Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IND vs END 1st ODI: ಚಾಂಪಿಯನ್ಸ್‌ ಟ್ರೋಫಿಗೆ ಇಂದಿನಿಂದ ಸಮರಾಭ್ಯಾಸ ಶುರು: ಹೇಗಿದೆ ಪಿಚ್‌? ಎಲ್ಲಿ ನೋಡಬಹುದು?

ಭಾರತ ಹಾಗೂ ಇಂಗ್ಲೆಂಡ್ ನಡುವಣ ಮೊದಲ ಏಕದಿನ ಪಂದ್ಯ ನಾಗ್ಪುರದಲ್ಲಿ ನಡೆಯಲಿದೆ. ಈ ಪಂದ್ಯಕ್ಕೆ ಸಕಲ ರೀತಿಯಲ್ಲಿ ವಿದರ್ಭ ಕ್ರಿಕೆಟ್ ಸಂಸ್ಥೆ ಸಜ್ಜಾಗಿದೆ. ಈಗಾಗಲೇ ಟಿ20 ಸರಣಿಯನ್ನು ಗೆದ್ದು ವಿಶ್ವಾಸದಲ್ಲಿರುವ ಟೀಮ್ ಇಂಡಿಯಾ, ಮತ್ತೊಂದು ಸರಣಿ ಗೆಲುವಿನ ಕನಸು ಕಾಣುತ್ತಿದೆ. ಸ್ಟಾರ್ ಆಟಗಾರರು ಅಂಗಳಕ್ಕೆ ಪ್ರವೇಶಿಸಲಿದ್ದು ಕುತೂಹಲ ಮನೆ ಮಾಡಿದೆ. ಅಂಕಿ ಅಂಶಗಳ ಲೆಕ್ಕಾಚಾರದಲ್ಲಿ ಭಾರತ ಬಲಾಢ್ಯವಾಗಿದೆ.

ಈಗಾಗಲೇ ಭಾರತ ಹಾಗೂ ಇಂಗ್ಲೆಂಡ್ ತಂಡಗಳು 107 ಬಾರಿ ಏಕದಿನ ಕ್ರಿಕೆಟ್‌ನಲ್ಲಿ ಮುಖಾಮುಖಿ ಆಗಿವೆ. ಈ ವೇಳೆ ಟೀಮ್ ಇಂಡಿಯಾ 58 ಪಂದ್ಯಗಳಲ್ಲಿ ಜಯ ದಾಖಲಿಸಿದರೆ, 44 ಪಂದ್ಯಗಳನ್ನು ಇಂಗ್ಲೆಂಡ್ ಗೆದ್ದಿದೆ. ಎರಡು ಪಂದ್ಯಗಳು ಟೈ ಆಗಿದ್ದು, ಮೂರು ಪಂದ್ಯಗಳು ಫಲಿತಾಂಶ ಹೀನವಾಗಿವೆ. ತವರಿನಲ್ಲಿ ಭಾರತ 34 ಪಂದ್ಯಗಳಲ್ಲಿ ಜಯ ಸಾಧಿಸಿದರೆ, ಇಗ್ಲೆಂಡ್‌ 18 ಪಂದ್ಯಗಳಲ್ಲಿ ಮುಖಭಂಗ ಅನುಭವಿಸಿದೆ.

India vs England 1st ODI Team India Gears Up for Nagpur Battle Kohli Eyes 14 000 ODI Runs

ವಾತಾವರಣ ಹಾಗೂ ಪಿಚ್‌

ನಾಗ್ಪುರದಲ್ಲಿ ಭಾರತ ಹಾಗೂ ಇಂಗ್ಲೆಂಡ್‌ ನಡುವಣ ಮೊದಲ ಏಕದಿನ ಪಂದ್ಯಕ್ಕೆ ವಾತಾವರಣ ತೊಂದರೆ ನೀಡುವುದಿಲ್ಲ ಎಂಬುದನ್ನು ನಿರೀಕ್ಷಿಸಲಾಗಿದೆ. ಇತ್ತೀಚಿನ ವರ್ಷಗಳಲ್ಲಿ ವಿಸಿಎ ಕ್ರೀಡಾಂಗಣದಲ್ಲಿನ ಪಿಚ್ ಸ್ಪಿನ್ನರ್‌ಗಳಿಗೆ ಉತ್ತಮ ಸಹಾಯವನ್ನು ನೀಡುತ್ತದೆ. ಈ ಮೈದಾನದಲ್ಲಿ ಕಳೆದ ಮೂರು ಪಂದ್ಯಗಳಲ್ಲಿ ಟೀಮ್ ಇಂಡಿಯಾ ಸ್ಥಿರ ಪ್ರದರ್ಶನ ನೀಡಿ ಗೆಲುವು ದಾಖಲಿಸಿದೆ.

ವಿರಾಟ್‌ ಮೇಲೆ ಕಣ್ಣು

ಟೀಮ್ ಇಂಡಿಯಾ ಮೊದಲ ಏಕದಿನ ಪಂದ್ಯದಲ್ಲಿ ನಾಯಕ ರೋಹಿತ್ ಶರ್ಮಾ ಹಾಗೂ ಉಪನಾಯಕ ಶುಭಮನ್‌ ಗಿಲ್‌ ಜೊತೆ ಇನಿಂಗ್ಸ್‌ ಆರಂಭಿಸಲಿದ್ದಾರೆ. ಉಭಯ ಆಟಗಾರರು ಬಿಗ್ ಇನಿಂಗ್ಸ್‌ ಕಟ್ಟಿ ಭರವಸೆ ಮೂಡಿಸಬೇಕಿದೆ. ಇನ್ನು ಚೇಸಿಂಗ್ ಸ್ಟಾರ್ ಖ್ಯಾತಿಯ ವಿರಾಟ್ ಕೊಹ್ಲಿ ಮೇಲೂ ಎಲ್ಲರ ಕಣ್ಣು ನೆಟ್ಟಿದೆ. ಇವರು ಈ ಪಂದ್ಯದಲ್ಲಿ 94 ರನ್‌ ಬಾರಿಸುವಲ್ಲಿ ಸಫಲರಾದರೆ, ಅಂತಾರಾಷ್ಟ್ರೀಯ ಏಕದಿನ 14 ಸಾವಿರ ರನ್‌ ಕಲೆ ಹಾಕಿದ ದಾಖಲೆ ಮಾಡಲಿದ್ದಾರೆ. ಈ ದಾಖಲೆಯನ್ನು ಸಚಿನ್ ತೆಂಡೂಲ್ಕರ್, ಕುಮಾರ್ ಸಂಗಕ್ಕಾರ ಈ ಮೊದಲು ಮಾಡಿದ್ದಾರೆ.

India vs England 1st ODI Team India Gears Up for Nagpur Battle Kohli Eyes 14 000 ODI Runs

ಇನ್ನು ನಾಲ್ಕನೇ ಕ್ರಮಾಂಕದಲ್ಲಿ ಶ್ರೇಯಸ್‌ ಅಯ್ಯರ್ ಆಡುವುದು ಬಹುತೇಕ ಖಚಿತ. ಇವರು ದೇಶೀಯ ಟೂರ್ನಿಯಲ್ಲಿ ಸ್ಥಿರ ಪ್ರದರ್ಶನ ನೀಡಿದ್ದರು. ವಿಕೆಟ್‌ ಕೀಪರ್‌ ರೂಪದಲ್ಲಿ ಯಾರು ಅಂಗಳಕ್ಕೆ ಇಳಿಯಲಿದ್ದಾರೆ ಎಂಬ ಪ್ರಶ್ನೆಗೆ ಟಾಸ್‌ ಆದ ಬಳಿಕವೇ ಉತ್ತರ ಲಭಿಸಲಿದೆ. ಈ ಸ್ಥಾನದ ಮೇಲೆ ಕೆಎಲ್ ರಾಹುಲ್‌ ಹಾಗೂ ರಿಷಭ್‌ ಪಂತ್ ಕಣ್ಣು ನೆಟ್ಟಿದ್ದಾರೆ. ಟೀಮ್ ಇಂಡಿಯಾದ ಸ್ಟಾರ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಕಣಕ್ಕೆ ಇಳಿಯುವುದು ಫಿಕ್ಸ್ ಎನ್ನಾಗುತ್ತಿದೆ.

ವರುಣ್‌ಗೆ ಸಿಗುತ್ತಾ ಚಾನ್ಸ್‌

ಟಿ20 ಸರಣಿಯಲ್ಲಿ ಇಂಗ್ಲೆಂಡ್ ಬ್ಯಾಟರ್‌ಗಳನ್ನು ಕಾಡಿದ್ದ ವರುಣ್‌ ಚಕ್ರವತ್ತಿಗೆ ಕೊನೆಯ ಕ್ಷಣದಲ್ಲಿ ಟೀಮ್ ಇಂಡಿಯಾದಲ್ಲಿ ಸ್ಥಾನ ನೀಡಲಾಗಿದೆ. ಇವರಿಗೆ ಪದಾರ್ಪಣೆ ಮಾಡುವ ಅವಕಾಶ ಸಿಗುತ್ತದಾ ಎಂಬುದನ್ನು ಕಾದು ನೋಡಬೇಕಿದೆ. ಇನ್ನು ರಿಸ್ಟ್‌ ಸ್ಪಿನ್ ಬೌಲರ್‌ ಕುಲ್ದೀಪ್ ಯಾದವ್‌ ಅಖಾಡಕ್ಕೆ ಇಳಿಯಲಿದ್ದಾರೆ. ವೇಗದ ಬೌಲರ್‌ ಮೊಹಮ್ಮದ್‌ ಶಮಿ ಮೈದಾನಕ್ಕೆ ಇಳಿಯುವುದು ಫಿಕ್ಸ್‌. ಆದರೆ ಇವರಿಗೆ ಯಾರು ಸಾಥ್ ನೀಡಲಿದ್ದಾರೆ ಎಂಬುದೇ ಕುತೂಹಲ ಮೂಡಿಸಿದೆ.

ಸಮಯ: ಮಧ್ಯಾಹ್ನ 1ಕ್ಕೆ

ನೇರ ಪ್ರಸಾರ: ಡಿಸ್ನಿ ಪ್ಲಸ್ ಹಾಟ್‌ ಸ್ಟಾರ್‌, ಸ್ಟಾರ್‌ ನೆಟ್‌ವರ್ಕ್‌

Story first published: Thursday, February 6, 2025, 7:02 [IST]
Other articles published on Feb 6, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+