Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಭಾರತ vs ಇಂಗ್ಲೆಂಡ್: ಟೆಸ್ಟ್ ಇತಿಹಾಸದಲ್ಲಿ ಸೋಲು ಗೆಲುವಿನ ಲೆಕ್ಕಾಚಾರ

India vs Englad: Head to Head stats between england and india test cricket

ಟೆಸ್ಟ್ ಸರಣಿಯಲ್ಲಿ ಮುಖಾಮುಖಿಯಾಗಲು ಭಾರತ ಹಾಗೂ ಇಂಗ್ಲೆಂಡ್ ತಂಡಗಳು ಸಜ್ಜಾಗಿದೆ. ಈ ಬಹುನಿರೀಕ್ಷಿತ ಟೆಸ್ಟ್ ಸರಣಿ ಫೆಬ್ರವರಿ 5 ರಿಂದ ಆರಂಭವಾಗಲಿದೆ. ಸರಣಿಯ ಮೊದಲ ಎರಡು ಪಂದ್ಯಗಳು ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಮ್‌ನಲ್ಲಿ ನಡೆಯಲಿದ್ದು ಬಳಿಕ ಎರಡು ಪಂದ್ಯಗಳು ಅಹ್ಮದಾಬಾದ್‌ನಲ್ಲಿ ನಡೆಯಲಿದೆ.

ಈ ಟೆಸ್ಟ್ ಸರಣಿ ಸದ್ಯ ನಡೆಯುತ್ತಿರುವ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ನ ಫೈನಲ್‌ಗೆ ನಿರ್ಣಾಯಕವಾಗಿದೆ. ಈಗಾಗಲೇ ನ್ಯೂಜಿಲೆಂಡ್ ತಂಡ ಫೈನಲ್‌ಗೆ ಟಿಕೆಟ್ ಗಿಟ್ಟಿಸಿಕೊಂಡಿದ್ದು ಇನ್ನೊಂದು ಸ್ಥಾನಕ್ಕೆ ಭಾರತ ಹಾಗೂ ಇಂಗ್ಲೆಂಡ್ ಸರಣಿ ನಿರ್ಣಾಯಕವಾಗಿದೆ. ಭಾರತ ಇಂಗ್ಲೆಂಡ್ ಜೊತೆಗೆ ಆಸ್ಟ್ರೇಲಿಯಾ ತಂಡದ ಭವಿಷ್ಯವನ್ನು ಕೂಡ ಈ ಸರಣಿಯ ಫಲಿತಾಂಶ ನಿರ್ಧರಿಸಲಿದೆ.

ಭಾರತ ಹಾಗೂ ಇಂಗ್ಲೆಂಡ್ ಟೆಸ್ಟ್ ಇತಿಹಾಸದಲ್ಲಿ ಮುಖಾಮುಖಿಯಾದ ಸಂದರ್ಭಗಳ ಫಲಿತಾಂಶಗಳ ಅಂಕಿಅಂಶಗಳ ವಿವರ ಇಲ್ಲಿದೆ

ಒಟ್ಟಾರೆ ಪಂದ್ಯಗಳ ಫಲಿತಾಂಶ

ಒಟ್ಟಾರೆ ಪಂದ್ಯಗಳ ಫಲಿತಾಂಶ

ಭಾರತ ಹಾಗೂ ಇಂಗ್ಲೆಂಡ್ ತಂಡಗಳು ಟೆಸ್ಟ್ ಕ್ರಿಕೆಟ್‌ನಲ್ಲಿ ಈವರೆಗೆ ಒಟ್ಟಾರೆಯಾಗಿ 122 ಟೆಸ್ಟ್ ಪಂದ್ಯಗಳಲ್ಲಿ ಮುಖಾಮುಖಿಯಾಗಿದೆ. ಇದರಲ್ಲಿ ಭಾರತ 26 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದರೆ ಇಂಗ್ಲೆಂಡ್ 47 ಪಂದ್ಯಗಳಲ್ಲಿ ಗೆದ್ದುಕೊಂಡಿದೆ. 49 ಪಂದ್ಯಗಳು ಡ್ರಾ ಫಲಿತಾಂಶವನ್ನು ಪಡೆದುಕೊಂಡಿದೆ.

ತವರಿನಲ್ಲಿ ಭಾರತವೇ ಬಲಿಷ್ಠ

ತವರಿನಲ್ಲಿ ಭಾರತವೇ ಬಲಿಷ್ಠ

ಒಟ್ಟಾರೆ ಫಲಿತಾಂಶವನ್ನು ಗಮನಿಸಿದರೆ ಟೆಸ್ಟ್ ಗೆಲುವಿನಲ್ಲಿ ಇಂಗ್ಲೆಂಡ್ ಭಾರತಕ್ಕಿಂತ ಮೇಲುಗೈ ಸಾಧಿಸಿರುವುದು ಸ್ಪಷ್ಟವಾಗಿದೆ. ಆದರೆ ಭಾರತ ತವರಿನಲ್ಲಿ ಆಡಿದ ಪಂದ್ಯಗಳಲ್ಲಿ ಸಂಪೂರ್ಣ ಮುನ್ನಡೆಯನ್ನು ಗಳಿಸಿಕೊಂಡಿದೆ. ಭಾರತದಲ್ಲಿ ಈವರೆಗೆ ಎರಡು ತಂಡಗಳು 60 ಬಾರಿ ಮುಖಾಮುಖಿಯಾಗಿದೆ. ಇದರಲ್ಲಿ ಭಾರತ 19 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದು ಪ್ರವಾಸಿ ಇಂಗ್ಲೆಂಡ್ 13 ಪಂದ್ಯಗಳನ್ನು ಗೆದ್ದುಕೊಂಡಿದೆ.

ಮೊದಲ ಮುಖಾಮುಖಿ

ಮೊದಲ ಮುಖಾಮುಖಿ

ಭಾರತ ಹಾಗೂ ಇಂಗ್ಲೆಂಡ್ ತಂಡಗಳು ಮೊದಲ ಬಾರಿಗೆ 1932ರಲ್ಲಿ ಐತಿಹಾಸಿಕ ಲಾರ್ಡ್ಸ್ ಅಂಗಳದಲ್ಲಿ ಮುಖಾಮುಖಿಯಾದವು. ಜೂನ್ 25-28ರವರೆಗೆ ಈ ಪಂದ್ಯ ನಡೆಯಿತು. ಈ ಪಂದ್ಯವನ್ನು ಇಂಗ್ಲೆಂಡ್ 158 ರನ್‌ಗಳಿಂದ ಗೆದ್ದುಕೊಂಡಿತ್ತು. ಭಾರತ ಇಂಗ್ಲೆಂಡ್ ತಂಡದ ವಿರುದ್ಧ ಪ್ರಥಮ ಗೆಲುವು ಸಾಧಿಸಲು 20 ವರ್ಷಗಳನ್ನು ತೆಗೆದುಕೊಂಡಿತ್ತು. 1952ರಲ್ಲಿ ಚೆನ್ನೈನಲ್ಲಿ ನಡೆದ ಪಂದ್ಯದಲ್ಲಿ ಭಾರತ ತಂಡ ಇನ್ನಿಂಗ್ಸ್ ಹಾಗೂ 8 ರನ್‌ಗಳಿಂದ ಗೆಲುವು ಸಾಧಿಸಿತು.

Story first published: Wednesday, February 3, 2021, 16:00 [IST]
Other articles published on Feb 3, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+