ಇತಿಹಾಸದ ಸನಿಹದಲ್ಲಿ ಟೀಮ್ ಇಂಡಿಯಾ, ಚೆನ್ನೈ ಟೆಸ್ಟ್ ಗೆದ್ದರೆ ದಾಖಲೆ
ಭಾರತ ಹಾಗೂ ಬಾಂಗ್ಲಾದೇಶಗಳ ನಡುವಣ ಮೊದಲ ಟೆಸ್ಟ್ ಚೆನ್ನೈನಲ್ಲಿ ನಡೆಯಲಿದೆ. ಈ ಟೆಸ್ಟ್‌ಗೆ ಈಗಾಗಲೇ ಭಾರತ ತಂಡವನ್ನು ಪ್ರಕಟಿಸಲಾಗಿದೆ. ಈ ಸರಣಿಯ ಎರಡನೇ ಪಂದ್ಯಕ್ಕೆ ಕಾನ್ಪುರ್ ಅಂಗಳ ಆತಿಥ್ಯ ನೀಡಲಿದೆ. ಭಾರತ ಬಹು ದಿನಗಳ ಬಳಿಕ ಟೆಸ್ಟ್ ಫಾರ್ಮೆಟ್ ಆಡಲಿದ್ದು, ಎಲ್ಲರ ಕಣ್ಣು ರೋಹಿತ್ ಪಡೆಯ ಮೇಲೆ ನೆಟ್ಟಿದೆ.
ಈ ಟೆಸ್ಟ್ ಟೀಮ್ ಇಂಡಿಯಾ ಆಟಗಾರರಿಗೆ ವಿಶೇಷವಾಗಿದೆ. ಈ ಟೆಸ್ಟ್‌ನಲ್ಲಿ ಸ್ಥಿರ ಪ್ರದರ್ಶನ ನೀಡಿ ಪೂರ್ಣ ಅಂಕ ಕಲೆ ಹಾಕುವ ಇರಾದೆಯನ್ನು ಟೀಮ್ ಇಂಡಿಯಾ ಹಾಕಿಕೊಂಡಿದೆ. ಸದ್ಯ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್‌ನಲ್ಲಿ ಮೊದಲ ಸ್ಥಾನದಲ್ಲಿರುವ ಭಾರತ, ಬಾಂಗ್ಲಾ ವಿರುದ್ಧ ಎರಡೂ ಪಂದ್ಯಗಳನ್ನು ಗೆದ್ದು ಬೀಗಿದಲ್ಲಿ ಅಗ್ರ ಸ್ಥಾನ ಭದ್ರವಾಗುತ್ತದೆ. ಅಲ್ಲದೆ ಈ ಗೆಲುವಿನ ಮೂಲಕ ಟೀಮ್ ಇಂಡಿಯಾ ಮತ್ತೊಂದು ಹೊಸ ಇತಿಹಾಸ ನಿರ್ಮಿಸುವ ಕನಸು ಕಂಡಿದೆ.

ಯಾವ ದಾಖಲೆಯ ಮೇಲೆ ಕಣ್ಣು?
ರೋಹಿತ್ ಶರ್ಮಾ ನಾಯಕತ್ವದಲ್ಲಿ ಟೀಂ ಇಂಡಿಯಾ ಈ ಪಂದ್ಯವನ್ನು ಗೆಲ್ಲುವಲ್ಲಿ ಯಶಸ್ವಿಯಾದರೆ ಅದು ಐತಿಹಾಸಿಕ ಜಯವಾಗಲಿದೆ. ಇತಿಹಾಸದಲ್ಲೇ ಎಂದೂ ಆಗದ ಕ್ಷಣಕ್ಕೆ ಈ ಸರಣಿಯ ಮೊದಲ ಪಂದ್ಯ ಸಾಕ್ಷಿಯಾಗಲಿದೆ. ಭಾರತ ತಂಡ ಟೆಸ್ಟ್‌ನಲ್ಲಿ ಸೋಲಿಗಿಂತ ಹೆಚ್ಚು ಗೆಲುವು ದಾಖಲಿಸಿದ ಕೀರ್ತಿಯನ್ನು ತನ್ನದಾಗಿಸಿಕೊಳ್ಳಲಿದೆ. ಟೀಮ್ ಇಂಡಿಯಾ ಗೆಲುವಿನ ಸಂಖ್ಯೆ ಹೆಚ್ಚು ಆಗಲಿದ್ದು, ಹಿಂದೆಂದೂ ಈ ರೀತಿ ಸಂಭವಿಸಿಲ್ಲ. ಸದ್ಯ ಸೋಲು, ಗೆಲುವಿನ ಅನುಪಾತ ಸಮನಾಗಿದೆ.
ಒಟ್ಟು ಎಷ್ಟು ಟೆಸ್ಟ್ ಪಂದ್ಯಗಳನ್ನು ಭಾರತ ಆಡಿದೆ?
ಚೆನ್ನೈ ಟೆಸ್ಟ್‌ನಲ್ಲಿ ಬಾಂಗ್ಲಾದೇಶ ವಿರುದ್ಧದ ಭಾರತ ಗೆದ್ದರೆ, 92 ವರ್ಷಗಳ ಟೆಸ್ಟ್ ಇತಿಹಾಸದಲ್ಲೇ ಸೋಲಿಗಿಂತ ಹೆಚ್ಚಿನ ಪಂದ್ಯಗಳನ್ನು ಗೆದ್ದ ದಾಖಲೆಯನ್ನು ಬರೆಯಲಿದೆ. ಭಾರತ ತಂಡ ಸದ್ಯ ಟೆಸ್ಟ್ ಕ್ರಿಕೆಟ್‌ನಲ್ಲಿ ಒಟ್ಟು 579 ಪಂದ್ಯಗಳಲ್ಲಿ ಕಣಕ್ಕೆ ಇಳಿದಿದೆ. ಇದರಲ್ಲಿ 178 ಸೋಲು, 178 ಗೆಲುವು ಸಾಧಿಸಿದೆ. ಇದನ್ನು ಬಿಟ್ಟು 222 ಪಂದ್ಯಗಳು ಡ್ರಾ ಆಗಿವೆ. ಈ ಸರಣಿಯಲ್ಲಿ ಟೀಮ್ ಇಂಡಿಯಾ ಒಂದೇ ಒಂದು ಪಂದ್ಯವನ್ನು ಸೋಲದೇ ಇದ್ದರೆ, ಈ ದಾಖಲೆಯನ್ನು ಬಲ ಪಡಿಸಿಕೊಳ್ಳಬಹುದು.

ಪ್ರಸಕ್ತ ವರ್ಷದ ಆರಂಭದಲ್ಲಿ ಟೀಮ್ ಇಂಡಿಯಾ ಇಂಗ್ಲೆಂಡ್ ವಿರುದ್ಧ ಗೆಲುವು ಸಾಧಿಸುವ ಮೂಲಕ, ಸೋಲು- ಗೆಲುವಿನ ಲೆಕ್ಕಾಚಾರವನ್ನು ಸಮನಾಗಿಸಿತ್ತು. ಈಗ ಈ ಸಂಖ್ಯೆಯನ್ನು ಏರಿಸಿಕೊಳ್ಳುವ ಸದಾವಕಾಶ ಟೀಮ್ ಇಂಡಿಯಾಕ್ಕೆ ಸಿಕ್ಕಿದೆ.
ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್‌ಗೆ ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಯಶಸ್ವಿ ಜೈಸ್ವಾಲ್, ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್, ಸರ್ಫರಾಜ್ ಖಾನ್, ರಿಷಬ್ ಪಂತ್ (ವಾಕ್), ಧ್ರುವ್ ಜುರೆಲ್ (ವಿಕೆ), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ. , ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್, ಆಕಾಶ್ ದೀಪ್, ಜಸ್ಪ್ರೀತ್ ಬುಮ್ರಾ, ಯಶ್ ದಯಾಳ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications