ಮೊದಲ ಏಕದಿನ: ಇಂಗ್ಲೆಂಡ್ ವಿರುದ್ಧ ಭಾರತಕ್ಕೆ 8 ವಿಕೆಟ್ ಭರ್ಜರಿ ಜಯ


ನಾಟಿಂಗ್ಹ್ಯಾಮ್, ಜುಲೈ 13: ಇಂಗ್ಲೆಂಡ್ ಪ್ರವಾಸದಲ್ಲಿರುವ ಭಾರತ ನಾಟಿಂಗ್ಹ್ಯಾಮ್ ನ ಟ್ರೆಂಟ್ ಬ್ರಿಡ್ಜ್ ನಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಮೊದಲ ಏಕದಿನ ಪಂದ್ಯದಲ್ಲಿ 8 ವಿಕೆಟ್ ಜಯ ಸಾಧಿಸಿದೆ. ರೋಹಿತ್ ಶರ್ಮಾ ಅಮೋಘ ಶತಕದ ನೆರವಿನಿಂದ ಭಾರತ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.
ಟಾಸ್ ಸೋತು ಬ್ಯಾಟಿಂಗ್ ಗೆ ಇಳಿಸಲ್ಪಟ್ಟ ಇಂಗ್ಲೆಂಡ್ 49.5 ಓವರ್ ಗಳಲ್ಲಿ ಎಲ್ಲಾ ವಿಕೆಟ್ ಕಳೆದು 268ರನ್ ಪೇರಿಸಿ ಭಾರತಕ್ಕೆ 269 ರನ್ ಗುರಿ ನೀಡಿತ್ತು. ಚೇಸಿಂಗ್ ಗೆ ಇಳಿದ ಭಾರತ 40.1 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 269 ರನ್ ಪೇರಿಸಿ ವಿಜಯಾಚರಿಸಿತು.
ಆರಂಭಿಕ ಆಟಗಾರನಾಗಿ ಇಳಿದ ರೋಹಿತ್ ಅಜೇಯ 137 (114) ರನ್ ಸಿಡಿಸಿ ಭಾರತದ ಗೆಲುವಿನ ದಾರಿ ಸುಲಭವಾಗಿಸಿದರು. ಇವರೊಂದಿಗೆ ಶಿಖರ್ ಧವನ್ 40 (27), ವಿರಾಟ್ ಕೊಹ್ಲಿ 75 (82), ಕೆಎಲ್ ರಾಹುಲ್ ಅಜೇಯ 9 (18) ರನ್ ಸೇರಿಸಿ ತಂಡ ಮೊತ್ತ ಹೆಚ್ಚಿಸುವಲ್ಲಿ ನೆರವಾದರು.
ಇಂಗ್ಲೆಂಡ್ ಪರ ಜೇಸನ್ ರಾಯ್ 38 (35), ಬಿರ್ಸ್ಟೋವ್ 35 (38), ಬೆನ್ ಸ್ಟೋಕ್ಸ್ 50 (103), ಜೋಸ್ ಬಟ್ಲರ್ 53 (51), ಮೋಯೀನ್ ಆಲಿ 24 (23) ರನ್ ಗಳಿಸಿದ್ದು ಎದುರಾಳಿ ಭಾರತಕ್ಕೆ ತಕ್ಕ ಮಟ್ಟಿನ ಗುರಿ ನೀಡಲು ನೆರವಾಯಿತು. ಆದರೆ ಬಲಿಷ್ಟ ಭಾರತಕ್ಕೆ ಆ ಮೊತ್ತ ತಲುಪುವುದು ಕಷ್ಟವೆನಿಸಲಿಲ್ಲ.
ಇಂಗ್ಲೆಂಡ್ ಇನ್ನಿಂಗ್ಸ್ ವೇಳೆ ಭಾರತದ ಕುಲದೀಪ್ ಯಾದವ್ ಮಾರಕ ಬೌಲಿಂಗ್ ಮೂಲಕ ಈ ಬಾರಿಯೂ ಮಿಂಚಿದರು. 25 ರನ್ನಿಗೆ ಒಟ್ಟು ಆರು ವಿಕೆಟ್ ಉರುಳಿಸಿ ಯಾದವ್ ಪಾರಮ್ಯ ಮೆರೆದರು. ಪಂದ್ಯ ಶ್ರೇಷ್ಠ ಪ್ರಶಸ್ತಿಯೂ ಕುಲದೀಪ್ ಪಾಲಾಯಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications