For Quick Alerts
ALLOW NOTIFICATIONS  
For Daily Alerts
 

IND vs ENG: ಏಕದಿನದಲ್ಲೂ ಮುಂದುವರಿದ ಭಾರತದ ಅಬ್ಬರ: ಇಂಗ್ಲೆಂಡ್‌ಗೆ ಹೀನಾಯ ಸೋಲು

India vs England: 1st ODI, Team India win the 1st match by 10 wickets

ಭಾರತ ಹಾಗೂ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಭಾರತ 10 ವಿಕೆಟ್‌ಗಳ ಅಂತರದಿಂದ ಭರ್ಜರಿಯಾಗಿ ಗೆದ್ದುಕೊಂಡಿದೆ. ಈ ಮೂಲಕ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 1-0 ಅಂತರದಿಂದ ಭಾರತ ಮೇಲುಗೈ ಸಾಧಿಸಿದೆ. ತವರಿನಲ್ಲಿಯೇ ಇಂಗ್ಲೆಂಡ್ ಹೀನಾಯ ಪ್ರದರ್ಶನ ನೀಡುವ ಮುಖಭಂಗಕ್ಕೆ ಒಳಗಾಗಿದೆ.

ಮೊದಲಿಗೆ ಬ್ಯಾಟಿಂಗ್‌ನಲ್ಲಿ ಅತ್ಯಂತ ಕಳಪೆ ಪ್ರದರ್ಶನ ನೀಡಿದ್ದ ಇಂಗ್ಲೆಂಡ್ ತಂಡ ಬಳಿಕ ಬೌಲಿಂಗ್‌ನಲ್ಲಿಯೂ ಯಾವುದೇ ಮ್ಯಾಜಿಕ್ ಮಾಡಲು ಸಾಧ್ಯವಾಗಲಿಲ್ಲ. ಭಾರತ ತಂಡದ ಆರಂಭಿಕ ಜೊಡಿಯಾದ ರೋಹಿತ್ ಶರ್ಮಾ ಹಾಗೂ ಶಿಖರ್ ಧವನ್ ವಿಕೆಟ್ ಕಳೆದುಕೊಳ್ಳದೆಯೇ ಇಂಗ್ಲೆಂಡ್ ನೀಡಿದ್ದ ಗುರಿಯನ್ನು ಕೇವಲ 18.4 ಓವರ್‌ಗಳಲ್ಲಿ ಬೆನ್ನಟ್ಟುವಲ್ಲಿ ಯಶಸ್ವಿಯಾಗಿದೆ.

ರೋಹಿತ್ ಭರ್ಜರಿ ಬ್ಯಾಟಿಂಗ್

ರೋಹಿತ್ ಭರ್ಜರಿ ಬ್ಯಾಟಿಂಗ್

ಇನ್ನು ಇಂಗ್ಲೆಂಡ್ ನೀಡಿದ ಅಲ್ಪ ಮೊತ್ತವನ್ನು ಬೆನ್ನಟ್ಟಿದ ಭಾರತ ತಂಡದ ಪರವಾಗಿ ನಾಯಕ ರೋಹಿತ್ ಶರ್ಮಾ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು. ಇಂಗ್ಲೆಂಡ್ ಬೌಲಿಂಗ್ ದಾಳಿಯನ್ನು ಅಟ್ಟಾಡಿಸಿದ ರೋಹಿತ್ ಶರ್ಮಾ ಆರು ಬೌಂಡರಿ ಹಾಗೂ ಐದು ಸಿಕ್ಸರ್‌ಗಳೊಂದಿಗೆ ಕೇವಲ 58 ಎಸೆತಗಳಲ್ಲಿ 76 ರನ್‌ಗಳಿಸಿದರು. ಇನ್ನು ಮತ್ತೊಂದು ತುದಿಯಲ್ಲಿದ್ದ ಶಿಖರ್ ಧವನ್ ಕುಡ ಉತ್ತಮ ಸಾಥ್ ನಿಡಿದ್ದು 31 ರನ್‌ಗಳ ಕೊಡುಗೆ ನೀಡಿದರು.

ಬೌಲಿಂಗ್‌ನಲ್ಲಿ ಬೂಮ್ರಾ ಮ್ಯಾಜಿಕ್

ಬೌಲಿಂಗ್‌ನಲ್ಲಿ ಬೂಮ್ರಾ ಮ್ಯಾಜಿಕ್

ಟೀಮ್ ಇಂಡಿಯಾ ಪರವಾಗಿ ಬೌಲಿಂಗ್‌ನಲ್ಲಿ ಅಮೋಘ ಪ್ರದರ್ಶನ ನೀಡಿದ್ದು ಪ್ರಮುಖ ವೇಗಿ ಜಸ್ಪ್ರೀತ್ ಬೂಮ್ರಾ. ತನ್ನ ಮೊದಲ ಓವರ್‌ನಿಂದಲೇ ಆರ್ಭಟಿಸಲು ಆರಂಭಿಸಿದ್ದ ಬೂಮ್ರಾ ಜೇಸನ್ ರಾಯ್ ಹಾಗೂ ಜೋ ರುಟ್ ಇಬ್ಬರನ್ನು ಕೂಡ ಪ್ರಥಮ ಓವರ್‌ನಲ್ಲಿಯೇ ಔಟ್ ಮಾಡಿದ್ದರು. ಈ ಇಬ್ಬರು ಕೂಡ ಶೂನ್ಯಕ್ಕೆ ವಿಕೆಟ್ ಕಳೆದುಕೊಂಡರು. ಬಳಿಕ 7 ರನ್‌ಗಳಿಸಿದ್ದ ಬೈರ್‌ಸ್ಟೋವ್ ಕೂಡ ಬೂಮ್ರಾ ದಾಳಿಗೆ ಔಟಾದರು. ನಂತರ ಲಿಯಾಮ್ ಲಿವಿಂಗ್‌ಸ್ಟನ್ ಕೂಡ ಸೊನ್ನೆ ಸುತ್ತಿ ಬೂಮ್ರಾಗೆ ವಿಕೆಟ್ ಒಪ್ಪಿಸಿದರು. ಬಳಿಕ ಡೇವೊಡ್ ವಿಲ್ಲಿ ಹಾಗೂ ಬ್ರಿಡನ್ ಕೇರ್ಸ್ ಕೂಡ ಶೂನ್ಯಕ್ಕೆ ವಿಕೆಟ್ ಕಳೆದುಕೊಂಡರು. ಈ ಮೂಲಕ ಬೂಮ್ರಾ ಆರು ವಿಕೆಟ್‌ಗಳ ಗೊಂಚಲು ಪಡೆದಿದ್ದಾರೆ.

ಶೂನ್ಯ ಸುತ್ತಿದ ಇಂಗ್ಲೆಂಡ್ ಘಟಾನುಘಟಿಗಳು

ಶೂನ್ಯ ಸುತ್ತಿದ ಇಂಗ್ಲೆಂಡ್ ಘಟಾನುಘಟಿಗಳು

ಈ ಪಂದ್ಯದಲ್ಲಿ ಇಂಗ್ಲೆಂಡ್ ತಂಡದ ಪ್ರಮುಖ ಆಟಗಾರರು ಕ್ರೀಸ್‌ನಲ್ಲಿ ನೆಲೆಯೂರಲು ಸಂಪೂರ್ಣವಾಗಿ ವಿಫಲವಾದರು. ಪ್ರಮುಖ ಆಟಗಾರರೆಲ್ಲರೂ ಶೂನ್ಯಕ್ಕೆ ವಿಕೆಟ್ ಒಪ್ಪಿಸಿ ಫೆವಿಲಿಯನ್ ಸೇರಿಕೊಂಡಿದ್ದರು. ನಾಯಕ ಜೋಸ್ ಬಟ್ಲರ್ ಮಾತ್ರವೇ 30 ರನ್‌ಗಳ ಕೊಡುಗೆ ನೀಡಿದ್ದಾರೆ. ಆರಂಭಿಕ ಆಟಗಾರ ಜೇಸನ್ ರಾಯ್, ಜೋ ರೂಟ್, ಬೆನ್ ಸ್ಟೋಕ್ಸ್ ಹಾಗೂ ಲಿಯಾಮ್ ಲಿವಿಂಗ್‌ಸ್ಟನ್ ಶೂನ್ಯಕ್ಕೆ ವಿಕೆಟ್ ಒಪ್ಪಿಸಿ ಹೊರನಡೆದ ಇಂಗ್ಲೀಷ್ ಬ್ಯಾಟರ್‌ಗಳಾಗಿದ್ದಾರೆ.

Rohit Sharma ಹೊಡೆದ ಬಿಗ್ ಸಿಕ್ಸರ್ ಗೆ ಪುಟ್ಟ ಹುಡುಗಿಗೆ ಗಾಯ! ಇಲ್ನೋಡಿ ವಿಡಿಯೋ | *Cricket | OneIndia Kannada
ಇತ್ತಂಡಗಳ ಆಡುವ ಬಳಗ

ಇತ್ತಂಡಗಳ ಆಡುವ ಬಳಗ

ಇಂಗ್ಲೆಂಡ್ ಆಡುವ ಬಳಗ: ಜೇಸನ್ ರಾಯ್, ಜಾನಿ ಬೈರ್‌ಸ್ಟೋ, ಜೋ ರೂಟ್, ಬೆನ್ ಸ್ಟೋಕ್ಸ್, ಜೋಸ್ ಬಟ್ಲರ್(ನಾಯಕ, ವಿಕೆಟ್ ಕೀಪರ್), ಲಿಯಾಮ್ ಲಿವಿಂಗ್‌ಸ್ಟೋನ್, ಮೊಯಿನ್ ಅಲಿ, ಕ್ರೇಗ್ ಓವರ್‌ಟನ್, ಡೇವಿಡ್ ವಿಲ್ಲಿ, ಬ್ರೈಡನ್ ಕಾರ್ಸೆ, ರೀಸ್ ಟೋಪ್ಲಿ
ಬೆಂಚ್: ಮ್ಯಾಥ್ಯೂ ಪಾರ್ಕಿನ್ಸನ್, ಸ್ಯಾಮ್ ಕುರಾನ್, ಫಿಲಿಪ್ ಸಾಲ್ಟ್, ಹ್ಯಾರಿ ಬ್ರೂಕ್


ಭಾರತ ಆಡುವ ಬಳಗ: ರೋಹಿತ್ ಶರ್ಮಾ (ನಾಯಕ), ಶಿಖರ್ ಧವನ್, ಶ್ರೇಯಸ್ ಐಯ್ಯರ್, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ, ಯುಜ್ವೇಂದ್ರ ಚಾಹಲ್, ಪ್ರಸಿದ್ಧ್ ಕೃಷ್ಣ
ಬೆಂಚ್: ಅಕ್ಷರ್ ಪಟೇಲ್, ಇಶಾನ್ ಕಿಶನ್, ಮೊಹಮ್ಮದ್ ಸಿರಾಜ್, ಅರ್ಷದೀಪ್ ಸಿಂಗ್, ವಿರಾಟ್ ಕೊಹ್ಲಿ, ಶಾರ್ದೂಲ್ ಠಾಕೂರ್

Story first published: Wednesday, July 13, 2022, 9:21 [IST]
Other articles published on Jul 13, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+