
ಭಾರತ, ಇಂಗ್ಲೆಂಡ್ ಅಂಕಿಅಂಶಗಳು
ಇಂಗ್ಲೆಂಡ್ ತಂಡ ರೋಸ್ ಬೌಲ್ ಕ್ರೀಡಾಂಗನದಲ್ಲಿ ಈವರೆಗೆ 9 ಟಿ20 ಪಂದ್ಯಗಳನ್ನು ಆಡಿದೆ. ಇದರಲ್ಲಿ ಆರು ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದರೆ ಉಳಿದ ಮೂರು ಪಂದ್ಯಗಳಲ್ಲಿ ಸೋಲು ಕಂಡಿದೆ. ಭಾರತ ಈ ಕ್ರೀಡಾಂಗಣದಲ್ಲಿ ಈವರೆಗೆ ಯಾವುದೇ ಟಿ20 ಪಂದ್ಯಗಳನ್ನು ಆಡಿಲ್ಲ. ಆದರೆ ಐದು ಏಕದಿನ ಪಂದ್ಯಗಳನ್ನು ಆಡಿದೆ. ಇದರಲ್ಲಿ ಮೂರು ಪಂದ್ಯದಲ್ಲಿ ಗೆಲುವು ಸಾಧಿಸಿದ್ದರೆ ಎರಡು ಪಮದ್ಯದಲ್ಲಿ ಸೋಲು ಅನುಭವಿಸಿದೆ.

ಪಿಚ್ ರಿಪೋರ್ಟ್
ರೋಸ್ ಬೌಲ್ ಪಿಚ್ ಸಾಮಾನ್ಯವಾಗಿ ಫ್ಯಾಟ್ ಆಗಿದ್ದು ವೈಟ್ ಬಾಲ್ ಮಾದರಿಯಲ್ಲಿ ಬ್ಯಾಟಿಂಗ್‌ಗೆ ಸೂಕ್ತವಾಗಿದೆ. ಭಾರತ ಹಾಗೂ ಇಂಗ್ಲೆಂಡ್ ನಡುವಿನ ಟಿ20 ಪಂದ್ಯಕ್ಕೂ ಇದೇ ರೀತಿ ವರ್ತಿಸುವ ಸಾಧ್ಯತೆಯಿದೆ. ಇನ್ನು ಹುಲ್ಲನ್ನು ಹೊಂದಿಲ್ಲದ ಪಿಚ್ ಇದಾಗಿದ್ದು ಬೌಲರ್‌ಗಳಿಗೆ ಹವಾಮಾನ ಮಾತ್ರ ಸ್ವಲ್ಪ ಮಟ್ಟಿಗೆ ಸಹಾಯ ಮಾಡಬಹುದು. ಹೀಗಾಗಿ ಗುರುವಾರದಂದು ಹಯಸ್ಕೋರಿಂಗ್ ಪಂದ್ಯ ನಡೆಯುವುದರಲ್ಲಿ ಅನುಮಾನವಿಲ್ಲ.

ಹವಮಾನ ವರದಿ
ಸೌತಾಂಪ್ಟನ್‌ಲ್ಲಿ ಜುಲೈ 7 ಗುರುವಾರದಂದು 20 ಡಿಗ್ರಿ ಸೆಲ್ಸಿಯಸ್‌ನಷ್ಟು ಉಷ್ಣಾಂಶ ಇರಲಿದ್ದು ತಂಪಾದ ವಾತಾವರಣವಿರಲಿದೆ. ರಾತ್ರಿ ಶೇಕಡಾ 45ರಷ್ಟು ಮೋಡ ಕವಿದ ವಾತಾವರಣವಿರಲಿದ್ದು 0.2 ಮಿಮೀ ಮಳೆಯೊಂದಿಗೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಶೇಕಡಾ 2ರಷ್ಟಿದೆ. ಸಣ್ಣ ಪ್ರಮಾಣದಲ್ಲಿ ಮಳೆಯಾದರು ಕೂಡ ಪೂರ್ಣ ಪ್ರಮಾಣದಲ್ಲಿ ಪಂದ್ಯ ನಡೆಯಲು ಅಡ್ಡಿಯಾಗಲಾರದು ಎನ್ನುತ್ತಿದೆ ಹವಾಮಾನ ವರದಿ.

ಎರಡು ತಂಡಗಳ ಸ್ಕ್ವಾಡ್‌ಗಳು ಹೀಗಿದೆ
ಮೊದಲ ಪಂದ್ಯಕ್ಕೆ ಭಾರತದ ಸ್ಕ್ವಾಡ್: ರೋಹಿತ್ ಶರ್ಮಾ(ನಾಯಕ), ಇಶಾನ್ ಕಿಶನ್, ಋತುರಾಜ್ ಗಾಯಕ್ವಾಡ್, ಸಂಜು ಸ್ಯಾಮ್ಸನ್, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಾಹುಲ್ ತ್ರಿಪಾಠಿ, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ವೆಂಕಟೇಶ್ ಅಯ್ಯರ್, ಯುಜುವೇಂದ್ರ ಚಾಹಲ್, ಅಕ್ಷರ್ ಪಟೇಲ್, ರವಿ ಬಿಷ್ಣೋಯ್, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಅವೇಶ್ ಖಾನ್, ಅರ್ಶ್‌ದೀಪ್ ಸಿಂಗ್, ಉಮ್ರಾನ್ ಮಲಿಕ್
ಇಂಗ್ಲೆಂಡ್ ಸ್ಕ್ವಾಡ್: ಜೋಸ್ ಬಟ್ಲರ್(ನಾಯಕ), ಮೊಯಿನ್ ಅಲಿ, ಹ್ಯಾರಿ ಬ್ರೂಕ್, ಸ್ಯಾಮ್ ಕರನ್, ರಿಚರ್ಡ್ ಗ್ಲೀಸನ್, ಕ್ರಿಸ್ ಜೋರ್ಡನ್, ಲಿಯಾಮ್ ಲಿವಿಂಗ್‌ಸ್ಟನ್, ಡೇವಿಡ್ ಮಲನ್, ಟೈಮಲ್ ಮಿಲ್ಸ್, ಮ್ಯಾಥ್ಯೂ ಪಾರ್ಕಿನ್ಸನ್, ಜೇಸನ್ ರಾಯ್, ಫಿಲ್ ಸಾಲ್ಟ್, ರೀಸ್ ಟೋಪ್ಲಿ, ಡೇವಿಡ್ ವಿಲ್ಲಿ


Click it and Unblock the Notifications
