಾನಾ ಕ್ರೀಡಾಂಗಣದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನಡೆಸಲಾಗುತ್ತಿತ್ತು. ಗ್ರೀನ್ ಪಾರ್ಕ್ ಕ್ರೀಡಾಂಗಣದಲ್ಲಿ ಪ್ರೇಕ್ಷಕರ ಸಾಮರ್ಥ್ಯ ಕಡಿಮೆ ಇರುವುದರಿಂದ ಪಂದ್ಯಗಳನ್ನು ಇಲ್ಲಿಂದ ಸ್ಥಳಾಂತರಿಸಲಾಗುತ್ತಿದೆ ಎಂದು ಗ್ರೀನ್ ಪಾರ್ಕ್‌ನ ಅಧಿಕಾರಿಗಳೇ ಹೇಳಿದ್ದರು. ಆದರೆ, ಇದೀಗ ಸೆಪ್ಟೆಂಬರ್‌ನಲ್ಲಿ ನಡೆಯಲಿರುವ ಟೆಸ್ಟ್ ಪಂದ್ಯದ ವೇಳೆ ಭಾರತ ಮತ್ತು ಬಾಂಗ್ಲಾದೇಶದ ಆಟಗಾರರು ಬೌಂಡರಿ ಮತ್ತು ಸಿಕ್ಸರ್ ಬಾರಿಸುವುದನ್ನು ಈ ಸ್ಟೇಡಿಯಂನಲ್ಲಿ ಕಾಣಬಹುದಾಗಿದೆ.

ಕಳೆದ ವರ್ಷ, ಟಿ -20 ಲೀಗ್ ಅನ್ನು ಗ್ರೀನ್‌ಪಾರ್ಕ್ ಕ್ರೀಡಾಂಗಣದಲ್ಲಿ ಯುಪಿಸಿಎ ನಡೆಸಿತ್ತು. ಕೆಲವು ತಿಂಗಳ ಹಿಂದೆ ರಣಜಿ ಟ್ರೋಫಿ ಪಂದ್ಯಗಳೂ ನಡೆದಿದ್ದವು. ಆದರೆ, ಈ ಪಂದ್ಯಗಳಲ್ಲಿ ಪ್ರೇಕ್ಷಕರು ವಿಶೇಷ ಆಸಕ್ತಿ ತೋರಲಿಲ್ಲ. ಆದರೆ ಇದೀಗ ಟೆಸ್ಟ್ ಪಂದ್ಯದಲ್ಲೇ ಭಾರತ ಕ್ರಿಕೆಟ್ ತಂಡದ ಸ್ಟಾರ್ ಗಳನ್ನು ನೋಡಲು ಪ್ರೇಕ್ಷಕರು ಖಂಡಿತಾ ಬರುತ್ತಾರೆ ಎಂದು ಆಯೋಜಕರು ಭರವಸೆ ವ್ಯಕ್ತಪಡಿಸಿದ್ದಾರೆ.

ಮಳೆಯಲ್ಲೂ ಅಭ್ಯಾಸ

ಗ್ರೀನ್ ಪಾರ್ಕ್ ಕ್ರೀಡಾಂಗಣದಲ್ಲಿ 4 ಒಳಾಂಗಣ ಪಿಚ್‌ಗಳನ್ನು ಮಾಡಲಾಗಿದ್ದು, ಮಳೆಯ ಸಂದರ್ಭದಲ್ಲೂ ಆಟಗಾರರು ನೆಟ್ ಅಭ್ಯಾಸ ಮಾಡಬಹುದು. ಇನ್ನು ಆಟಗಾರರು ಮಳೆಯಲ್ಲಿ ಯಾವುದೇ ಸಮಸ್ಯೆ ಎದುರಿಸುವುದಿಲ್ಲ ಎಂದು ಗ್ರೀನ್ ಪಾರ್ಕ್ ಕ್ರೀಡಾ ವಿಭಾಗದ ಉಪ ನಿರ್ದೇಶಕ ಆರ್.ಎನ್.ಸಿಂಗ್ ತಿಳಿಸಿದ್ದಾರೆ.

ಆಟಗಾರರಯ ಆರಾಮವಾಗಿ ಅಭ್ಯಾಸ ಮಾಡಲು ಸಾಧ್ಯವಾಗುತ್ತದೆ. ವರ್ಷಗಳ ನಂತರ ಸೆಪ್ಟೆಂಬರ್‌ನಲ್ಲಿ ಭಾರತ-ಬಾಂಗ್ಲಾದೇಶ ಪಂದ್ಯ ನಡೆಯಲಿದೆ ಎಂದು ಯುಪಿಸಿಎ ಸಿಇಒ ಅಂಕಿತ್ ಚಟರ್ಜಿ ಹೇಳಿದ್ದಾರೆ. ನಗರದ ಐತಿಹಾಸಿಕ ಗ್ರೀನ್ ಪಾರ್ಕ್ ಸ್ಟೇಡಿಯಂನಲ್ಲಿ ಟೆಸ್ಟ್ ಪಂದ್ಯಕ್ಕೆ ಬಿಸಿಸಿಐ ಅನುಮತಿ ನೀಡಿದೆ.

Story first published: Thursday, June 20, 2024, 23:08 [IST]
Other articles published on Jun 20, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+