India vs England, 1st T20I: ದಿನಾಂಕ, ಸಮಯ, ನೇರಪ್ರಸಾರ, ಪಿಚ್ ರಿಪೋರ್ಟ್

ಭಾರತ ಹಾಗೂ ಇಂಗ್ಲೆಂಡ್ ನಡುವಿನ ಟಿ20 ಸರಣಿಗೆ ಕ್ಷಣಗಣನೆ ಆರಂಭವಾಗಿದೆ. ಈ ಹಿನ್ನೆಲೆಯಲ್ಲಿ ಎರಡು ತಂಡಗಳ ಆಟಗಾರರು ಕೂಡ ಭರ್ಜರಿ ಸಿದ್ಧತೆಯಲ್ಲಿದ್ದಾರೆ. ಐದು ಪಂದ್ಯಗಳ ಟಿ20 ಸರಣಿ ಇದಾಗಿದ್ದು ಮೊದಲ ಪಂದ್ಯದಲ್ಲಿ ಭಾರತ ಹಾಗೂ ಇಂಗ್ಲೆಂಡ್ ತಂಡಗಳು ಹೋರಾಟಕ್ಕಿಳಿಯಲು ಸಿದ್ಧವಾಗಿದೆ.
ಟಿ20 ಕ್ರಿಕೆಟ್ ಮಾದರಿಯಲ್ಲಿ ಇಂಗ್ಲೆಂಡ್ ಅಗ್ರ ಸ್ಥಾನದಲ್ಲಿರುವ ತಂಡವಾಗಿದೆ. ಆದರೆ ಈಗ ಅದು ಭಾರತದ ವಿರುದ್ಧ ಆಡುತ್ತಿರುವುದರಿಂದ ಬಲಿಷ್ಠ ಭಾರತ ತಂಡವನ್ನು ತವರು ನೆಲದಲ್ಲಿ ಎದುರಿಸವುದು ಇಯಾನ್ ಮಾರ್ಗನ್ ಬಳಗಕ್ಕೆ ಸುಲಭವಿಲ್ಲ. ಹೀಗಾಗಿ ಈ ಸರಣಿ ಈಗ ಸಾಕಷ್ಟು ಕುತೂಹಲವನ್ನು ಮೂಡಿಸಿದೆ.
ಈ ಸರಣಿಯ ಮೊದಲ ಪಂದ್ಯದ ನೇರಪ್ರಸಾರ, ಸಮಯ, ದಿನಾಂಕ ಹಾಗೂ ಪಿಚ್ ವರದಿಯ ಸಂಪೂರ್ಣ ವಿವರಗಳು ಇಲ್ಲಿದೆ.

ಪಂದ್ಯದ ದಿನಾಂಕ ಮತ್ತು ಸಮಯ
ಭಾರತ ಹಾಗೂ ಇಂಗ್ಲೆಂಡ್ ನಡುವಿನ ಟಿ20 ಸರಣಿಯ ಮೊದಲ ಪಂದ್ಯ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಶುಕ್ರವಾರ ನಡೆಯಲಿದೆ. ಪಂದ್ಯ ಭಾರತೀಯ ಕಾಲಮಾನ ಸಂಜೆ 7 ಗಂಟೆಗೆ ಆರಂಭವಾಗಲಿದೆ. 6:30ಕ್ಕೆ ಟಾಸ್ ಪ್ರಕ್ರಿಯೆ ನಡೆಯಲಿದೆ.

ನೇರ ಪ್ರಸಾರದ ಮಾಹಿತಿ
ಈ ಪಂದ್ಯದ ನೇರಪ್ರಸಾರ ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ನಡೆಯಲಿದೆ. ಪಂದ್ಯದ ಲೈವ್‌ಸ್ಟ್ರೀಮಿಂಗ್ ಡಿಸ್ನಿ+ಹಾಟ್‌ಸ್ಟಾರ್‌ನಲ್ಲಿಯೂ ಪ್ರಸಾರವಾಗಲಿದೆ. ಜಿಯೋ ಟಿವಿ ಗ್ರಾಹಕರು ಕೂಡ ಈ ಪಂದ್ಯದ ನೇರಪ್ರಸಾರಗವನ್ನು ವೀಕ್ಷಣೆಗೆ ಅವಕಾಶವಿದೆ.

ಮೊಟೇರಾ ಪಿಚ್ ಮಾಹಿತಿ
ಇಂಗ್ಲೆಂಡ್ ವಿರುದ್ಧದ ಟೆಸ್ಟ್‌ನ ಮೂರನೇ ಹಾಗೂ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಮೊಟೇರಾ ಪಿಚ್ ಸ್ಪಿನ್ನರ್‌ಗಳಿಗೆ ಹೆಚ್ಚಿನ ನೆರವನ್ನು ನೀಡಿತ್ತು. ಆದರೆ ವೈಟ್‌ಬಾಲ್ ಮಾದರಿಯಲ್ಲಿ ಸ್ವಲ್ಪ ಬದಲಾವಣೆಯನ್ನು ನಿರೀಕ್ಷಿಸಬಹುದು ಎನ್ನಲಾಗಿದೆ. ಸೀಮಿತ ಓವರ್‌ಗಳಲ್ಲಿ ಈ ಪಿಚ್ ಬ್ಯಾಟ್ಸ್‌ಮನ್‌ಗಳಗೆ ನೆರವಾಗುವ ನಿರೀಕ್ಷೆಯಿದೆ.

ಟೀಮ್ ಇಂಡಿಯಾ ಸಂಪೂರ್ಣ ತಂಡ
ವಿರಾಟ್ ಕೊಹ್ಲಿ (ಕ್ಯಾಪ್ಟನ್), ರೋಹಿತ್ ಶರ್ಮಾ (ಉಪನಾಯಕ), ಕೆ.ಎಲ್. ರಾಹುಲ್, ಶಿಖರ್ ಧವನ್, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ಹಾರ್ದಿಕ್, ರಿಷಭ್ ಪಂತ್ (ವಾರ), ಇಶಾನ್ ಕಿಶನ್ (ವಾರ), ಯುಜ್ವೇಂದ್ರ ಚಾಹಲ್, ವರುಣ್ ಚಕ್ರವರ್ತಿ, , ವಾಷಿಂಗ್ಟನ್ ಸುಂದರ್, ರಾಹುಲ್ ತಿವಾಟಿಯಾ, ಟಿ ನಟರಾಜನ್, ಭುವನೇಶ್ವರ್ ಕುಮಾರ್, ದೀಪಕ್ ಚಹರ್, ನವದೀಪ್ ಸೈನಿ, ಶಾರ್ದುಲ್ ಠಾಕೂರ್.

ಇಂಗ್ಲೆಂಡ್ ಸಂಪೂರ್ಣ ತಂಡ
ಇಯಾನ್ ಮಾರ್ಗನ್ (ನಾಯಕ), ಮೊಯೀನ್ ಅಲಿ, ಜೋಫ್ರಾ ಆರ್ಚರ್, ಜಾನಿ ಬೈರ್‌ಸ್ಟೋವ್ (ವಿಕೆಟ್ ಕೀಪರ್), ಸ್ಯಾಮ್ ಬಿಲ್ಲಿಂಗ್ಸ್, ಜೋಸ್ ಬಟ್ಲರ್ (ವಿಕೆಟ್ ಕೀಪರ್), ಸ್ಯಾಮ್ ಕರ್ರನ್, ಟಾಮ್ ಕರ್ರನ್, ಕ್ರಿಸ್ ಜೋರ್ಡಾನ್, ಲಿಯಾಮ್ ಲಿವಿಂಗ್‌ಸ್ಟೋನ್, ಡೇವಿಡ್ ಮಲನ್, ಆದಿಲ್ ರಶೀದ್, ಜೇಸನ್ ರಾಯ್, ಬೆನ್ ಸ್ಟೋಕ್ಸ್, ರೀಸ್ ಟೋಪ್ಲೆ, ಮಾರ್ಕ್ ವುಡ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications