ಭಾರತ vs ಇಂಗ್ಲೆಂಡ್, Live: ರೂಟ್ ದ್ವಿಶತಕ, ಇಂಗ್ಲೆಂಡ್ ಬೃಹತ್ ಮೊತ್ತ

ಚೆನ್ನೈ: ಚೆನ್ನೈಯ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಭಾರತ ಮತ್ತು ಇಂಗ್ಲೆಂಡ್ ಮಧ್ಯೆ ಮೊದಲನೇ ಟೆಸ್ಟ್ ಪಂದ್ಯ ನಡೆಯುತ್ತಿದೆ. ಟಾಸ್ ಗೆದ್ದಿರುವ ಇಂಗ್ಲೆಂಡ್ ಬ್ಯಾಟಿಂಗ್ ಆಯ್ದುಕೊಂಡಿದ್ದು, ಡೊಮಿನಿಕ್ ಸಿಬ್ಲಿ ಅರ್ಧ ಶತಕ, ನಾಯಕ ಜೋ ರೂಟ್ ಅವರ ದ್ವಿಶತಕ, ಬೆನ್ ಸ್ಟೋಕ್ಸ್ ಅರ್ಧಶತಕದ ಕೊಡುಗೆ ತಂಡಕ್ಕೆ ಲಭಿಸಿದೆ. ಇಂಗ್ಲೆಂಡ್ 400+ ರನ್ ಕಲೆ ಹಾಕಿದೆ.
ಶುಕ್ರವಾರ (ಫೆಬ್ರವರಿ 5) ಮೊದಲನೇ ದಿನದಾಟದ ಅಂತ್ಯಕ್ಕೆ ಇಂಗ್ಲೆಂಡ್ 89.3 ಓವರ್‌ಗೆ 3 ವಿಕೆಟ್ ಕಳೆದು 263 ರನ್ ಗಳಿಸಿತ್ತು. ರೋರಿ ಬರ್ನ್ಸ್ 33, ಡೊಮಿನಿಕ್ ಸಿಬ್ಲಿ 87, ಜೋ ರೂಟ್ ಅಜೇಯ 128 ರನ್ ಗಳಿಸಿ ಆಡುತ್ತಿದ್ದರು. ಜಸ್‌ಪ್ರೀತ್ ಬೂಮ್ರಾಗೆ 2, ರವಿಚಂದ್ರನ್ ಅಶ್ವಿನ್‌ಗೆ 1 ವಿಕೆಟ್ ಲಭಿಸಿತ್ತು.
ಭಾರತ vs ಇಂಗ್ಲೆಂಡ್, 1ನೇ ಟೆಸ್ಟ್, Live ಸ್ಕೋರ್‌ಕಾರ್ಡ್
ಭಾರತ ಪ್ಲೇಯಿಂಗ್ XI: ರೋಹಿತ್ ಶರ್ಮಾ, ಶುಬ್ಮನ್ ಗಿಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ (ಸಿ), ಅಜಿಂಕ್ಯ ರಹಾನೆ, ರಿಷಭ್ ಪಂತ್ (ವಿಕೆ), ವಾಷಿಂಗ್ಟನ್ ಸುಂದರ್, ರವಿಚಂದ್ರನ್ ಅಶ್ವಿನ್, ಶಹಬಾಜ್ ನದೀಮ್, ಇಶಾಂತ್ ಶರ್ಮಾ, ಜಸ್ಪ್ರೀತ್ ಬೂಮ್ರಾ.
ಇಂಗ್ಲೆಂಡ್ ಪ್ಲೇಯಿಂಗ್ XI: ರೋರಿ ಬರ್ನ್ಸ್, ಡೊಮಿನಿಕ್ ಸಿಬ್ಲಿ, ಡೇನಿಯಲ್ ಲಾರೆನ್ಸ್, ಜೋ ರೂಟ್ (ಸಿ), ಬೆನ್ ಸ್ಟೋಕ್ಸ್, ಆಲ್ಲಿ ಪೋಪ್, ಜೋಸ್ ಬಟ್ಲರ್ (ವಿಕೆ), ಡೊಮಿನಿಕ್ ಬೆಸ್, ಜೋಫ್ರಾ ಆರ್ಚರ್, ಜ್ಯಾಕ್ ಲೀಚ್, ಜೇಮ್ಸ್ ಆ್ಯಂಡರ್ಸನ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications