ಭಾರತ vs ಇಂಗ್ಲೆಂಡ್ 1ನೇ ಟೆಸ್ಟ್: ಸಮಯ, ನೇರ ಪ್ರಸಾರ ಯಾವುದರಲ್ಲಿ?

ಬರ್ಮಿಂಗ್ ಹ್ಯಾಮ್, ಜುಲೈ 31: ಬರ್ಮಿಂಗ್ ಹ್ಯಾಮ್ ನ ಎಜ್ ಬಾಸ್ಟ್ನ್ ನಲ್ಲಿ ಬುಧವಾರ ಆಗಸ್ಟ್ 1ರಿಂದ ಆರಂಭವಾಗಲಿರುವ ಇಂಗ್ಲೆಂಡ್-ಭಾರತ ನಡುವಣ ಐದು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯವನ್ನು ಗೆದ್ದುಕೊಳ್ಳುವತ್ತ ಭಾರತ ಕಣ್ಣಿಟ್ಟಿದೆ.
ಈವರೆಗೆ 999 ಟೆಸ್ಟ್ ಪಂದ್ಯಗಳನ್ನು ಆಡಿದ ದಾಖಲೆ ಹೊಂದಿರುವ ಆಂಗ್ಲರಿಗೆ ಎಜ್ ಬಾಸ್ಟನ್ ನಲ್ಲಿನ ಪಂದ್ಯ 1000ನೆಯದು. ಹಾಗಾಗಿ ಸಹಜವಾಗೇ ಇಂಗ್ಲೆಂಡ್ ಸರಣಿಯನ್ನು ಅದರಲ್ಲೂ ಮೊದಲ (1000ನೇ) ಪಂದ್ಯವನ್ನು ಗೆದ್ದುಕೊಂಡು ಇತಿಹಾಸ ಬರೆಯುವ ಹುಮ್ಮಸ್ಸಿನಲ್ಲಿದೆ.
2014ರಲ್ಲಿ ಧೋನಿ ನಾಯಕತ್ವದಲ್ಲಿ ಭಾರತ ಕೊನೆಯಸಾರಿ ಇಂಗ್ಲೆಂಡ್ ಪ್ರವಾಸ ಕೈಗೊಂಡಿತ್ತು. ಆಗ ಐದು ಪಂದ್ಯಗಳ ಸರಣಿಯನ್ನು ಭಾರತ 3-1ರಿಂದ ಸೋತಿತ್ತು. ಒಂದು ಪಂದ್ಯವನ್ನು ಡ್ರಾಗೊಳಿಸಿಕೊಂಡಿತ್ತು. ಆದರೆ ಈ ಬಾರಿ ಭಾರತ ಗೆಲ್ಲಲು ಶಕ್ತವಾಗಿದ್ದು, ಪಂದ್ಯ ಗೆದ್ದುಕೊಳ್ಳುವ ವಿಶ್ವಾಸದಲ್ಲಿಯೂ ಇದೆ.
ಇಂಗ್ಲೆಂಡ್ ಪ್ರವಾಸದಲ್ಲಿರುವ ಭಾರತ ಆಂಗ್ಲರೆದುರಿನ ಟಿ20 ಸರಣಿಯನ್ನು ಭಾರತ 2-1ರಿಂದ ಜಯಿಸಿತ್ತು. ಆದರೆ ಇಂಗ್ಲೆಂಡ್ ಏಕದಿನ ಸರಣಿಯನ್ನು 2-1ರಿಂದ ವಶಪಡಿಸಿಕೊಂಡು ಭಾರತದೆದುರು ಮುಯ್ಯಿ ತೀರಿಸಿಕೊಂಡಿತ್ತು. ಹಾಗಾಗಿ ಈ ಟೆಸ್ಟ್ ಸರಣಿ ಇತ್ತಂಡಗಳಿಗೆ ಪ್ರತಿಷ್ಠೆಯಾಗಿದ್ದು, ಬಹಳಷ್ಟು ಕುತೂಹಲ ಮೂಡಿಸಿದೆ.
ಪಂದ್ಯ ಆಗಸ್ಟ್ 1ರ ನಾಳೆ ಭಾರತೀಯ ಕಾಲಮಾನ 3.30pm ಗೆ ಆರಂಭಗೊಳ್ಳಲಿದೆ. ಸೋನಿ ಸಿಕ್ಸ್, ಸೋನಿ ಟೆನ್ 3, ಸೋನಿ ಟೆನ್ 3 ಎಚ್ಡಿ ಚಾನೆಲ್ ಗಳಲ್ಲಿ ಪಂದ್ಯ ನೇರಪ್ರಸಾರಗೊಳ್ಳಲಿದೆ. ನೆಟ್ಟಿಗ ಕ್ರಿಕೆಟ್ ಅಭಿಮಾನಿಗಳಿಗಾಗಿ ಸೋನಿ ಲೈವ್ ಪಂದ್ಯವನ್ನು ನೇರ ಪ್ರಸಾರಗೊಳಿಸಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications