ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

1ನೇ ಟೆಸ್ಟ್ : ಮೊದಲ ದಿನದ ಅಂತ್ಯಕ್ಕೆ ಇಂಗ್ಲೆಂಡ್ 285/9

IND vs END 1st test : ಮೊದಲ ದಿನದ ಹೈಲೈಟ್ಸ್ | Oneindia kannada
India vs England 1st Test live Cricket Streaming

ಬರ್ಮಿಂಗ್ ಹ್ಯಾಮ್, ಆಗಸ್ಟ್ 1: ಬರ್ಮಿಂಗ್ ಹ್ಯಾಮ್ ನ ಎಜ್ ಬಾಸ್ಟನ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯದ ಮೊದಲ ದಿನದ ಅಂತ್ಯಕ್ಕೆ ನಾಯಕ ಜೋ ರೂಟ್ (80) ಹಾಗೂ ಜಾನಿ ಬೈರ್ಸ್ಟೋ(70) ಅವರ ಅರ್ಧಶತಕಗಳ ನೆರವಿನಿಂದ 285/9 ಸ್ಕೋರ್ ಮಾಡಿದೆ.

ಟಾಸ್ ಗೆದ್ದು ಬ್ಯಾಟಿಂಗ್ ಗೆ ಇಳಿದ ಇಂಗ್ಲೆಂಡ್ ನಿಂದ ಉತ್ತಮ ಬ್ಯಾಟಿಂಗ್ ಕಂಡು ಬರಲಿಲ್ಲ. ಅಲೆಸ್ಟೇರ್ ಕುಕ್ 13 (28) ಪೇರಿಸಿ ಔಟಾದರು. ಕೀಟನ್ ಜೆನ್ನಿಂಗ್ಸ್ (42/98) ಕೊಂಚ ಆಟವಾಡಿದರು. ಆದರೆ ನಾಯಕ ರೂಟ್ (80/156), ಬೇರ್ಸ್ಟೋವ್ (70/88) ತಂಡದ ಮೊತ್ತ ಏರಿಸುವಲ್ಲಿ ನೆರವಾದರು.

ಈ ಮೂವರನ್ನು ಬಿಟ್ಟರೆ ಇಂಗ್ಲೆಂಡ್ ನ ಉಳಿದ ಯಾರೂ 25 ರನ್ ದಾಟಿಸಲಿಲ್ಲ. ಸ್ಯಾಮ ಕರ್ರನ್ (24/67) ಮತ್ತು ಜೇಮ್ಸ್ ಆ್ಯಂಡರ್ಸನ್ (0/9) ಕ್ರೀಸ್ ನಲ್ಲಿದ್ದಾರೆ.

ಭಾರತ ಪರ ರವಿಚಂದ್ರನ್ ಅಶ್ವಿನ್ ಮಿಂಚಿ 4ವಿಕೆಟ್ ಕಿತ್ತರೆ, ಮೊಹಮ್ಮದ್ ಶಮಿ 2, ಉಮೇಶ್ ಹಾಗೂ ಇಶಾಂತ್ ತಲಾ 1ವಿಕೆಟ್ ಗಳಿಸಿ, ಇಂಗ್ಲೆಂಡ್ ರನ್ ಗತಿಯನ್ನು ನಿಯಂತ್ರಿಸಿದರು.

ಪಂದ್ಯದ Live Score ಕೆಳಗಿದೆ. ಸ್ಕೋರ್ ಕಾರ್ಡ್ ಗಾಗಿ ಕೆಳಗಿನ ಲಿಂಕ್ ಕ್ಲಿಕ್ ಮಾಡಿ.

1
42374

ಭೋಜನ ವಿರಾಮದ ವೇಳೆಗೆ 1 ವಿಕೆಟ್ ಕಳೆದುಕೊಂಡು 83 ರನ್ ಗಳಿಸಿದ್ದ ಇಂಗ್ಲೆಂಡ್, ತಂಡದ ಮೊತ್ತ 98 ರನ್ ಆಗಿದ್ದಾಗ ಕೀಟನ್ ಜೆನ್ನಿಂಗ್ಸ್ (42) ವಿಕೆಟ್ ಕಳೆದುಕೊಂಡಿತು.

ಮಹಮ್ಮದ್ ಶಮಿ ಬೌಲಿಂಗ್‌ನಲ್ಲಿ ಅವರ ಕಾಲಿಗೆ ಬಡಿದ ಚೆಂಡು ನಿಧಾನವಾಗಿ ಉರುಳಿ ವಿಕೆಟ್‌ಗೆ ತಗುಲಿ ಬೇಲ್ಸ್ ಉರುಳಿಸಿತು. ಕೆಲ ಹೊತ್ತಿನಲ್ಲೇ 8 ರನ್ ಗಳಿಸಿದ್ದ ಡವಿಡ್ ಮಲಾನ್ ಅವರನ್ನು ಶಮಿ ಎಲ್‌ಬಿಡಬ್ಲ್ಯೂ ಬಲೆಗೆ ಕೆಡವಿದರು.

ಬಳಿಕ ರೂಟ್ ಹಾಗೂ ಬೈರ್‌ಸ್ಟೋ ಜೋಡಿ ಭಾರತದ ಬೌಲರ್‌ಗಳನ್ನು ಕಾಡಿದರು.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಇಂಗ್ಲೆಂಡ್ ಉತ್ತಮ ಆರಂಭ ಪಡೆದುಕೊಳ್ಳುವ ಸೂಚನೆ ನೀಡಿತು. ಆದರೆ, ಆಫ್‌ ಸ್ಪಿನ್ನರ್ ಆರ್. ಅಶ್ವಿನ್ ಅವರ ಅದ್ಭುತ ಎಸೆತಕ್ಕೆ ಆರಂಭಿಕ ಆಟಗಾರ ಅಲೆಸ್ಟರ್ ಕುಕ್ ಬೌಲ್ಡ್ ಆದರು.

ಕೊನೆಯ ಬಾರಿಗೆ 2014ರಲ್ಲಿ ಇಂಗ್ಲೆಂಡ್ ಪ್ರವಾಸದ ವೇಳೆ ಭಾರತ ಐದು ಪಂದ್ಯಗಳ ಟೆಸ್ಟ್ ಸರಣಿಯನ್ನು (ಒಂದು ಪಂದ್ಯ ಡ್ರಾದೊಂದಿಗೆ) 3-1ರಿಂದ ಸೋತಿತ್ತು.

ಈ ಬಾರಿ ಇಂಗ್ಲೆಂಡ್ ನ 1000ನೇ ಪಂದ್ಯದಲ್ಲಿ ಭಾರತ ಕಣಕ್ಕಿದಿರುವುದು ಮತ್ತೊಂದು ವಿಶೇಷ. ಇಂಗ್ಲೆಂಡ್ ವೇಗಿ ಜೇಮ್ಸ್ ಆ್ಯಂಡರ್ಸನ್ ಅವರು ವಿರಾಟ್ ಕೊಹ್ಲಿಯ ಕಾಲೆಳೆದಿರುವುದರಿಂದ ಇಂದಿನ ಪಂದ್ಯದ ಮೇಲಿನ ಕುತೂಹಲ ಹೆಚ್ಚಿದೆ.

ಭಾರತ ತಂಡದಲ್ಲಿ ಟೆಸ್ಟ್ ಕ್ರಿಕೆಟ್‌ಗೆ ಹೆಸರಾದ ಚೇತೇಶ್ವರ ಪೂಜಾರ ಅವರಿಗೆ ಸ್ಥಾನ ನೀಡದೆ ಇರುವುದು ಅಚ್ಚರಿ ಮೂಡಿಸಿದೆ.

ಭಾರತ ತಂಡ
ವಿರಾಟ್ ಕೊಹ್ಲಿ (ನಾಯಕ), ಶಿಖರ್ ಧವನ್, ಕೆಎಲ್ ರಾಹುಲ್, ಮುರಳಿ ವಿಜಯ್, ಅಜಿಂಕ್ಯ ರಹಾನೆ (ಉಪನಾಯಕ), ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಆರ್ ಅಶ್ವಿನ್, ಇಶಾಂತ್ ಶರ್ಮಾ, ಮೊಹಮ್ಮದ್ ಶಮಿ, ಉಮೇಶ್ ಯಾದವ್

ಇಂಗ್ಲೆಂಡ್ ತಂಡ
ಅಲೆಸ್ಟರ್ ಕುಕ್, ಕೀಟನ್ ಜೆನ್ನಿಂಗ್ಸ್, ಜೋ ರೂಟ್ (ನಾಯಕ), ಡವಿಡ್ ಮಲಾನ್, ಜಾನಿ ಬೈರ್ಸ್ಟೊ (ವಿಕೆಟ್ ಕೀಪರ್), ಬೆನ್ ಸ್ಟೋಕ್ಸ್, ಜೋಸ್ ಬಟ್ಲರ್, ಸ್ಯಾಮ್ ಕ್ಯುರ್ರನ್, ಆದಿಲ್ ರಶೀದ್, ಸ್ಟುವರ್ಟ್ ಬ್ರಾಡ್, ಜೇಮ್ಸ್ ಆಂಡರ್ಸನ್.

Story first published: Wednesday, August 1, 2018, 23:56 [IST]
Other articles published on Aug 1, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X