
ಇಂಗ್ಲೆಂಡ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿ ಮಂಗಳವಾರ ಆರಂಭವಾಗಲಿದೆ. ಮೊದಲ ಪಂದ್ಯಕ್ಕೆ ಭಾರತ ಹಾಗೂ ಇಂಗ್ಲೆಂಡ್ ಎರಡು ತಂಡಗಳು ಕೂಡ ಸಜ್ಜಾಗಿದ್ದು ಪಂದ್ಯ ಸಾಕಷ್ಟು ಕುತೂಹಲ ಮೂಡಿಸಿದೆ. ಈ ಪಂದ್ಯದ ಆರಂಭ ಹಾಗೂ ನೇರಪ್ರಸಾರದ ಮಾಹಿತಿಗಳು ಈ ವರದಿಯಲ್ಲಿದೆ.
ಭಾರತ ಹಾಗೂ ಇಂಗ್ಲೆಂಡ್ ನಡುವಿನ ಏಕದಿನ ಸರಣಿಯ ಎಲ್ಲಾ ಪಂದ್ಯಗಳಿಗೂ ಪಂದ್ಯ ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಶನ್ ಸ್ಟೇಡಿಯಂ ಆತಿಥ್ಯವನ್ನು ವಹಿಸಿಕೊಳ್ಳಲಿದೆ. ಮೊದಲ ಪಂದ್ಯ ಮಾರ್ಚ್ 23 ಮಂಗಳವಾರದಂದು ನಡೆಯಲಿದ್ದು ಪಂದ್ಯದ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ.
ಪಂದ್ಯದ ಸಮಯ: ಭಾರತ ಹಾಗೂ ಇಂಗ್ಲೆಂಡ್‌ನ ಮೊದಲ ಪಂದ್ಯ ಅಹರ್ನಿಶಿಯಾಗಿ ನಡೆಯಲಿದೆ. ಈ ಪಂದ್ಯ ಮಧ್ಯಾಹ್ನ ಆರಂಭವಾಗಲಿದೆ. ಭಾರತೀಯ ಕಾಲಮಾನ ಮಧ್ಯಾಕ್ನ 1:30ಕ್ಕೆ ಪಂದ್ಯ ಶುರುವಾಗಲಿದ್ದು ಅದಕ್ಕೆ ಅರ್ಧ ಗಂಟೆ ಮುನ್ನ ಟಾಸ್ ಪ್ರಕ್ರಿಯೆ ನಡೆಯಲಿದೆ.
ಪಂದ್ಯದ ನೇರಪ್ರಸಾರದ ಮಾಹಿತಿ: ಭಾರತ ಹಾಗೂ ಇಂಗ್ಲೆಂಡ್ ನಡುವಿನ ಈ ಪಂದ್ಯದ ನೇರಪ್ರಸಾರವನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ವೀಕ್ಷಿಸಬಹುದು. ಹಾಟ್‌ಸ್ಟಾರ್ ಚಂದಾದಾರರಾಗಿದ್ದರೆ ಈ ವೇದಿಕೆಯಲ್ಲಿಯೂ ಪಂದ್ಯದ ನೇರಪ್ರಸಾರವನ್ನು ವೀಕ್ಷಿಸಬಹುದು. ಮೈಖೇಲ್ ಕನ್ನಡದಲ್ಲಿ ನೀವು ಪಂದ್ಯದ ಸ್ಕೋರ್‌ನ ಕ್ಷಣಕ್ಷಣದ ಮಾಹಿತಿಗಳನ್ನು ಪಡೆಯಬಹುದು.
ಭಾರತ ಹಾಗೂ ಇಂಗ್ಲೆಂಡ್ ತಂಡಗಳು ಟೆಸ್ಟ್ ಹಾಗೂ ಟಿ20 ಸರಣಿಯಲ್ಲಿ ಭಾಗಿಯಾಗಿದ್ದು ಎರಡರಲ್ಲಿಯೂ ಭಾರತ ಸರಣಿ ಜಯಸಿದೆ. ಟೆಸ್ಟ್‌ನಲ್ಲಿ ಟೀಮ್ ಇಂಡಿಯಾ 3-1 ಅಂತರದಿಂದ ಗೆಲುವು ಸಾಧಿಸಿದ್ದರೆ ಟಿ20 ಸರಣಿ 3-2 ಅಂತರದಿಂದ ಭಾರತದ ಪಾಲಾಯಿತು. ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿ 28ಕ್ಕೆ ಅಂತ್ಯವಾಗಲಿದ್ದು ಬಳಿಕ ಐಪಿಎಲ್‌ನ 14ನೇ ಆವೃತ್ತಿಗೆ ಆಟಗಾರರು ಸಜ್ಜಾಗಲಿದ್ದಾರೆ. ಐಪಿಎಲ್ 2021 ಏಪ್ರಿಲ್ 9ರಿಮದ ಆರಂಭವಾಗಲಿದೆ.