For Quick Alerts
ALLOW NOTIFICATIONS  
For Daily Alerts
 

ಚೊಚ್ಚಲ ವಿಕೆಟ್‌ ಆಗಿ ರೂಟ್ ಬಲಿ ಪಡೆದಿರುವುದು ಅತ್ಯಂತ ಖುಷಿ ನೀಡಿದೆ: ಅಕ್ಷರ್ ಪಟೇಲ್

India vs England 2021: Axar Patel extremly happy for get Joe Root wicket

ಟೀಮ್ ಇಂಡಿಯಾ ಪರವಾಗಿ ಪದಾರ್ಪಣಾ ಪಂದ್ಯದಲ್ಲಿ ಕಣಕ್ಕಿಳಿದಿರುವ ಅಕ್ಷರ್ ಪಟೇಲ್ ಬೌಲಿಂಗ್‌ನಲ್ಲಿ ಗಮನಾರ್ಹ ಸಾಧನೆ ಮಾಡಿದ್ದಾರೆ. ಮೊದಲ ಇನ್ನಿಂಗ್ಸ್‌ನಲ್ಲಿ ಅಕ್ಷರ್ ಪಟೇಕ್ 2 ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅದರಲ್ಲಿ ಒಂದು ಇಂಗ್ಲೆಂಡ್ ನಾಯಕ ಜೋ ರೂಟ್ ಅವರ ವಿಕೆಟ್. ಈ ಬಗ್ಗೆ ಅಕ್ಷರ್ ಪಟೇಲ್ ಸಂತಸ ವ್ಯಕ್ತಪಡಿಸಿದ್ದಾರೆ.

ಭಾನುವಾರ ಬ್ಯಾಟಿಂಗ್‌ಗೆ ಇಳಿದ ಜೋ ರೂಟ್ ಅಕ್ಷರ್ ಪಟೇಲ್ ಎಸೆತವನ್ನು ಸ್ವೀಪ್ ಮಾಡುವ ಪ್ರಯತ್ನ ನಡೆಸಿದರು. ಆದರೆ ಇದು ವಿಫಲವಾಗಿ ರವಿ ಚಂದ್ರನ್ ಅಶ್ವಿನ್ ಸುಲಭ ಕ್ಯಾಚ್ ಪಡೆಯುವ ಮೂಲಕ ಬಲಿಯಾದರು. ಈ ಮೂಲಕ ಅದ್ಭುತ ಫಾರ್ಮ್‌ನಲ್ಲಿರುವ ಜೋ ರೂಟ್ ಕೇವಲ 6 ರನ್‌ಗಳಿಗೆ ಔಟ್ ಆಗಿ ಫೆವಿಲಿಯನ್ ಸೇರಿಕೊಂಡರು. ಈ ಮೂಲಕ ಟೀಮ್ ಇಂಡಿಯಾಗೆ ದೊಡ್ಡ ಯಶಸ್ಸನ್ನು ನೀಡಿದರು ಅಕ್ಷರ್ ಪಟೇಲ್.

"ಮೊದಲ ಟೆಸ್ಟ್ ಪಂದ್ಯವನ್ನು ನಾನು ಗಮನಿಸಿದಾಗ ಜೋ ರೂಟ್ ಹೆಚ್ಚಿನದಾಗಿ ಸ್ವೀಪ್ ಹಾಗೂ ರಿವರ್ಸ್ ಸ್ವೀಪ್ ಹೊಡೆತಗಳನ್ನು ಬಾರಿಸುವುದನ್ನು ಗಮನಿಸಿದ್ದೆ. ಹೀಗಾಗಿ ವೇಗದ ಮೂಲಕ ಚೆಂಡನ್ನು ಎಸೆದು ಆತನನ್ನು ಔಟ್ ಮಾಡಬಹುದು ಎನಿಸಿತ್ತು. ಹಾಗೂ ಆತನನ್ನು ಔಟ್ ಮಾಡುವ ಮೂಲಕ ನನ್ನ ಮೊದಲ ವಿಕೆಟ್ ಪಡೆಯಬೇಕೆಂದು ಬಯಸಿದ್ದೆ" ಎಂದಿದ್ದಾರೆ ಅಕ್ಷರ್ ಪಟೇಲ್.

"ಜೋ ರೂಟ್ ಸ್ವೀಪ್ ಮಾಡಲು ಮುಂದಾದರೆ ಎಲ್‌ಬಿ ಬಲೆಗೆ ಬೀಳುವ ಸಾಧ್ಯತೆಯಿದೆ ಎಂದು ಭಾವಿಸಿದ್ದೆ. ಆದರೆ ಉತ್ತಮ ಫಾರ್ಮ್‌ನಲ್ಲಿರುವ ಜೋ ರೂಟ್ ಸ್ವೀಟ್ ಹೊಡೆತದಲ್ಲಿ ತಪ್ಪೆಸಗಿ ವಿಕೆಟ್ ಒಪ್ಪಿಸಿದರು. ಈ ವಿಕೆಟ್ ಪಡೆದಾಗ ನಾನು ಎಷ್ಟು ಸಂತಸಗೊಂಡಿದ್ದೆ ಎಂಬುದನ್ನು ನೀವು ವಿಡಿಯೋದಲ್ಲಿ ಗಮನಿಸಬಹುದು" ಎಂದು ಅಕ್ಷರ್ ಪಟೇಲ್ ಹೇಳಿದ್ದಾರೆ.

ಭಾರತದ ವಿರುದ್ಧ ಮೊದಲ ಟೆಸ್ಟ್ ಪಂದ್ಯದಲ್ಲಿ ಜೋ ರೂಟ್ ಅದ್ಭುತವಾದ ದ್ವಿಶತಕ ಸಿಡಿಸಿದ್ದರು. ಹೀಗಾಘಿ ಜೋ ರೂಟ್ ವಿಕೆಟ್ ಟೀಮ್ ಇಂಡಿಯಾಗೆ ಬಹಳ ಪ್ರಮುಖವಾಗಿತ್ತು. ಅಕ್ಷರ್ ಪಟೇಲ್ ಜೋ ರುಟ್ ಜೊತೆಗೆ ಆಲ್‌ರೌಮಡರ್ ಮಿಯೀನ್ ಲಿ ವಿಕೆಟ್ ಕೂಡ ಪಡೆಯುವಲ್ಲಿ ಯಶಸ್ವಿಯಾಗಿದ್ದರು. 20 ಓವರ್‌ಗಳಲ್ಲಿ 40 ರನ್ ನೀಡಿ 2 ವಿಕೆಟ್ ಪಡೆದಿದ್ದಾರೆ ಅಕ್ಷರ್ ಪಟೇಲ್

Story first published: Monday, February 15, 2021, 11:42 [IST]
Other articles published on Feb 15, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+