
ಟೀಮ್ ಇಂಡಿಯಾದ ಪ್ರಮುಖ ಬ್ಯಾಟ್ಸ್‌ಮನ್ ಕೆಎಲ್ ರಾಹುಲ್ ಇಂಗ್ಲೆಂಡ್ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಭರ್ಜರಿ ಶತಕವನ್ನು ಬಾರಿಸಿದ್ದಾರೆ. ಈ ಮೂಲಕ ಟೀಮ್ ಇಂಡಿಯಾದ ಬೃಹತ್ ಮೊತ್ತಕ್ಕೆ ಕಾರಣರಾಗಿದ್ದಾರೆ. ಈ ಮೂಲಕ ಕಳಪೆ ಬ್ಯಾಟಿಂಗ್ ಕಾರಣಕ್ಕೆ ಟೀಕೆಗೆ ಒಳಗಾಗಿದ್ದ ಆಟಗಾರರಿಗೆ ಬ್ಯಾಟ್‌ನಿಂದಲೇ ಉತ್ತರವನ್ನು ನೀಡಿದ್ದಾರೆ ಕೆಎಲ್ ರಾಹುಲ್.
ಏಕದಿನ ಮಾದರಿಯಲ್ಲಿ ಕೆಎಲ್ ರಾಹುಲ್ ಸಿಡಿಸಿದ ಐದನೇ ಶತಕ ಇದಾಗಿದೆ. ಈ ಹಿಂದೆ 2020ರ ಫೆಬ್ರವರಿಯಲ್ಲಿ ಕೆಎಲ್ ರಾಹುಲ್ ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ಕೊನೆಯ ಬಾರಿಗೆ ಮೂರಂಕಿಯನ್ನು ದಾಟಿದ್ದರು ಕೆಎಲ್ ರಾಹುಲ್.
114 ಎಸೆತಗಳನ್ನು ಎದುರಿಸಿದ ಕೆಎಲ್ ರಾಹುಲ್ 108 ರನ್‌ಗಳಿಸಿ ತಮ್ಮ ಭರ್ಜರಿ ಇನ್ನಿಂಗ್ಸ್‌ಅನ್ನು ಅಂತ್ಯಗೊಳಿಸಿದರು. ಈ ಸುಂದರ ಇನ್ನಿಂಗ್ಸ್‌ನಲ್ಲಿ ಏಳು ಬೌಂಡರಿ ಹಾಗೂ 2 ಸಿಕ್ಸರ್ ಒಳಗೊಂಡಿತ್ತು. ಟಾಮ್ ಕರನ್ ಎಸೆತದಲ್ಲಿ ಟಾಪ್ಲೆಗೆ ಕ್ಯಾಚ್ ನೀಡುವ ಮೂಲಕ ಫೆವಿಲಿಯನ್ ಸೇರಿಕೊಂಡರು.
ಕೆಎಲ್ ರಾಹುಲ್ ಇಂದು ಎರಡು ಶತಕದ ಜೊತೆಯಾಟದಲ್ಲಿ ಭಾಗಿಯಾಗಿದ್ದಾರೆ. ಮೊದಲಿಗೆ ವಿರಾಟ್ ಕೊಹ್ಲಿ ಜೊತೆಗೆ 121 ರನ್‌ಗಳ ಜೊತೆಯಾಟದಲ್ಲಿ ಪಾಲ್ಗೊಂಡಿದ್ದರೆ ಬಳಿಕ ರಿಷಭ್ ಪಂತ್ ಜೊತೆಗೆ 113 ರನ್‌ಗಳ ಜೊತೆಯಾಟವನ್ನು ನೀಡಿ ಮಿಂಚಿದ್ದಾರೆ.
ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಕೆಎಲ್ ರಾಹುಲ್ ಸತತ ನಾಲ್ಕು ಇನ್ನಿಂಗ್ಸ್‌ಗಳಲ್ಲಿ ಕಳಪೆ ಪ್ರದರ್ಶನ ನೀಡಿದ್ದರು. ಹೀಗಾಗಿ ಕೆಎಲ್ ರಾಹುಲ್ ಫಾರ್ಮ್ ಬಗ್ಗೆ ಸಾಕಷ್ಟು ಟೀಕೆಗಳು ವ್ಯಕ್ತವಾಗಿತ್ತು. ಅಂತಿಮ ಟಿ20 ಪಂದ್ಯದಲ್ಲಿ ಬೆಂಚ್ ಕಾದಿದ್ದರಾದರೂ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಅವಕಾಶವನ್ನು ಪಡೆದುಕೊಂಡು ಅರ್ಧ ಶತಕ ಸಿಡಿಸಿ ಫಾರ್ಮ್‌ಗೆ ಮರಳಿದ್ದರು. ಎರಡನೇ ಪಂದ್ಯದಲ್ಲಿ ಭರ್ಜರಿ ಶತಕವನ್ನು ಸಿಡಿಸುವಲ್ಲಿ ಯಶಸ್ವಿಯಾಗಿದ್ದಾರೆ ಕೆಎಲ್ ರಾಹುಲ್.