ಭಾರತ vs ಇಂಗ್ಲೆಂಡ್ 1st t20: ದಾಖಲೆ ಬರೆದ ಪ್ರೇಕ್ಷಕರ ಹಾಜರಾತಿ

ಭಾರತ ಹಾಗೂ ಇಂಗ್ಲೆಂಡ್ ನಡುವಿನ ಐದು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯ ಶುಕ್ರವಾರ ಅಹ್ಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದಿದೆ. ಈ ಪಂದ್ಯಕ್ಕೆ ಕ್ರೀಡಾಂಗಣದಲ್ಲಿ 57,000 ಪ್ರೇಕ್ಷಕರು ಕ್ರೀಡಾಂಗಣದಲ್ಲಿ ಹಾಜರಿದ್ದು ಇದು ಕೊರೊನಾ ವೈರಸ್‌ನ ಬಳಿಕ ಕ್ರೀಡಾ ಚಟುವಟಿಕೆಗಳು ಆರಂಭವಾದ ನಂತರ ಕ್ರೀಡಾಂಗಣದಲ್ಲಿ ದಾಖಲಾದ ಗರಿಷ್ಠ ಪ್ರೇಕ್ಷಕರ ಸಂಖ್ಯೆ ಎಂದು ಗುಜರಾತ್ ಕ್ರಿಕೆಟ್ ಅಸೊಸಿಯೇಶನ್ ಹೇಳಿದೆ.
ಆದರೆ ಈ ಪಂದ್ಯ ಭಾರತೀಯ ಕ್ರಿಕೆಟ್ ಪ್ರೇಮಿಗಳಿಗೆ ನಿರಾಸೆಯನ್ನು ಮೂಡಿಸಿದೆ. ಭಾರತ ಈ ಬಹುನಿರೀಕ್ಷಿತ ಪಂದ್ಯವನ್ನು 8 ವಿಕೆಟ್‌ಗಳಿಂದ ಸುಲಭವಾಗಿ ಪ್ರವಾಸಿ ತಂಡಕ್ಕೆ ಶರಣಾಯಿತು. ಐದು ಪಂದ್ಯಗಳ ಈ ಸರಣಿಯ ಎರಡನೇ ಪಂದ್ಯವೂ ಇದೇ ಅಂಗಳದಲ್ಲಿ ಭಾನುವಾರ ನಡೆಯಲಿದೆ. ಚುಟುಕು ಸರಣಿಯ ಐದು ಪಂದ್ಯಗಳಿಗೂ ಮೊಟೇರಾ ಕ್ರೀಡಾಂಗಣವೇ ಆತಿಥ್ಯ ವಹಿಸಲಿದೆ.
ವಿಶ್ವಾದ್ಯಂತ ಸಾಕಷ್ಟು ಕ್ರೀಡಾಂಗಣಗಳಲ್ಲಿ ಪಂದ್ಯಗಳು ನಡೆದಿದೆ. ಆದರೆ ಈವರೆಗೆ ಮೊಟೇರಾ ಕ್ರೀಡಾಂಗಣದಲ್ಲಿ ಹಾಜರಾದ ಸಂಖ್ಯೆಯ ಪ್ರೇಕ್ಷಕರ ಸಮೀಪಕ್ಕೂ ಎಲ್ಲೂ ದಾಖಲಾಗಿಲ್ಲ. ಮೋಟೇರಾ ಕ್ರೀಡಾಂಗಣ 1,10,000 ಪ್ರೇಕ್ಷಕರ ಸಾಮರ್ಥ್ಯವನ್ನು ಹೊಂದಿದ್ದು 50 ಶೇಕಡಾ ಪ್ರೇಕ್ಷಕರಿಗೆ ಅವಕಾಶವನ್ನು ನೀಡಲಾಗಿದೆ.
"ಟಿಕೆಟ್‌ಗಳ ಮೂಲಕ ನಾವು 52,000 ಪ್ರೇಕ್ಷಕರಿಗೆ ಅವಕಾಶವನ್ನು ನೀಡಿದ್ದೇವೆ. ಇದರ ಜೊತೆಗೆ 3000-4000 ಪೊರಕ ಟಿಕೆಟ್‌ಗಳು ಕೂಡ ಇದ್ದವು. ಉಳಿದಂತೆ ಪೊಲೀಸರು ಹಾಗೂ ಸ್ವಯಂಸೇವಕರು ಸೇರಿ ಒಟ್ಟು 57,000 ಪ್ರೇಕ್ಷಕರು ಈ ಪಂದ್ಯಕ್ಕೆ ಸಾಕ್ಷಿಯಾಗಿದ್ದಾರೆ" ಎಂದು ಗುಜರಾತ್ ಕ್ರಿಕೆಟ್ ಅಸೊಸಿಯೇಶನ್‌ನ ಜೊತೆ ಕಾರ್ಯದರ್ಶಿ ಅನಿಲ್ ಪಟೇಲ್ ಹೇಳಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications